PHOTOS | 70 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಚೀತಾ, ಫೋಟೊ ಕ್ಲಿಕ್ಕಿಸಿದ ಪ್ರಧಾನಿ ಮೋದಿ
'ಚೀತಾಗಳ ಮರುಪರಿಚಯ ಯೋಜನೆಯಡಿ' ನಮೀಬಿಯಾದಿಂದ ಭಾರತಕ್ಕೆ ತರಲಾದ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದ ವಿಶೇಷ ಆವರಣದಲ್ಲಿ ಬಿಡುಗಡೆ ಮಾಡಿದರು. (ಪಿಟಿಐ ಚಿತ್ರ)
ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 7:40 IST
Last Updated 17 ಸೆಪ್ಟೆಂಬರ್ 2022, 7:40 IST
ಸುಮಾರು ಏಳು ದಶಕಗಳ ಬಳಿಕ ಚೀತಾ ಭಾರತಕ್ಕೆ ಮರು ಪ್ರವೇಶಿಸಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದಂದೇ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡಿದ್ದಾರೆ.
ಒಂದು ಕಾಲದಲ್ಲಿ ಭಾರತ ಚೀತಾಗಳ ತವರೂರಾಗಿತ್ತು. ಆದರೆ ಹಲವಾರು ಕಾರಣಗಳಿಂದಾಗಿ 1952ರಲ್ಲಿ ಅಳಿವಿನಂಚಿನಲ್ಲಿದೆ ಎಂದು ಘೋಷಿಸಲಾಗಿತ್ತು.
ಚೀತಾಗಳ ಮರುಪರಿಚಯ ಯೋಜನೆಯಡಿ 70 ವರ್ಷಗಳ ಬಳಿಕ ಚೀತಾಗಳ ಪರಿಚಯವಾಗಿದೆ. (ಚಿತ್ರದಲ್ಲಿ: ಫೋಟೊ ಕ್ಲಿಕ್ಕಿಸಿದ ಪ್ರಧಾನಿ ಮೋದಿ)
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲಿ ದೇಶವು ಹೊಸ ಶಕ್ತಿಯೊಂದಿಗೆ ಚೀತಾಗಳಿಗೆ ಪುನರ್ವಸತಿ ಕಲ್ಪಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಜಾಗತಿಕವಾಗಿ ಸದ್ಯ 7,100 ಚೀತಾಗಳಷ್ಟೇ ಉಳಿದಿವೆ.
ಚೀತಾಗಳನ್ನು ಭಾರತಕ್ಕೆ ತರುವುದರ ಮೂಲಕ ಚೀತಾ ಸಂತತಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬೋಯಿಂಗ್ 747 ವಿಮಾನದ ಮೂಲಕ ಚೀತಾಗಳನ್ನು ತರಲಾಗಿದೆ.
ಅತ್ಯಂತ ವೇಗವಾಗಿ ಓಡುವುದಕ್ಕೆ ಚೀತಾ ಹೆಸರುವಾಸಿಯಾಗಿದೆ.
ಚೀತಾ ತನ್ನ ವೇಗವನ್ನು ಅರ್ಧ ನಿಮಿಷಕ್ಕೂ ಹೆಚ್ಚು ಹೊತ್ತು ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.