ADVERTISEMENT

ಭಾರತದಲ್ಲಿ ನೆಟ್‌ಫ್ಲಿಕ್ಸ್ ಬಳಕೆ ಹೆಚ್ಚಳ: ಕಂಪನಿ ಹೇಳಿಕೆ

ಐಎಎನ್ಎಸ್
Published 20 ಏಪ್ರಿಲ್ 2022, 13:07 IST
Last Updated 20 ಏಪ್ರಿಲ್ 2022, 13:07 IST
ನೆಟ್‌ಫ್ಲಿಕ್ಸ್
ನೆಟ್‌ಫ್ಲಿಕ್ಸ್   

ನೆಟ್‌ಫ್ಲಿಕ್ಸ್ ತಿಂಗಳ ಚಂದಾದರದಲ್ಲಿ ಇಳಿಕೆ ಮಾಡಿದ ಬಳಿಕ ದೇಶದಲ್ಲಿನೆಟ್‌ಫ್ಲಿಕ್ಸ್ಬಳಕೆಯ ಸಮಯದಲ್ಲಿ ಹೆಚ್ಚಳವಾಗಿದೆ ಎಂದು ಕಂಪನಿ ಹೇಳಿದೆ.

ಕಳೆದ ವರ್ಷದ ಕೊನೆಯಲ್ಲಿ ದರ ಇಳಿಕೆ ಮಾಡಿದ್ದ ನೆಟ್‌ಫ್ಲಿಕ್ಸ್, ಹೆಚ್ಚಿನ ಸಂಖ್ಯೆಯ ಪ್ರಾದೇಶಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವತ್ತ ಒತ್ತು ನೀಡಿದೆ. ಇದರಿಂದಾಗಿ ನೆಟ್‌ಫ್ಲಿಕ್ಸ್ ಬಳಕೆಯಲ್ಲಿ ಏರಿಕೆ ಕಂಡುಬಂದಿದೆ. ಜನರು ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹೆಚ್ಚು ವೀಕ್ಷಿಸುತ್ತಿದ್ದಾರೆ ಎಂದು ಕಂಪನಿ ಹೇಳಿದೆ.

ಮೊದಲ ತ್ರೈಮಾಸಿಕ ವರದಿಯನ್ನು ಕಂಪನಿ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದಲ್ಲಿನ ನೆಟ್‌ಫ್ಲಿಕ್ಸ್ ಬಳಕೆಯಲ್ಲಿನ ಹೆಚ್ಚಳವನ್ನು ತಿಳಿಸಿದೆ.

ADVERTISEMENT

ನೆಟ್‌ಫ್ಲಿಕ್ಸ್ ಮೊಬೈಲ್ ಓನ್ಲಿ ಪ್ಲ್ಯಾನ್ ₹149 ಮತ್ತು ₹199 ತಿಂಗಳ ಆರಂಭಿಕ ದರದ ಪ್ಲ್ಯಾನ್ ಹೊಂದಿದ್ದು, ಅದರ ಮೂಲಕ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಜತೆಗೆ ಬಳಕೆಯ ಅವಧಿಯಲ್ಲೂ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.