ADVERTISEMENT

ಸಹರಾದಲ್ಲಿ ಮೆಡಿಟರೇನಿಯನ್‌ ಸಸ್ಯಸಂಪತ್ತು.

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 12:05 IST
Last Updated 30 ಜೂನ್ 2019, 12:05 IST
ಒಯಸಿಸ್‌
ಒಯಸಿಸ್‌   

ಸಹರಾವೆಂದರೆ ಅರಬ್ಬೀ ಭಾಷೆಯಲ್ಲಿ ಮರುಭೂಮಿ ಎಂದರ್ಥ. ಹಗಲಿನಲ್ಲಿ 58 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ಉಷ್ಠಾಂಶವಿದ್ದು, ರಾತ್ರಿ ಹೊತ್ತು –6 ಡಿಗ್ರಿ ಸೆಲ್ಸಿಯಸ್‌ ಉಷ್ಣವಿರುತ್ತದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ.

* ಸಹರಾ ಮರುಭೂಮಿಯಲ್ಲಿ ಕಾಣಸಿಗುವ ಶಿಖರಗಳಲ್ಲಿ ಬಹುತೇಕ ಮೆಡಿಟರೇನಿಯನ್‌ ಸಸ್ಯವರ್ಗಗಳಿವೆ. ಇವೆಲ್ಲ ಮರುಭೂಮಿಯಾಗುವ ಮೊದಲು ಲಾರೆಲ್‌ ಮತ್ತು ಸೈಪ್ರೈಸ್‌ ಮರಗಳು ಹೆಚ್ಚಾಗಿದ್ದವು.
* ಸಹರಾದ ಮಧ್ಯಭಾಗದಲ್ಲಿ 500ಕ್ಕೂ ಹೆಚ್ಚು ಪ್ರಬೇಧದ ಸಸ್ಯಗಳಿದ್ದು, ಇವೆಲ್ಲವೂ ಅಳಿವಂಚಿನಲ್ಲಿವೆ.
* ಹಲವು ಬಗೆಯ ನರಿ ತಳಿಗಳು ಈ ಭಾಗದಲ್ಲಿ ವಾಸಿಸುತ್ತಿದ್ದು, ಫೆನೆಕ್‌ ನರಿ, ಪೇಲ್‌ ನರಿ ಹಾಗೂ ರುಪೆಲ್ಲಾ ನರಿ ತಳಿಗಳು ಈ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತವೆ.
* ಕೇವಲ ಒಂಟೆ ಮಾತ್ರವಲ್ಲ, ಮರುಭೂಮಿಯಲ್ಲಿ ಕೆಲವು ನೀರು ಕುಡಿಯದೇ ಬದುಕುವ ಸಾಮರ್ಥ್ಯ ಹೊಂದಿದೆ. ಅದರಲ್ಲೂ ಅಡಾಕ್ಸ್‌, ಡಾರ್ಕಸ್‌ ಗೆಜಿಲಿಸ್‌,ವೈಟ್‌ ಆ್ಯಂಟಿಲೊಪ್‌ ಈ ಪ್ರದೇಶದಲ್ಲಿದ್ದು, ಇವು ಒಂದು ವರ್ಷಗಳ ನೀರು ಕುಡಿಯದೇ ಬದುಕಬಲ್ಲದು.
* ಆಫ್ರಿಕ್‌ನ ಚಿರತೆಯನ್ನು ಸಹರಾ ಚಿರತೆಯೆಂದು ಕರೆಯಲಾಗುತ್ತದೆ. ಇದರ ಉಪತಳಿಯು ಈ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಹಲ್ಲಿಗಳು, ಚೇಳುಗಳು, ಮರಳಿನ ಮಂಡಲದ ಹಾವು, ಹೈರಾಕ್ಸ್‌, ಸಣ್ಣ ಸಂಖ್ಯೆಯಲ್ಲಿರುವ ಆಫ್ರಿಕನ್‌ ಕಾಡು ನಾಯಿ, ಕೆಂಪು ಕತ್ತಿನ ಆಸ್ಟ್ರಿಚ್‌, ನೂಬಿಯನ್‌ ಕಾಡುಕೋಳಿ, ಹಿಂಸ್ರಪಕ್ಷಿಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.
* ಸಗಣಿ ಜೀರುಂಡೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪುರಾತನ ಈಜಿಪ್ಟ್‌ ನಾಗರಿಕತೆಯ ಸರ್ವಶ್ರೇಷ್ಠ ಚಿಹ್ನೆಯಾಗಿ ಇದನ್ನು ಬಳಸಲಾಗುತ್ತಿತ್ತು.
* ಸಹರಾ ಮರುಭೂಮಿಯಲ್ಲಿ ಡೈನೋಸಾರ್ಸ್‌ನ ಪಳೆಯುಳಿಕೆಗಳು ಸಿಕ್ಕಿವೆ.
* ವರ್ಷಕ್ಕೆ ಈಮರುಭೂಮಿಯ ಅರ್ಧದಷ್ಟು 2 ಸೆಂ.ಮೀನಷ್ಟು ಮಳೆಯಾದರೆ ಹೆಚ್ಚು. ಉಳಿದಂತೆ 10 ಸೆಂ.ಮೀ ಮಳೆಯಾಗುತ್ತದೆ.
* ಮರಳಿನ ಬಿರುಗಾಳಿಯು ಈ ಭಾಗದಲ್ಲಿ ಸಾಮಾನ್ಯವಾಗಿದ್ದು, ಆಕಾಶದೆತ್ತರಕ್ಕೆ ಮರಳಿನ ಗಾಳಿ ಕಾಣಿಸಿಕೊಂಡು ಆಕಾಶವೇ ಕಾಣದಂತೆ ಮಾಡುತ್ತದೆ.
* ಮಧ್ಯ ಮರುಭೂಮಿಯಲ್ಲಿ ಶಿಲ್ಪಕಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆತಿದ್ದು, ಪುರಾತತ್ವ ಇಲಾಖೆಯ ಸಂಶೋಧನೆಗೆ ಪೂರಕವಾಗಿದೆ. ಅಲ್ಲದೇ ಕಲ್ಲಿನ ಕಲೆ ಈ ಭಾಗದಲ್ಲಿ ಚಾಲ್ತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT