ತನ್ನ ದೇಹದ ವಿಶಿಷ್ಠ ರಚನೆಯಿಂದ ಈ ಭೂಮಿಯ ಮೇಲೆ ಯಾರೇ ಆದರೂ ಸುಲಭವಾಗಿ ಗುರುತಿಸಬಹುದಾದ ಪ್ರಾಣಿಘೇಂಡಾಮೃಗ ಅಥವಾಖಡ್ಗಮೃಗ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿರುವ ಈ ಘೇಂಡಾಮೃಗಗಳನ್ನು ಉಳಿಸಲು ಹಾಗೂ ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಸೆ. 22ಅನ್ನು ‘ವಿಶ್ವ ಘೇಂಡಾಮೃಗಗಳ ದಿನ’ವನ್ನಾಗಿ ಆಚರಿಸಲಾಗುತ್ತಿದೆ.
ಪ್ರಾಣಿ ಜಗತ್ತಿನಲ್ಲಿ ಸ್ತನಿ ವರ್ಗಕ್ಕೆ ಸೇರಿದಘೇಂಡಾಮೃಗದ ವೈಜ್ಞಾನಿಕ ಹೆಸರು ರಿನೋಸೆರೋಟೋಯ್ಡೆ. ಆಫ್ರಿಕಾ, ಏಷ್ಯಾದಹುಲ್ಲುಗಾವಲುಗಳಲ್ಲಿ ವಾಸಿಸುವ ಈ ಪ್ರಾಣಿಗಳಲ್ಲಿ ಒಟ್ಟು ಐದು ವಿಧ.
ಕರಿ ಅಥವಾ ಕಂದು ಘೇಂಡಾಮೃಗ
ಬಿಳಿಘೇಂಡಾಮೃಗ
ಜಾವನ್ಘೇಂಡಾಮೃಗ
ಸುಮಾತ್ರನ್ಘೇಂಡಾಮೃಗ
ಗ್ರೇಟರ್ ಒನ್ ಹಾರ್ನ್‌ಡ್ಘೇಂಡಾಮೃಗ
ಇದರಲ್ಲಿ ಬಿಳಿಘೇಂಡಾಮೃಗಗಳು ಕಿನ್ಯಾದಲ್ಲಿ ಮಾತ್ರ ಕಂಡು ಬರುತ್ತವೆ. ಉಳಿದಂತೆ, ಕಂದುಘೇಂಡಾಮೃಗಗಳು ಭಾರತ ಹಾಗೂ ಆಫ್ರಿಕಾದಹುಲ್ಲುಗಾವಲುಗಳಲ್ಲಿ ಕಂಡು ಬರುತ್ತವೆ. ಸುಮಾತ್ರನ್ಘೇಂಡಾಮೃಗ ಸುಮಾತ್ರಾ ದ್ವೀಪದಲ್ಲಿ, ಜಾವನ್ಘೇಂಡಾಮೃಗ ಜಾವಾ ದ್ವೀಪದಲ್ಲಿ ಕಂಡು ಬರುತ್ತವೆ. ಉಳಿದಂತೆಗ್ರೇಟರ್ ಒನ್ ಹಾರ್ನ್‌ಡ್ ಘೇಂಡಾಮೃಗ ಭಾರತ, ಜಾವಾ, ಸುಮಾತ್ರಾದಲ್ಲಿ ಅಪರೂಪವಾಗಿ ಕಂಡು ಬರುತ್ತದೆ. ಮುಖದ ಮೇಲೆ ಕೊಂಬು, ಗಿಡ್ಡ ಕಾಲುಗಳನ್ನು ಹೊಂದಿರುವ ಇವು ಸುಮಾರು ಒಂದರಿಂದ ಒಂದೂವರೆ ಟನ್ ತೂಕವಿರುತ್ತವೆ. ಸಹಜವಾಗಿ 35 ರಿಂದ 50 ವರ್ಷಗಳು ಬದುಕುತ್ತವೆ. ಕುದುರೆ, ಜೀಬ್ರಾಗಳಿಗೆ ಹತ್ತಿರದ ಪ್ರಾಣಿ ಇದು ಎನ್ನಲಾಗಿದೆ.
ತುಂಬಾ ದಪ್ಪ ಚರ್ಮದ ಪ್ರಾಣಿಗಳಾದಘೇಂಡಾಮೃಗ ಸಾಮಾನ್ಯವಾಗಿ ನಿಶಾಚರ ಪ್ರಾಣಿಯಾಗಿದ್ದು, ಸಂಜೆಯಿಂದ ಮುಂಜಾನೆವರೆಗೆ ಆಹಾರ ತಿಂದು, ಹಗಲಲ್ಲಿ ಪೊದೆಗಳಲ್ಲಿ ನಿದ್ದೆ ಮಾಡುತ್ತವೆ.ಇವುಗಳು ಸಾಮಾನ್ಯವಾಗಿ ಒಂಟಿಯಾಗಿಯೇ ವಾಸಿಸುತ್ತವೆ. ಸಂತಾನವೃದ್ಧಿಯ ಕಾಲದಲ್ಲಿ ಮಾತ್ರ ಹೆಣ್ಣು ಮತ್ತು ಗಂಡು ಜೊತೆ ಜೊತೆಯಾಗಿಯೇ ಓಡಾಡುತ್ತವೆ. ತಾಪವಿದ್ದಾಗ ನದಿಗಳಲ್ಲಿ ಈಜುತ್ತಾ ಕಾಲ ಕಳೆಯುವುದು ಇವುಗಳಿಗೆ ಅಚ್ಚು ಮೆಚ್ಚು. ಹುಲ್ಲು,ಎಲೆ ಚಿಗುರುಇವುಗಳ ಆಹಾರ.
