ಬೆಂಗಳೂರು: ಪರಿಸರದ ಸೂಕ್ಷ್ಮ ವಿಷಯಗಳನ್ನು ಅಧ್ಯಯನ ಸಾಹಿತ್ಯದ ಮೂಲಕ ಜನರಿಗೆ ತಿಳುವಳಿಕೆ ಮೂಡಿಸುತ್ತಿದ್ದ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟು ಹಬ್ಬದ ಅಂಗವಾಗಿ ‘ತೇಜಸ್ವಿ ಜೀವಲೋಕ’ದ 12ನೇ ಕಂತಿನಲ್ಲಿ ಮಿಂಚುಹುಳಗಳ ಬಗ್ಗೆ ಅರಿವು ಮೂಡಿಸುವ ಛಾಯಾಚಿತ್ರ- ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮ ನಗರದ ಚಿತ್ರಕಲಾ ಪರಿಷತ್‌ನಲ್ಲಿ ನಡೆಯಲಿದೆ.
‘ಮಿಣುಕು ಲೋಕ’ ಎನ್ನುವ ಈ ಕಾರ್ಯಕ್ರಮ ಸೆಪ್ಟೆಂಬರ್ 8 ರಿಂದ 15ರವರೆಗೆ ನಡೆಯಲಿದೆ. ಬೆಳಿಗ್ಗೆ 10.30ರಿಂದ ಸಂಜೆ 7 ಗಂಟೆವರೆಗೆ ಮಿಂಚುಹಳ ಆಧಾರಿತ ವಿವಿಧ ಪ್ರದರ್ಶನಗಳು ನಡೆಯಲಿವೆ.
ಮನುಷ್ಯನಿಗೂ ಸುಮಾರು ಹದಿನೈದು ಕೋಟಿ ವರ್ಷಗಳ ಹಿಂದೆಯೇ ಭೂಮಿಯಲ್ಲಿ ವಿಕಸನಗೊಂಡ ಮಿಂಚುಹುಳಗಳು ಪರಾಗಸ್ಪರ್ಶ ಮಾಡುತ್ತಾ, ಕೃಷಿಗೆ ಕಂಟಕವಾದವುಗಳನ್ನು ತಿನ್ನುತ್ತಾ, ಆಹಾರ ಭದ್ರತೆಗೂ ಸಹಕಾರಿಯಾಗಿವೆ.ಮಿಂಚುಹುಳುಗಳು ಇರುವಲ್ಲಿನ ಪರಿಸರ ಆರೋಗ್ಯಕರವಾಗಿರುತ್ತದೆ ಎಂಬುದು ಜನಸಾಮಾನ್ಯರ, ಸಂಶೋಧಕರ ಅಭಿಪ್ರಾಯ.
ಇಂಥ ಮಿಂಚುಹುಳದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬದ ದಿನದಂದೇ ಈ ಪ್ರದರ್ಶನ ಆರಂಭವಾಗಲಿದೆ. ಜನಸಾಮಾನ್ಯರಿಗೆ ಮಿಂಚುಹುಳುಗಳ ಕುರಿತು ಅರಿವು ಮೂಡಿಸಲು ಈ ಕಾರ್ಯಕ್ರಮವು ಒಂದು ಅತ್ಯುತ್ತಮ ವೇದಿಕೆ.
ಕಾರ್ಯಕ್ರಮ ದಿನಾಂಕ: ಸೆಪ್ಟೆಂಬರ್ 8 ರಿಂದ 15
ಸಮಯ: ಬೆಳಿಗ್ಗೆ 10.30ರಿಂದ ಸಂಜೆ 7 ಗಂಟೆವರೆಗೆ
ಸ್ಥಳ: ಚಿತ್ರಕಲಾ ಪರಿಷತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.