ADVERTISEMENT

World Elephant Day 2021: ಆನೆಗಳ ರಕ್ಷಣೆಗೆ ದಿಯಾ ಮಿರ್ಜಾ, ಶ್ರುತಿ ಹಾಸನ್ ಕರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2021, 9:50 IST
Last Updated 12 ಆಗಸ್ಟ್ 2021, 9:50 IST
ಚಿತ್ರ ಕೃಪೆ: ದಿಯಾ ಮಿರ್ಜಾ, ಇನ್‌ಸ್ಟಾಗ್ರಾಂ
ಚಿತ್ರ ಕೃಪೆ: ದಿಯಾ ಮಿರ್ಜಾ, ಇನ್‌ಸ್ಟಾಗ್ರಾಂ   

ಮುಂಬೈ: ಇಂದು (ಆಗಸ್ಟ್ 12) ವಿಶ್ವ ಆನೆ ದಿನ. ಈ ಸಂದರ್ಭದಲ್ಲಿ ಆನೆಗಳನ್ನು ರಕ್ಷಿಸಿ ಜೀವವೈಧ್ಯತೆಯನ್ನು ಕಾಪಾಡಿಕೊಳ್ಳಲು ನಟಿಯರಾದ ದಿಯಾ ಮಿರ್ಜಾ ಹಾಗೂ ಶ್ರುತಿ ಹಾಸನ್ ಕರೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿಕೊಳ್ಳಬೇಕೆಂದು ವಿನಂತಿ ಮಾಡಿದ್ದಾರೆ.

ಈ ಕುರಿತು ದಿಯಾ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ಆನೆ ಹಾಗೂ ಕಾಡಿನ ಸಂರಕ್ಷಣೆಯ ಮಹತ್ವದ ಬಗ್ಗೆ ವಿವರಿಸಿದ್ದಾರೆ.

ಇತ್ತೀಚಿಗೆ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ಮುಖ್ಯ ರಾಯಭಾರಿಯಾಗಿ ಸೇರ್ಪಡೆಯಾಗಿರುವ ನಟಿ ಶ್ರುತಿ ಹಾಸನ್, ವಿಶಿಷ್ಟ ಕಲಾ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ 80ಕ್ಕೂ ಹೆಚ್ಚು ಕಲಾವಿದರ ವಿಶಿಷ್ಟ ಕಲಾಕೃತಿಗಳು ಒಳಗೊಂಡಿವೆ.

ಆಗಸ್ಟ್ 12ರಂದು ಆನೆಗಳ ಸಂರಕ್ಷಣೆಗಾಗಿ ವಿಶ್ವ ಆನೆ ದಿನವನ್ನಾಗಿ ಆಚರಿಸಲಾಗುತ್ತದೆ. ಆನೆ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖ ಧ್ಯೇಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.