ಒಮ್ಮೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸಫಾರಿಗೆ ಸ್ನೇಹಿತರೊಟ್ಟಿಗೆ ಹೋಗಿದ್ದೆ. ಲಘು ಚಾರಣ ಹೊರಟಾಗ, ಒಂದು ಕಡೆ ಹಾವಿನ ಪೊರೆ ಕಾಣಿಸಿಕೊಂಡಿತು. ಗಮನಿಸಿದರೆ ಅದು ಆಗಷ್ಟೇ ಪೊರೆ ಬಿಟ್ಟು ಎಲ್ಲೋ ತೆವಳಿದ್ದ ಹಾಗಿತ್ತು. ಇದರ ರೂಪು ರೇಷೆಗಳನ್ನು ನೋಡುತ್ತಲೇ ಇದು ನಾಗರಹಾವಿನ ಪೊರೆ ಎಂದು ತಿಳಿಯಿತು. ಸ್ವಲ್ಪ ದೂರ ನಡೆದುಕೊಂಡು ಹೋದೆವು. ಒಂದು ಕಡೆ, 2 ಅಡಿ ಹೆಡೆ ಎತ್ತಿ, ನಾಗರ ಹಾವು ನಿಂತಿತ್ತು. ಆ ದೃಶ್ಯ ನೋಡಿದ ಕೂಡಲೇ ನಮ್ಮೆಲ್ಲರ ಮೈಯೆಲ್ಲಾ ಕಂಪಿಸಿತು.
ನನ್ನ ಕೆಲವು ಸ್ನೇಹಿತರು ಅತೀವವಾಗಿ ಗಾಬರಿಯಾಗಿ ಓಡಲು ಚಿಂತಿಸಿದರು. ನಮ್ಮ ಜೊತೆ ಬಂದಿದ್ದ ಅರಣ್ಯ ಸಿಬ್ಬಂದಿ,ಕೂಡಲೇ ನಮ್ಮನ್ನು ಗಾಬರಿಯಾಗದಂತೆ ಸೂಚಿಸಿ, ತಾವು ತಂದಿದ್ದ ಕವೆ ಕೋಲಿನಿಂದ ಅದನ್ನು ಹಿಡಿದು ಗುಡ್ಡದ ಮೇಲಿನಿಂದ ಸ್ವಲ್ಪ ಕೆಳಗೆ ಹೋಗಿ ಅದನ್ನು ಸುರಕ್ಷಿತ ಜಾಗಕ್ಕೆ ಬಿಟ್ಟು ಬಂದರು. ನಾವು ಸಫಾರಿ ಮುಂದುವರಿಸಿದವು.
ನಮ್ಮ ದೇಶದಲ್ಲಿ ಕಾಣಸಿಗುವ ನಾಗರಹಾವು ವಿಷಕಾರಿ ಹಾವುಗಳ ‘ಬಿಗ್–4’ ಗುಂಪಿಗೆ ಸೇರಿದೆ. ನಗರ, ಪಟ್ಟಣ, ಹಳ್ಳಿ ಹೀಗೆ ಎಲ್ಲ ಪ್ರದೇಶಗಳಲ್ಲೂ ಈ ಹಾವು ಕಾಣಸಿಗುತ್ತದೆ. ಗದ್ದೆ, ಬೈಲು, ಕಾಡು, ತೋಟಗಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಇದನ್ನು ಇಂಗ್ಲಿಷ್‌ನಲ್ಲಿ ಇಂಡಿಯನ್ ಕೋಬ್ರ (Indian Cobra) ಎನ್ನುತ್ತಾರೆ. ಸೆಪ್ಕಟ್ಯಾಕಲ್ಡ್ ಕೋಬ್ರ, ಏಷ್ಯನ್ ಕೋಬ್ರ, ಬೈನೊಸೆಲ್ಲೇಟ್ ಕೋಬ್ರ ಎಂದೂ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ನಜಾ ನಜ (Naja naja). ಸಂಸ್ಕೃತದಲ್ಲಿ ನಜ ಪದವು ‘ನಾಗ’ ಪದಕ್ಕೆ ಮೂಲ. ಇದು ಎಲಾಪಿಡೆ (Elapidae) ಕುಟುಂಬಕ್ಕೆ ಸೇರಿದ ಸರೀಸೃಪ.
ಇದರ ವಿಷ ನಮ್ಮ ನರಮಂಡಲ ಮತ್ತು ಹೃದಯದ ಸ್ನಾಯುಗಳ ಕಾರ್ಯವೈಖರಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಇದು ಕಚ್ಚಿದ ಕೂಡಲೇ ತುರ್ತು ಚಿಕಿತ್ಸೆ ನೀಡಬೇಕು. ನಂತರ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಹಾವು ಕಡಿತದಿಂದ ಸಾಯುತ್ತಿರುವವ ಪೈಕಿ ಹೆಚ್ಚಿನ ಜನ ನಾಗರಹಾವಿನ ವಿಷದಿಂದಲೇ ಸಾಯುತ್ತಿದ್ದಾರೆ. ಅದರಲ್ಲೂ ಹಾವಾಡಿಗರೇ ಹೆಚ್ಚು ಸಾಯುತ್ತಿದ್ದಾರೆ.
