ADVERTISEMENT

ಆಂಧ್ರದಲ್ಲಿ ಅಪಘಾತ: ಕಿರುತೆರೆ ನಟಿ ಪವಿತ್ರಾ ಜಯರಾಂ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2024, 9:10 IST
Last Updated 12 ಮೇ 2024, 9:10 IST
<div class="paragraphs"><p>ಪವಿತ್ರಾ ಜಯರಾಂ</p></div>

ಪವಿತ್ರಾ ಜಯರಾಂ

   

ಮಂಡ್ಯ: ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿದ್ದ, ತಾಲ್ಲೂಕಿನ ಹನಕೆರೆ ಗ್ರಾಮದ ನಟಿ ಪವಿತ್ರಾ ಜಯರಾಂ (35) ಅವರು ಆಂಧ್ರಪ್ರದೇಶದ ಮೆಹಬೂಬ ನಗರದ ಬಳಿ ಭಾನುವಾರ ನಸುಕಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟರು.

ಶೂಟಿಂಗ್‌ ಸಲುವಾಗಿ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಬಸ್‌ ನಡುವೆ ಡಿಕ್ಕಿಯಾಗಿ, ಅವರು ಸ್ಥಳದಲ್ಲೇ ಮೃತಪಟ್ಟರು. ಚಾಲಕ ಸೇರಿ ಮೂವರು ತೀವ್ರವಾಗಿ ಗಾಯಗೊಂಡರು. ಗ್ರಾಮದಲ್ಲಿರುವ ಸಂಬಂಧಿಕರು ಘಟನೆಯನ್ನು ದೃಢಪಡಿಸಿದ್ದು, ಮೃತದೇಹ ತರಲು ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ.

ADVERTISEMENT

ಪವಿತ್ರಾ ಅವರು ಕನ್ನಡದಲ್ಲಿ ‘ಜೋಕಾಲಿ’, ‘ರೋಬೊ ಫ್ಯಾಮಿಲಿ’, ‘ರಾಧಾ ರಮಣ’, ‘ನೀಲಿ’ ಧಾರಾವಾಹಿಗಳಲ್ಲಿ ನಟಿಸಿದ್ದರು. ತೆಲುಗಿನ ‘ತ್ರಿನಯಿನಿ’ ಧಾರಾವಾಹಿಯಲ್ಲಿ ತಿಲೋತ್ತಮೆ ಪಾತ್ರದ ಮೂಲಕ ಪ್ರಸಿದ್ದಿ ಪಡೆದಿದ್ದರು. ನಂತರ ಅವರು ಹೆದರಾಬಾದ್‌ನಲ್ಲಿ ನೆಲೆಸಿದ್ದರು. ಅವರಿಗೆ ಪತಿ, ಪುತ್ರ, ಪುತ್ರಿ ಹಾಗೂ ತಾಯಿ ಇದ್ದಾರೆ.

‘ಸಾಮಾನ್ಯ ಕುಟುಂಬದಿಂದ ಬಂದಿದ್ದ ಪವಿತ್ರಾ ಕಷ್ಟಪಟ್ಟು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದರು. ಆಂಧ್ರದಲ್ಲಿ ಯಶಸ್ವಿ ನಟಿಯಾಗಿ, ಮನೆಮಾತಾಗಿದ್ದರು. ನನ್ನ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಲು ನಿರ್ಧರಿಸಿದ್ದೆ. ಆದರೆ ಈಗ ಅಗಲಿಕೆಯ ನೋವಷ್ಟೇ ಉಳಿದಿದೆ’ ಎಂದು ಅವರ ಗೆಳತಿ, ಲೇಖಕಿ ಭವಾನಿ ಲೋಕೇಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.