ADVERTISEMENT

ಏರ್‌ಬಸ್‌ – ಟಾಟಾ ಜತೆಗೂಡಿ ಭಾರತದಲ್ಲಿ C-295 ವಿಮಾನ ತಯಾರಿಕೆ: ವಿಶೇಷವೇನು..?

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 9:21 IST
Last Updated 29 ಅಕ್ಟೋಬರ್ 2024, 9:21 IST
<div class="paragraphs"><p>ಗುಜರಾತ್‌ನ ವಡೋದರಾದಲ್ಲಿರುವ ಟಾಟಾ ಏರ್‌ಕ್ರಾಫ್ಟ್‌ ಕಾಂಪ್ಲೆಕ್ಸ್‌ನಲ್ಲಿ ಸಿ–295 ವಿಮಾನದೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್‌, ರಕ್ಷಣಾ ಸಚಿವ ರಾಜನಾಥ ಸಿಂಗ್, ಗುಜರಾತ್ ಮುಖ್ಯಮಂತ್ರಿ ಭುಪೇಂದ್ರ ಪಟೇಲ್, ಟಾಟಾ ಸನ್ಸ್ ಅಧ್ಯಕ್ಷ ನಟರಾಜನ್‌ ಚಂದ್ರಶೇಖರನ್‌ ಪಾಲ್ಗೊಂಡಿದ್ದರು.</p></div>

ಗುಜರಾತ್‌ನ ವಡೋದರಾದಲ್ಲಿರುವ ಟಾಟಾ ಏರ್‌ಕ್ರಾಫ್ಟ್‌ ಕಾಂಪ್ಲೆಕ್ಸ್‌ನಲ್ಲಿ ಸಿ–295 ವಿಮಾನದೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್‌, ರಕ್ಷಣಾ ಸಚಿವ ರಾಜನಾಥ ಸಿಂಗ್, ಗುಜರಾತ್ ಮುಖ್ಯಮಂತ್ರಿ ಭುಪೇಂದ್ರ ಪಟೇಲ್, ಟಾಟಾ ಸನ್ಸ್ ಅಧ್ಯಕ್ಷ ನಟರಾಜನ್‌ ಚಂದ್ರಶೇಖರನ್‌ ಪಾಲ್ಗೊಂಡಿದ್ದರು.

   

ಪಿಟಿಐ ಚಿತ್ರ

‘ಮೇಕ್‌ ಇನ್ ಇಂಡಿಯಾ’ ಯೋಜನೆಯ ಭಾಗವಾದ ಸಿ–295 ವಿಮಾನದ ಜೋಡಣಾ ಕಾರ್ಯ ಭಾರತದಲ್ಲಿ ನಡೆಯಲಿದೆ. ಏರ್‌ಬಸ್‌ ಹಾಗೂ ಟಾಟಾ ಏರ್‌ಕ್ರಾಫ್ಟ್‌ ಕಾಂಪ್ಲೆಕ್ಸ್‌ ಜತೆಗೂಡಿ ಗುಜರಾತ್‌ನ ವಡೋದರಾದಲ್ಲಿ ವಿಮಾನಗಳ ನಿರ್ಮಿಸಲಿವೆ. ಹೀಗೆ ಸ್ವದೇಶದಲ್ಲಿ ನಿರ್ಮಾಣಗೊಂಡ ವಿಮಾನಗಳು ಭಾರತೀಯ ವಾಯು ಸೇನೆ ಸೇರಲಿವೆ. ಭವಿಷ್ಯದಲ್ಲಿ ರಫ್ತು ಕೂಡಾ ಆಗಲಿವೆ. ಹಾಗಿದ್ದರೆ ಈ ವಿಮಾನದ ವಿಶೇಷತೆ ಏನು...?

ಬೆಂಗಳೂರು: ಭಾರತದ ಮೊದಲ ಸೇನಾ ವಿಮಾನ ಖಾಸಗಿ ತಯಾರಿಕಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಪೇನ್‌ನ ಪ್ರಧಾನಿ ಪೆಡ್ರೊ ಸ್ಯಾಂಚೆಜ್‌ ಉದ್ಘಾಟಿಸಿದ್ದಾರೆ. ಗುಜರಾತ್‌ನ ವಡೋದರಾದಲ್ಲಿರುವ ಟಾಟಾ ಘಟಕದಲ್ಲಿ ನಿರ್ಮಾಣವಾಗಲಿರುವ ಏರ್‌ಬಸ್‌ ಸಿ– 295 ದೇಶದ ಸೇನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎಂದೇ ಹೇಳಲಾಗುತ್ತಿದೆ.

ADVERTISEMENT

ಕೇಂದ್ರದ ‘ಮೇಕ್‌ ಇನ್ ಇಂಡಿಯಾ’ ಯೋಜನೆಯ ಭಾಗವಾದ ಇದರಲ್ಲಿ ಸಿ–295 ವಿಮಾನದ ಜೋಡಣಾ ಕಾರ್ಯ ಭಾರತದಲ್ಲಿ ನಡೆಯಲಿದೆ. ಹೀಗೆ ಸ್ವದೇಶದಲ್ಲಿ ನಿರ್ಮಾಣಗೊಂಡ ವಿಮಾನಗಳು ಭಾರತೀಯ ವಾಯು ಸೇನೆ ಸೇರಲಿವೆ. 

ಈ ಘಟಕವು ನವೆಂಬರ್‌ನಿಂದ ಕಾರ್ಯಾಚರಣೆ ನಡೆಸಲಿದೆ. ಮೊದಲ ವಿಮಾನ 2026ರ ಸೆಪ್ಟೆಂಬರ್‌ನಲ್ಲಿ ಹೊರಬರಲಿದೆ ಎಂದು ಹೇಳಲಾಗಿದೆ.