ಬೆಂಗಳೂರಿನಲ್ಲಿರುವ ನಾಗರಭಾವಿ ಪ್ರದೇಶವು ಈ ಹಿಂದೆ, ನಗರಹಾವುಗಳ ವಾಸಸ್ಥಾನವೆಂದೇ ಪ್ರಸಿದ್ಧಿಯಾಗಿತ್ತು. ಆದ್ದರಿಂದ ಈ ಪ್ರದೇಶಕ್ಕೆ ಈ ಹೆಸರು ಬಂದಿದೆ!
–ರಮ್ಯ ಬದರಿನಾಥ್
***
ಹೇಗಿರುತ್ತದೆ?
ನೋಡುವುದಕ್ಕೆ ಆಲಿವ್ ಹಸಿರು ಬಣ್ಣದಲ್ಲಿದ್ದರೂ, ಆಯಾ ಪ್ರದೇಶಗಳ ತಕ್ಕಂತೆ ಬೇರೆ ಬೇರೆ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೆಡೆ ಕಂದು ಬಣ್ಣದಲ್ಲಿದ್ದರೆ, ಕೆಲವೆಡೆ ಬೂದು ಮಿಶ್ರಿತ ಕಂದು, ಕೆಂಪು, ಕಪ್ಪು, ಗಾಢ ಹಳದಿ ಮಿಶ್ರಿತ ಹಸಿರು, ಹೀಗೆ ಹಲವಾರು ಬಣ್ಣಗಳಲ್ಲಿ ಕಾಣಸಿಗುತ್ತದೆ. ಇದರ ಸರಾಸರಿ ಉದ್ದ ಸುಮಾರು 5 ಅಡಿ. 6 ಅಡಿಗಳಷ್ಟು ಉದ್ದವಾದ ನಾಗರಹಾವುಗಳನ್ನೂ ಗುರುತಿಸಲಾಗಿದೆ. ದೇಹದ ಮೇಲೆ ದೊಡ್ಡಗಾತ್ರದ ಚುಕ್ಕಿಗಳು ಮೂಡಿರುತ್ತವೆ. ಹೆಡೆಯ ಮೇಲೆ ‘U' ಆಕಾರದ ಗುರುತು ಇರುತ್ತದೆ. ಭಯ ಉಂಟಾದಾಗ ಅಥವಾ ಸಿಟ್ಟು ಬಂದಾಗ ಹೆಡೆ ಎತ್ತಿ ಬುಸುಗುಡುತ್ತದೆ. ಇದರ ಮೂತಿ ನೀಳವಾಗಿ ಮತ್ತು ಗುಂಡಾಗಿರುತ್ತದೆ.
ಇದು ಸುಮಾರು 5 ಅಡಿಗಳ ವರೆಗೆ ಇರುತ್ತದೆ. ಕೆಲವು 6 ಅಡಿಗಳ ವರೆಗೆ ಸಹ ಇರುತ್ತವೆ. ಇದರ ಮೈಮೇಲೆ ದೊಡ್ಡ ಚುಕ್ಕಿಗಳ, ಆಕಾರದಲ್ಲಿರುವ ಮಾದರಿಗಳಿರುತ್ತವೆ. ಇದರ ಹೆಡೆಯ ಮೇಲೆ “U” ಆಕಾರದಲ್ಲಿರುವ ಮಾದರಿ ಇರುತ್ತದೆ. ಇದು ತೆಳು ಬಣ್ಣದಲ್ಲಿರುತ್ತದೆ. ಇದಕ್ಕೆ ಭಯ ಅಥವಾ ಸಿಟ್ಟು ಬಂದಲ್ಲಿ ಇದರ ಹೆಡೆ ವಿಸ್ತರಿಸುತ್ತದೆ. ಇದರ ಮೂತಿ ನೀಳವಾಗಿ ಮತ್ತು ದುಂಡಾಗಿರುತ್ತದೆ.
ಇದರ ವಿಷ ನಮ್ಮ ನರಮಂಡಲ ಮತ್ತು ಹೃದಯದ ಸ್ನಾಯುಗಳ ಕಾರ್ಯವೈಖರಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಇದು ಕಚ್ಚಿದ ಕೂಡಲೇ ತುರ್ತು ಚಿಕಿತ್ಸೆ ನೀಡಬೇಕು. ನಂತರ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಹಾವು ಕಡಿತದಿಂದ ಸಾಯುತ್ತಿರುವವ ಪೈಕಿ ಹೆಚ್ಚಿನ ಜನ ನಾಗರಹಾವಿನ ವಿಷದಿಂದಲೇ ಸಾಯುತ್ತಿದ್ದಾರೆ. ಅದರಲ್ಲೂ ಹಾವಾಡಿಗರೇ ಹೆಚ್ಚು ಸಾಯುತ್ತಿದ್ದಾರೆ.
ಎಲ್ಲಿದೆ?
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್ ಹಾಗೂ ಶ್ರೀಲಂಕಾ ದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ಭಾರತದಲ್ಲಿ ಸಮುದ್ರ ಮಟ್ಟದಿಂದ ಸುಮಾರು 6500 ಅಡಿಗಳಷ್ಟು ಎತ್ತರದ ಪ್ರದೇಶಗಳಲ್ಲಿ ಹಾಗೂ ಮರುಭೂಮಿ ಪ್ರದೇಶಗಳಲ್ಲಿ ಇದು ಕಾಣಿಸುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.