ADVERTISEMENT

ವಿಶ್ವ ವಿಸ್ಮಯದ ಕೆಲವು ಪ್ರಶ್ನೆಗಳು

ಎನ್.ವಾಸುದೇವ್
Published 20 ಅಕ್ಟೋಬರ್ 2018, 19:30 IST
Last Updated 20 ಅಕ್ಟೋಬರ್ 2018, 19:30 IST
   

1. ಇರುಳಿನಾಗಸದಲ್ಲಿ ಬರಿಗಣ್ಣಿಗೆ ಗೋಚರಿಸುವ ಎರಡು ಅತ್ಯಂತ ಉಜ್ವಲ ವ್ಯೋಮ ಕಾಯಗಳು ಚಿತ್ರ-1ರಲ್ಲಿವೆ. ಈ ಕಾಯಗಳು ಯಾವುವು - ಈ ಪಟ್ಟಿಯಲ್ಲಿ ಗುರುತಿಸಿ:

ಅ. ಗುರು ಗ್ರಹ
ಬ. ಶನಿ ಗ್ರಹ
ಕ. ಭೂ ಚಂದ್ರ
ಡ. ಮಂಗಳ ಗ್ರಹ
ಇ. ಬುಧ ಗ್ರಹ
ಈ. ಶುಕ್ರ ಗ್ರಹ

2. ಅಪರೂಪವಾಗಿ ಅಂತರಿಕ್ಷದಲ್ಲಿ ಪ್ರತ್ಯಕ್ಷವಾಗುವ ವಿಲಕ್ಷಣ ಕಾಯವಾದ ಧೂಮಕೇತುವೊಂದು ಚಿತ್ರ-2ರಲ್ಲಿದೆ. ಧೂಮಕೇತುಗಳನ್ನು ಕುರಿತ ಈ ಹೇಳಿಕೆಗಳಲ್ಲಿ ಯಾವುದು ಸರಿಯಲ್ಲ?

ADVERTISEMENT

ಅ. ಧೂಮಕೇತುಗಳು ನಮ್ಮ ಸೌರವ್ಯೂಹಕ್ಕೆ ಸೇರಿದ ಕಾಯಗಳೇ ಆಗಿವೆ.
ಬ. ಧೂಮಕೇತುಗಳು ಸ್ವಯಂದೀಪ್ತ ಕಾಯಗಳಲ್ಲ.
ಕ. ಧೂಮಕೇತುಗಳಿಗೆ ಕೊಳಕು ಹಿಮದ ಉಂಡೆಗಳು ಎಂಬ ಹೆಸರೂ ಇದೆ.
ಡ. ಧೂಮಕೇತುಗಳ ಬಾಲ ಅವುಗಳ ಶಾಶ್ವತ ಲಕ್ಷಣ
ಇ. ಎಲ್ಲ ಧೂಮಕೇತುಗಳೂ ಗ್ರಹಗಳಂತೆ ಸೂರ್ಯನನ್ನು ಪರಿಭ್ರಮಿಸುತ್ತವೆ

3. ನಮ್ಮ ನೆರೆಯ ಮಂಗಳ ಗ್ರಹದ ಮೇಲಿಳಿದು ಪ್ರಸ್ತುತ ಈ ಗ್ರಹದ ಅಧ್ಯಯನ ನಡೆಸುತ್ತಿರುವ ಒಂದು ವೈಜ್ಞಾನಿಕ ಬಂಡಿ (ರೋವರ್) ಚಿತ್ರ-3ರಲ್ಲಿದೆ. ಈ ರೋವರ್‌ನ ಹೆಸರೇನು?