IAFನಲ್ಲಿರುವ ಹಳೆಯ ವಿಮಾನವನ್ನು C-295 ಬದಲಿಸಲಿದೆ

ಈ ಒಪ್ಪಂದದ ಭಾಗವಾಗಿ ₹21,935 ಕೋಟಿ ಮೌಲ್ಯದ ಸಿ–295ನ 56 ವಿಮಾನಗಳು ತಯಾರಿಗೆ ಒಪ್ಪಂದ ನಡೆದಿದೆ. ವಾಯು ಸೇನೆಯಲ್ಲಿ ಸದ್ಯ ಇರುವ ಆವ್ರೊ–748 ವಿಮಾನಗಳ ಜಾಗವನ್ನು ನೂತನ ವಿಮಾನಗಳು ಪಡೆಯಲಿವೆ. 

ಈ ನೂತನ ಒಪ್ಪಂದದ ಭಾಗವಾಗಿ ಭಾರತದಲ್ಲಿ ವಿಮಾನಗಳ ತಯಾರಿಕೆಯಲ್ಲಿ ಬಿಡಿಭಾಗಗಳ ತಯಾರಿಕೆಯಿಂದ ಹಿಡಿದು, ಅವುಗಳನ್ನು ಜೋಡಿಸುವವರೆಗೂ, ಪರೀಕ್ಷಾರ್ಥ ಪ್ರಯೋಗಗಳಿಂದ ನಿರ್ವಹಣೆಯವರೆಗೂ ಎಲ್ಲಾ ಕಾರ್ಯಗಳೂ ದೇಶದಲ್ಲೇ ನಡೆಯಲಿವೆ. 

ಸಿ–295 ಎಂಬುದು ಬಹು ಆಯಾಮ ಮಧ್ಯಮ ತಂತ್ರದ ಸಾಮಗ್ರಿ ಯುದ್ಧಸಾಗಣೆ ವಿಮಾನವಾಗಿದ್ದು, ಇದನ್ನು ಯೋಧರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕರೆದೊಯ್ಯಲು, ಯುದ್ಧ ಸಾಮಗ್ರಿಗಳನ್ನು ಸಾಗಿಸಲು, ವೈದ್ಯಕೀಯ ಸಲಕರಣೆಗಳ ತೆಗೆದುಕೊಂಡು ಹೋಗಲು ಬಳಸಬಹುದು. ಸಣ್ಣ ರನ್‌ವೇಗಳಲ್ಲೂ ಬಳಸಬಹುದು. ಜತೆಗೆ ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಯಲ್ಲೂ ಬಳಕೆಗೆ ಯೋಗ್ಯ.

ಭವಿಷ್ಯದಲ್ಲಿ ಭಾರತದಿಂದಲೇ ವಿಮಾನಗಳ ರಫ್ತು

ಈ ಒಪ್ಪಂದದ ಭಾಗವಾಗಿ 16 ವಿಮಾನಗಳನ್ನು ಮುಂದಿನ 48 ತಿಂಗಳುಗಳಲ್ಲಿ ಸ್ಪೇನ್‌ ಭಾರತಕ್ಕೆ ನೀಡಲಿದೆ. ಉಳಿದ 40 ಭಾರತದಲ್ಲೇ ಟಾಟಾ ಅತ್ಯಾಧುನಿಕ ವ್ಯವಸ್ಥೆಯ ಘಟಕ (ಟಿಎಎಸ್‌ಎಲ್‌)ದಲ್ಲಿ ಸಿದ್ಧಗೊಳ್ಳಲಿವೆ. ಭವಿಷ್ಯದಲ್ಲಿ ಭಾರತದಲ್ಲಿ ತಯಾರಾಗುವ ವಿಮಾನಗಳನ್ನು ಏರ್‌ಬಸ್ ಕಂಪನಿಯು ಶೇ 30ರಂತೆ ಖರೀದಿ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ವಿದೇಶಿ ವಿನಿಮಯ ಹೆಚ್ಚಾಗಲಿದೆ.

ಈ ನೂತನ ಉದ್ದಿಮೆಗೆ 15 ಸಾವಿರ ಉತ್ಕೃಷ್ಟ ಕೌಶಲಯುಳ್ಳ ನೌಕರರ ಅಗತ್ಯವಿದೆ. ಪರೋಕ್ಷವಾಗಿ 10 ಸಾವಿರ ಉದ್ಯೋಗ ಸೃಜಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಏರ್‌ಬಸ್‌ ಕಂಪನಿಯು ಸಿ–295 ನಿರ್ಮಿಸುವ ಟಾಟಾ ಸಂಸ್ಥೆಗೆ ತಾಂತ್ರಿಕ ನೆರವು ನೀಡಲಿದೆ. ಜತೆಗೆ ಕೆಲವೊಂದು ಸ್ವದೇಶಿ ನಿರ್ಮಿತ ಸಾಧನಗಳನ್ನು ಅಳವಡಿಸಲಿದೆ. ಎಚ್ಚರಿಕೆ ಗ್ರಹಿಸುವ ಹಾಗೂ ಕ್ಷಿಪಣಿ ಹತ್ತಿರ ಬರುತ್ತಿರುವ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಹಾಗೂ ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ ನೀಡಲಿದೆ. ಸಿ–295 ವಿಮಾನಗಳ ನಿರ್ವಹಣೆ, ದುರಸ್ತಿ ಸೌಕರ್ಯ ಭಾರತದಲ್ಲೇ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.