ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿದಿರುವ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2018ರಲ್ಲಿ ಕಣಕ್ಕೆ ಇಳಿದಿದ್ದ ಒಟ್ಟು ಅಭ್ಯರ್ಥಿಗಳಲ್ಲಿ ಶೇ 15ರಷ್ಟು ಅಭ್ಯರ್ಥಿಗಳು ಮಾತ್ರ ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಘೋಷಿಸಿಕೊಂಡಿದ್ದರು. ಆದರೆ, ಈ ಬಾರಿ ಕಣಕ್ಕೆ ಇಳಿದಿರುವ ಅಭ್ಯರ್ಥಿಗಳಲ್ಲಿ ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿಕೊಂಡವರ ಪ್ರಮಾಣ ಶೇ 22ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ ನಡೆದ ಚುನಾವಣೆಗಳಲ್ಲಿ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು ಗರಿಷ್ಠ ಪ್ರಮಾಣದಲ್ಲಿ ಕಣದಲ್ಲಿ ಇರುವುದು ಇದೇ ಮೊದಲು. ಎಡಿಆರ್ ಬಿಡುಗಡೆ ಮಾಡಿರುವ ‘ಕರ್ನಾಟಕ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಅಪರಾಧಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲಯ ವಿಶ್ಲೇಷಣೆ’ ವರದಿಯಲ್ಲಿ ಈ ಮಾಹಿತಿ ಇದೆ
ತಮ್ಮ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಘೋಷಿಸಿಕೊಂಡ ಅಭ್ಯರ್ಥಿಗಳ ಸಂಖ್ಯೆ ಒಂದು ಕ್ಷೇತ್ರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಇದ್ದರೆ, ಅಂತಹ ಕ್ಷೇತ್ರವನ್ನು ‘ರೆಡ್ ಅಲರ್ಟ್ ಕ್ಷೇತ್ರ’ ಎಂದು ಕರೆಯಲಾಗುತ್ತದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 111 ಕ್ಷೇತ್ರಗಳಲ್ಲಿ, ಅಪರಾಧ ಹಿನ್ನೆಯ ಅಭ್ಯರ್ಥಿಗಳ ಸಂಖ್ಯೆ ಮೂರಕ್ಕಿಂತಲೂ ಹೆಚ್ಚು ಇದೆ. ಹೀಗಾಗಿ ಅಂತಹ ಕ್ಷೇತ್ರಗಳಲ್ಲಿ ಕಟ್ಟೆಚ್ಚರ ಅಗತ್ಯ ಎಂದು ಎಡಿಆರ್ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ. 2018ರಲ್ಲಿ 56 ಕ್ಷೇತ್ರಗಳನ್ನಷ್ಟೇ ‘ರೆಡ್ ಅಲರ್ಟ್ ಕ್ಷೇತ್ರ’ಗಳು ಎಂದು ಘೋಷಿಸಲಾಗಿತ್ತು.
49: ಮಹಿಳೆಯರ ವಿರುದ್ಧ ಎಸಗಲಾದ ಅಪರಾಧ ಕೃತ್ಯಗಳ ಸಂಬಂಧ ತಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಘೋಷಿಸಿಕೊಂಡಿರುವ ಅಭ್ಯರ್ಥಿಗಳ ಸಂಖ್ಯೆ (2018ರಲ್ಲಿ 23 ಅಭ್ಯರ್ಥಿಗಳ ವಿರುದ್ಧ ಮಾತ್ರ ಇಂತಹ ಪ್ರಕರಣಗಳು ದಾಖಲಾಗಿದ್ದವು)
1: ತಮ್ಮ ಇರುದ್ಧ ಅತ್ಯಾಚಾರ ಸಂಬಂಧಿ ಪ್ರಕರಣ ದಾಖಲಾಗಿದೆ ಎಂದು ಘೋಷಿಸಿಕೊಂಡಿರುವ ಅಭ್ಯರ್ಥಿ (2018ರಲ್ಲಿ ಒಬ್ಬ ಅಭ್ಯರ್ಥಿಯ ವಿರುದ್ಧವೂ ಇಂತಹ ಪ್ರಕರಣ ದಾಖಲಾಗಿರಲಿಲ್ಲ)
8: ತಮ್ಮ ವಿರುದ್ಧ ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಘೋಷಿಸಿಕೊಂಡಿರುವ ಅಭ್ಯರ್ಥಿಗಳು (2018ರಲ್ಲಿ 4 ಅಭ್ಯರ್ಥಿಗಳ ವಿರುದ್ಧ ಮಾತ್ರ ಇಂತಹ ಪ್ರಕರಣಗಳು ದಾಖಲಾಗಿದ್ದವು)