ಅ. ಆಪರ್ಚುನಿಟಿ
ಬ. ಕ್ಯೂರಿಯಾಸಿಟಿ
ಕ. ಸ್ಪಿರಿಟ್
ಡ. ಪಾತ್ ಫೈಂಡರ್

4. ಕ್ಷುದ್ರ ಗ್ರಹವೊಂದನ್ನು ಸಮೀಪಿಸಿರುವ ವ್ಯೋಮ ನೌಕೆಯೊಂದರ ದೃಶ್ಯ ಚಿತ್ರ-4ರಲ್ಲಿದೆ. ತುಂಬ ಪ್ರಸಿದ್ಧವಾದ ಕೆಲ ಉಪಗ್ರಹ ಮತ್ತು ಕ್ಷುದ್ರಗ್ರಹಗಳ ಈ ಪಟ್ಟಿಯಲ್ಲಿ ಕ್ಷುದ್ರಗ್ರಹಗಳು ಯಾವುವು?

ಅ. ಬೆನ್ನು
ಬ. ಮಿರಾಂಡಾ
ಕ. ಇಟೋಕಾವಾ
ಡ. ಗ್ಯಾನಿಮೀಡ್
ಇ. ಸಿರೀಸ್
ಈ. ಹೈಪರಿಯಾನ್
ಉ. ಚಾರನ್
ಟ. ಇಡಾ

5. ಶನಿಗ್ರಹದ ಅಧ್ಯಯನವನ್ನು ಕೈಗೊಂಡು ಇತ್ತೀಚೆಗೆ ಕಣ್ಮರೆಯಾದ ವ್ಯೋಮ ನೌಕೆ ಕೆಸೀನೀ ಚಿತ್ರ-5ರಲ್ಲಿದೆ. ಈ ಕೆಳಗೆ ಪಟ್ಟಿ ಮಾಡಿರುವ ಕೆಲ ಸುಪ್ರಸಿದ್ಧ ವ್ಯೋಮ ನೌಕೆಗಳನ್ನೂ, ಅವುಗಳ ಪ್ರಧಾನ ಗುರಿ ಆಗಿದ್ದ/ಆಗಿರುವ ವ್ಯೋಮಕಾಯಗಳನ್ನೂ ಸರಿಹೊಂದಿಸಿ:

1. ನೆಕ್ಸ್ಟ್ (ಸ್ಟಾರ್ ಡಸ್ಟ್) ಅ. ಕ್ಷುದ್ರ ಗ್ರಹ ವೆಸ್ಟಾ
2. ಪಾರ್ಕರ್ ಪ್ರೋಬ್ ಬ. ಕುಬ್ಜ ಗ್ರಹ ಪ್ಲೂಟೋ
3. ಮಾವೆನ್ ಕ. ಬುಧ ಗ್ರಹ
4. ಮೆಸೆಂಜರ್ ಡ. ಧೂಮಕೇತು ಟೆಂಪೆಲ್
5. ಡಾನ್ ಇ. ಸೂರ್ಯ
6. ನ್ಯೂ ಹೊರೈಜ಼ನ್ಸ್ ಈ. ಮಂಗಳ ಗ್ರಹ

6. ಸುಂದರ ರೂಪದ ಗ್ಯಾಲಕ್ಸಿಯೊಂದು ಚಿತ್ರ-6ರಲ್ಲಿದೆ. ಗ್ಯಾಲಕ್ಸಿಗಳ ಬಗೆಗೆ ಮೂರು ಪ್ರಶ್ನೆಗಳು:

ಅ. ಗ್ಯಾಲಕ್ಸಿಗಳ ಮೂರು ಪ್ರಧಾನ ವಿಧಗಳು ಯಾವುವು?
ಬ. ನಮ್ಮ ಗ್ಯಾಲಕ್ಸಿಯಾಗಿರುವ ಕ್ಷೀರ ಪಥ ಯಾವ ವಿಧಕ್ಕೆ ಸೇರಿದೆ?
ಕ. ಪ್ರತಿ ಗ್ಯಾಲಕ್ಸಿಯಲ್ಲಿರುವ ನಕ್ಷತ್ರಗಳ ಸರಾಸರಿ ಸಂಖ್ಯೆ ಎಷ್ಟು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.