ಇನ್ನುಘೇಂಡಾಮೃಗಗಳು ದಢೂತಿ ಪ್ರಾಣಿಗಳಾದರೂ ಚೆನ್ನಾಗಿ ಓಡಬಲ್ಲವು. ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಓಡಬಲ್ಲವು. ಸಾಧಾರಣವಾಗಿ ಸೌಮ್ಯ ಸ್ವಭಾವ ಹೊಂದಿರುವ ಇವುಗಳುಪ್ರಾಣಕ್ಕೆ ಅಪಾಯವಾದಾಗ ಎದುರಾಳಿಯ ಮೇಲೆಭೀಕರ ದಾಳಿ ಕೂಡ ಮಾಡಬಲ್ಲವು.
20 ನೇ ಶತಮಾನದ ಆರಂಭದಲ್ಲಿ ಭೂಮಿಯ ಮೇಲೆ ಸುಮಾರು 5 ಲಕ್ಷಘೇಂಡಾಮೃಗಗಳು ಇದ್ದವು ಎನ್ನಲಾಗಿದೆ. ಆದರೆ, ಇವುಗಳ ಕೊಂಬುಗಳಲ್ಲಿ ಹಾಗೂ ಕಾಲುಗಳಲ್ಲಿ ಚಿಕಿತ್ಸಕ ಗುಣ ಇದೆ ಎಂದು ಮಾನವನ ದುರಾಸೆಗೆ ನಿರಂತರವಾಗಿ ಬಲಿಯಾಗುತ್ತಾ ಬಂದಿವೆ. ಸದ್ಯ ಭೂಮಿಯ ಮೇಲೆ ಈ ಅಪರೂಪದ ಪ್ರಾಣಿಗಳಒಟ್ಟು ಸಂಖ್ಯೆ 27,000. ಭಾರತದಲ್ಲಿ ಅವುಗಳ ಸಂಖ್ಯೆ 3700. ಆಫ್ರೀಕಾದಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿವೆ.
ವಿಶ್ವ ಘೇಂಡಾಮೃಗಗಳ ದಿನ
ಅಳಿವಿನಂಚಿನಲ್ಲಿರುವಘೇಂಡಾಮೃಗಗಳನ್ನು ಉಳಿಸಿಬೆಳೆಸಬೇಕು, ಅದು ಈ ಭೂಮಿಯ ಮೇಲಿನ ಅದ್ಭುತ ಜೀವಿ ಎಂದು ದಕ್ಷಿಣ ಆಫ್ರಿಕಾಸರ್ಕಾರ 2010 ರಲ್ಲಿ ನಿರ್ಧಾರ ತೆಗೆದುಕೊಂಡು ವಿಶ್ವಸಂಸ್ಥೆಗೆ ಮನವಿ ಮಾಡಿತು. ಅದರಂತೆ 2010 ರಿಂದ ಪ್ರತಿ ವರ್ಷ ಸೆ. 22 ನ್ನುವಿಶ್ವ ಘೇಂಡಾಮೃಗಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಈ ದಿನಘೇಂಡಾಮೃಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಅವುಗಳ ಉಳಿವಿಗೆ ವಿಶೇಷ ಕ್ರಮಗಳನ್ನು ಕೈಗೊಳ್ಳುವುದನ್ನು ಸರ್ಕಾರಗಳು, ಸಂಘ–ಸಂಸ್ಥೆಗಳು ಮಾಡುತ್ತವೆ.
ಸುಂದರ ಪೃಕೃತಿಯ ಭಾಗವಾಗಿರುವ ಘೇಂಡಾಮೃಗಗಳಿಗೆ ಮನುಷ್ಯನೊಬ್ಬನನ್ನು ಬಿಟ್ಟರೇ ಬೇರೆ ಯಾರೂ ಶತ್ರುಗಳಿಲ್ಲ. ಸರ್ಕಾರಗಳು ಅವುಗಳ ಸಂರಕ್ಷಣೆಗೆ ಅನೇಕ ಕ್ರಮಗಳನ್ನು ಕೈಗೊಂಡರೂ ಕಳ್ಳಬೇಟೆಗಾರರು ಇವುಗಳ ಹಿಂದೆ ಬಿದ್ದಿದ್ದಾರೆ. ಭಾರತದಲ್ಲಿ ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ದಾನವನಘೇಂಡಾಮೃಗಗಳ ಪ್ರಮುಖ ವಾಸಸ್ಥಾನವಾಗಿದೆ. ದೇಶದ ಅನೇಕ ಪ್ರಾಣಿ ಸಂಗ್ರಹಾಲಯಗಳಲ್ಲಿ ಪ್ರಾಣಿ ಪ್ರಿಯರನ್ನು ಈ ಘೇಂಡಾಮೃಗಗಳು ಆಕರ್ಷಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.