ನಾಗ್ಪುರ, ಮಹಾರಾಷ್ಟ್ರ: ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಗಡಿಗೆ ಹೊಂದಿಕೊಂಡಂತೆ ಇರುವ ಪೆಂಚ್ ನ್ಯಾಷನಲ್ ಪಾರ್ಕ್‌ನಲ್ಲಿ (ಹುಲಿ ಸಂರಕ್ಷಿತಾರಣ್ಯ) ಇದೇ ಮೊದಲ ಬಾರಿಗೆ ಅಪರೂಪದ ಲೆಪರ್ಡ್ ಕ್ಯಾಟ್ (ಚಿರತೆ ಮರಿ ಹೋಲುವ ಕಾಡು ಬೆಕ್ಕು) ಕಂಡು ಬಂದಿದೆ.
ಅರಣ್ಯದಲ್ಲಿ ಅಳವಡಿಸಿರುವ ಕ್ಯಾಮೆರಾಗಳಲ್ಲಿ ಲೆಪರ್ಡ್ ಕ್ಯಾಟ್ ಇರುವಿಕೆ ಕಂಡು ಬಂದಿದೆ ಎಂದು ಪೆಂಚ್ ನ್ಯಾಷನಲ್ ಪಾರ್ಕ್‌ನ ಉಪ ನಿರ್ದೇಶಕ ಪ್ರಭುನಾಥ್ ಶುಕ್ಲಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮಧ್ಯಭಾರತದಲ್ಲೇ ಇದೇ ಮೊದಲ ಬಾರಿಗೆ ಲೆಪರ್ಡ್ ಕ್ಯಾಟ್ ಕಂಡು ಬಂದಿರುವುದು ಪೆಂಚ್ ಅರಣ್ಯದಲ್ಲಿ ಎಂದು ಅವರು ವಿವರಿಸಿದ್ದಾರೆ.
ಈ ಲೆಪರ್ಡ್ ಕ್ಯಾಟ್‌ನ ವೈಜ್ಞಾನಿಕ ಹೆಸರು Prionailurus bengalensis. ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಹಾಗೂ ಪೂರ್ವ ಏಷ್ಯಾದಲ್ಲಿ ಇವು ನೈಸರ್ಗಿಕವಾಗಿ ಕಂಡು ಬರುತ್ತವೆ. ಆದರೆ, ಮಧ್ಯಭಾರತದಲ್ಲಿ ಕಂಡು ಬಂದಿರುವುದು ಇದೇ ಮೊದಲು ಎಂದು ಅವರು ವಿವರಿಸಿದ್ದಾರೆ.
ಇದನ್ನು ಅಳವಿನಂಚಿನಲ್ಲಿರುವ ಪ್ರಾಣಿ ಎಂದು ಗುರುತಿಸಲಾಗಿದ್ದು, ವಿಶೇಷವಾಗಿ ಇದು ಈಶಾನ್ಯ ಭಾರತ, ದಕ್ಷಿಣ ಭಾರತದ ಕೆಲವೆಡೆ ಅಸ್ತಿತ್ವದಲ್ಲಿದೆ ಎಂದು ಶುಕ್ಲಾ ತಿಳಿಸಿದ್ದಾರೆ.
ಭಾರತದಲ್ಲಿ 15 ಬಗೆಯ ಕಾಡು ಬೆಕ್ಕುಗಳು ಕಂಡು ಬರುತ್ತವೆ. ಅರಣ್ಯ ಸಂರಕ್ಷಣೆಗೆ ಮಹತ್ವದ ಕ್ರಮ ಕೈಗೊಂಡಿರುವುದರಿಂದ ವನ್ಯಜೀವಿಗಳ ಉಳಿವು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.