ADVERTISEMENT

ಗಿರ್‌ ಅರಣ್ಯದಲ್ಲಿ ಸಿಂಹಿಣಿಗೆ ಕಿರುಕುಳ: 7 ಮಂದಿಗೆ ಜೈಲು ಶಿಕ್ಷೆ

ಪಿಟಿಐ
Published 9 ಮಾರ್ಚ್ 2021, 6:44 IST
Last Updated 9 ಮಾರ್ಚ್ 2021, 6:44 IST
ಗಿರ್‌ ಅರಣ್ಯದ ಪ್ರಾತಿನಿಧಿಕ ಚಿತ್ರ (ಎಎಫ್‌ಪಿ)
ಗಿರ್‌ ಅರಣ್ಯದ ಪ್ರಾತಿನಿಧಿಕ ಚಿತ್ರ (ಎಎಫ್‌ಪಿ)   

ಗಿರ್ ಸೋಮನಾಥ್: 2018ರಲ್ಲಿ ಗಿರ್‌ ಅರಣ್ಯದಲ್ಲಿ ಸಿಂಹಿಣಿಯೊಂದಕ್ಕೆ ಕಿರುಕುಳ ನೀಡಿದ ಆರೋಪದ ಮೇಲೆ ಅಹಮದಾಬಾದ್‌ನ ಮೂವರು ಪ್ರವಾಸಿಗರು ಸೇರಿದಂತೆ ಏಳು ಮಂದಿಗೆ ಗುಜರಾತ್‌ನ ಗಿರ್ ಸೋಮನಾಥ ಜಿಲ್ಲಾ ನ್ಯಾಯಾಲಯಶಿಕ್ಷೆ ವಿಧಿಸಿದೆ.

ಗಿರ್ ಗಡಾದ ನ್ಯಾಯಾಲಯದ ನ್ಯಾಯಾಧೀಶ ಸುನಿಕ್ ಕುಮಾರ್ ದಾವೆ ಅವರು ಆರು ಆರೋಪಿಗಳಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದರೆ, ಮತ್ತೊಬ್ಬ ಆರೋಪಿಗೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಸೋಮವಾರ ಆದೇಶ ನೀಡಿದ್ದಾರೆ.

ಸಿಂಹಿಣಿಗೆ ಕಿರುಕುಳ ನೀಡಿದ ಪ್ರದೇಶವಾದ ಬಾಬರಿಯಾ ಅರಣ್ಯ ವಲಯದ ಧುಂಬಕಾರಿಯಾ ಪ್ರದೇಶದಲ್ಲಿ ಈ ಪ್ರಕರಣದ ಆರೋಪಿಯೊಬ್ಬರ ಕುಟುಂಬಕ್ಕೆ ಮಂಜೂರು ಮಾಡಿರುವ ಜಮೀನನ್ನು ವಶಕ್ಕೆ ಪಡೆಯುವಂತೆ ನ್ಯಾಯಾಲಯ ಜಿಲ್ಲಾಧಿಕಾರಿಗೆ ಸೂಚಿಸಿದೆ.

ADVERTISEMENT

ಸಿಂಹಿಣಿಯೊಂದಕ್ಕೆ ಕೋಳಿಯೊಂದರ ಆಮಿಷ ತೋರಿಸಿ, ಅದಕ್ಕೆ ಕಿರುಕುಳ ನೀಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆ ಸಂಬಂಧ 2018 ಮೇ ತಿಂಗಳಲ್ಲಿ ಎಂಟು ಜನರನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.