ADVERTISEMENT

ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ ಆರೋಪಿಗೆ ಜಾಮೀನು

ಪಿಟಿಐ
Published 4 ಮಾರ್ಚ್ 2023, 13:54 IST
Last Updated 4 ಮಾರ್ಚ್ 2023, 13:54 IST
ತುನಿಷಾ ಶರ್ಮಾ
ತುನಿಷಾ ಶರ್ಮಾ   

ಪಾಲ್ಘರ್: ಕಿರುತೆರೆ ನಟಿ ತುನಿಷಾ ಶರ್ಮಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧನವಾಗಿದ್ದ ಸಹ ನಟ ಶೀಜನ್ ಮೊಹಮ್ಮದ್ ಖಾನ್ ಅವರಿಗೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.

ಒಂದು ಲಕ್ಷ ರೂಪಾಯಿ ಶ್ಯೂರಿಟಿ ಮೇರೆಗೆ ಶೀಜನ್ ಖಾನ್ ಅವರನ್ನು ಹೆಚ್ಚುವರಿ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಆರ್.ಡಿ. ದೇಶಪಾಂಡೆ ಬಿಡುಗಡೆ ಮಾಡಲು ಆದೇಶ ನೀಡಿದರು.

‘ನಟ ತನ್ನ ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು. ನ್ಯಾಯಾಲಯದ ಒಪ್ಪಿಗೆ ಇಲ್ಲದೇ ದೇಶ ಬಿಟ್ಟು ಹೋಗುವಂತಿಲ್ಲ’ ಎಂದೂ ನ್ಯಾಯಾಲಯವು ಷರತ್ತುಗಳನ್ನು ವಿಧಿಸಿದೆ.

ADVERTISEMENT

‘ಪ್ರಕರಣದ ಆರೋಪಪಟ್ಟಿ ಈಗಾಗಲೇ ಸಲ್ಲಿಕೆಯಾಗಿದ್ದು, ತನಿಖೆ ಮುಗಿದಿದೆ ಎಂಬುದು ಸೇರಿದಂತೆ ವಿವಿಧ ಆಧಾರದ ಮೇಲೆ ಅರ್ಜಿದಾರರು ಜಾಮೀನು ಕೋರಿದ್ದಾರೆ. ಈ ಪ್ರಕರಣವು ಭಾರತೀಯ ದಂಡ ಸಂಹಿತೆ ಸೆಕ್ಷನ್ (ಐಪಿಸಿ) 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುವುದಿಲ್ಲ’ ಎಂದೂ ಶೀಜನ್ ಪರ ವಕೀಲ ಶರದ್ ರೈ ಹೇಳಿದರು.

ಪಾಲ್ಘರ್‌ನ ವಾಲಿವ್ ಬಳಿಯ ಟಿ.ವಿ ಧಾರಾವಾಹಿಯ ಸೆಟ್‌ವೊಂದರಲ್ಲಿ 2022ರ ಡಿ. 24ರಂದು ತುನಿಷಾ ಶರ್ಮಾ ಆತ್ಮಹ‌ತ್ಯೆ ಮಾಡಿಕೊಂಡಿದ್ದರು. ತುನಿಷಾ ಅವರ ತಾಯಿ ನೀಡಿದ್ದ ದೂರಿನ ಮೇರೆಗೆ ಶೀಜನ್ ಖಾನ್ ಅವರನ್ನು ಮರುದಿನ ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.