ಗಿರಿಧಾಮ, ಜಲಪಾತ, ನದಿ, ಕಾನನ, ಹೀಗೆ ಎಲ್ಲವುಗಳ ನೆಲೆಯಾಗಿರುವ ಪಶ್ಚಿಮ ಘಟ್ಟ ಜೀವವೈವಿಧ್ಯಗಳ ಹಾಟ್‌ಸ್ಪಾಟ್ ಕೂಡ. ಇಂತಹ ಜೀವವೈವಿಧ್ಯಗಳ ರಕ್ಷಣೆಗಾಗಿ ಹಗಲಿರುಳು ದುಡಿಯುತ್ತಿರುವವರಲ್ಲಿ ಪ್ರಮುಖರು ಅರಣ್ಯ ರಕ್ಷಕರು. ಅದರಲ್ಲಿಯೂ, ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ಮೂವರು ಅರಣ್ಯರಕ್ಷಕರ ಸ್ಫೂರ್ತಿದಾಯಕ ಕಥೆ ಇದು.
ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಕ್ಯಾಸಲ್‌ರಾಕ್, ಕದ್ರಾದಲ್ಲಿ ಅರಣ್ಯರಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪರಶುರಾಮ ಭಜಂತ್ರಿ, ಪರಸಪ್ಪ ಜಜಪ್ಪಗೋಳ ಹಾಗೂ ರಮೇಶ್ ಬಡಿಗೇರ, ಜೀವವೈವಿಧ್ಯದ ಸಂರಕ್ಷಣೆಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಪರಸಪ್ಪ 80 ಆರ್ಕಿಡ್ ಪ್ರಭೇದಗಳ ಪೈಕಿ 52 ಪ್ರಭೇದಗಳನ್ನು ಸಂರಕ್ಷಿಸಿದ್ದಾರೆ. ಇನ್ನು, ಪರಶುರಾಮ ‘ಘಾಟಿಯಾನ ದ್ವಿವರ್ಣ’ ಎಂಬ ಏಡಿಯ ಹೊಸ ಪ್ರಭೇದವನ್ನೇ ಪತ್ತೆ ಹಚ್ಚಿದ್ದಾರೆ.
ರಮೇಶ ಬಡಿಗೇರ ಅವರು, ಕಪ್ಪೆಗಳ ಬಗ್ಗೆ ಸಂಶೋಧನೆ ನಡೆಸಿದ್ದು, ಪಶ್ಚಿಮ ಘಟ್ಟದಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಪ್ಪೆಗಳ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.