35: ತಮ್ಮ ವಿರುದ್ಧ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಘೋಷಿಸಿಕೊಂಡಿರುವ ಅಭ್ಯರ್ಥಿಗಳು (2018ರಲ್ಲಿ 25 ಅಭ್ಯರ್ಥಿಗಳ ವಿರುದ್ಧ ಮಾತ್ರ ಇಂತಹ ಪ್ರಕರಣಗಳು ದಾಖಲಾಗಿದ್ದವು)
ಭ್ಯರ್ಥಿಗಳ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ಸಾಮಾನ್ಯ ಮತ್ತು ಗಂಭೀರ ಅಪರಾಧ ಪ್ರಕರಣಗಳು ಎಂದು ಎಡಿಆರ್ ವರ್ಗೀಕರಿಸಿದೆ. ಎಂತಹ ಅಪರಾಧ ಪ್ರಕರಣಗಳು, ಗಂಭೀರ ಅಪರಾಧ ಪ್ರಕರಣಗಳು ಎನಿಸಿಕೊಳ್ಳುತ್ತವೆ ಎಂಬುದನ್ನು ಎಡಿಆರ್ ವಿವರಿಸಿದೆ
ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲುಶಿಕ್ಷೆಗೆ ಅವಕಶ ಇರುವಂತಹ ಅಪರಾಧ ಕೃತ್ಯಗಳು
ಜಾಮೀನುರಹಿತ ಅಪರಾಧ ಕೃತ್ಯಗಳು
ಚುನಾವಣಾ ಅಪರಾಧಗಳು
ಹಲ್ಲೆ, ಹತ್ಯೆ, ಅಪಹರಣ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂತಹ ಕೃತ್ಯಗಳು
ಜನಪ್ರತಿನಿಧಿ ಕಾಯ್ದೆಯ ಎಂಟನೇ ಸೆಕ್ಷನ್‌ನಲ್ಲಿ ಉಲ್ಲೇಖಿಸಿರುವ ಕೃತ್ಯಗಳು
ಭ್ರಷ್ಟಾಚಾರ ನಿಷೇಧ ಕಾಯ್ದೆ ಅಡಿ ಗುರುತಿಸಲಾದ ಕೃತ್ಯಗಳು
ಮಹಿಳೆಯರ ವಿರುದ್ಧ ಎಸಗಲಾಗುವ ಯಾವುದೇ ಅಪರಾಧ ಕೃತ್ಯಗಳು
ಕಲಬುರಗಿಯ ಚಿತ್ತಾಪುರ ಎಸ್‌ಸಿ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಣಿಕಂಠ ರಾಠೋಡ ವಿರುದ್ಧ 43 ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳ ವಿರುದ್ಧ ದಾಖಲಾದ ಗರಿಷ್ಠ ಪ್ರಕರಣಗಳ ಸಂಖ್ಯೆ ಇದು. ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ ಕಣಕ್ಕೆ ಇಳಿದಿದ್ದಾರೆ.
26 ವರ್ಷದ ಮಣಿಕಂಠ ವಿರುದ್ಧ ದಾಖಲಾಗಿರುವ 25 ಪ್ರಕರಣಗಳಲ್ಲಿ ಈಗಾಗಲೇ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಇಷ್ಟೂ ಪ್ರಕರಣಗಳಲ್ಲಿ ಅವರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಅವರ ವಿರುದ್ಧದ ಮೂರು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಎರಡು ಪ್ರಕರಣಗಳಲ್ಲಿ ದಂಡವನ್ನಷ್ಟೇ ವಿಧಿಸಲಾಗಿದೆ. ಒಂದು ಪ್ರಕರಣದಲ್ಲಿ ಒಂದು ವರ್ಷ ಸೆರೆವಾಸ ಮತ್ತು ₹10,000 ದಂಡ ವಿಧಿಸಲಾಗಿದೆ. ಇದರ ವಿರುದ್ಧ ಅವರು ಮೇಲ್ಮನವಿ ಸಲ್ಲಿಸಿದ್ದಾರೆ.
ಮಣಿಕಂಠ ವಿರುದ್ಧ ವಂಚನೆ (8), ಅಪರಾಧಕ್ಕೆ ಸಂಚು (3), ಕೊಲೆ ಯತ್ನ (2), ಮಾರಕಾಸ್ತ್ರಗಳಿಂದ ಹಲ್ಲೆ (2), ಶಾಂತಿ ಕದಡಲು ಯತ್ನ (5), ಗಲಭೆ (2), ಅಪಾಯಕಾರಿ ಚಾಲನೆ (1) ಸೇರಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಒಟ್ಟು 28 ಆರೋಪಪಟ್ಟಿ ಸಲ್ಲಿಕೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.