ಸಂವಿಧಾನ ರಚನಾ ಸಭೆಗೆ ಪರೋಕ್ಷ ಚುನಾವಣೆಯ ಮೂಲಕ ಮತ್ತು ನಾಮಕರಣದ ಮೂಲಕ ಸದಸ್ಯರ ನೇಮಕ
ಸಂವಿಧಾನ ರಚನಾ ಸಭೆಯಲ್ಲಿ ಹಿಂದೂ ಧರ್ಮದವರ ಪಾಲು ಶೇ 94.6. ಉಳಿದಂತೆ ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಸಿಖ್ ಧರ್ಮಗಳಿಗೂ ಅವಕಾಶ
ಸಮಿತಿಯಲ್ಲಿ ಮೊದಲು 389 ಸದಸ್ಯರಿದ್ದು, ನಂತರ ಅವರ ಸಂಖ್ಯೆ 299ಕ್ಕೆ ಇಳಿದಿತ್ತು. ಸಂವಿಧಾನ ರಚನಾ ಸಭೆಯಲ್ಲಿ 15 ಮಂದಿ ಮಾತ್ರ ಮಹಿಳಾ ಸದಸ್ಯರು; ದಾಕ್ಷಾಯಿಣಿ ವೇಲಾಯುಧನ್ ಸಮಿತಿಯಲ್ಲಿದ್ದ ಏಕೈಕ ದಲಿತ ಮಹಿಳೆ
2 ವರ್ಷ, 11 ತಿಂಗಳು, 18 ದಿನ: ಸಂವಿಧಾನ ರಚನೆಗೆ ತೆಗೆದುಕೊಂಡ ಅವಧಿ
11: ಸಂವಿಧಾನ ರಚನಾ ಸಭೆ ನಡೆಸಿದ ಅಧಿವೇಶನಗಳು
2,473: ಸಂವಿಧಾನ ಅಂತಿಮಗೊಳಿಸಲು ಮಾಡಲಾದ ತಿದ್ದುಪಡಿಗಳು
1,45,000 ಪದಗಳಿಂದ ಕೂಡಿದ್ದ ಸಂವಿಧಾನವು ಜಗತ್ತಿನಲ್ಲಿಯೇ ಅತಿ ದೊಡ್ಡ ಲಿಖಿತ ಸಂವಿಧಾನ ಎಂದು ಹೆಸರು ಪಡೆದಿತ್ತು. ಈಗಲೂ ಅದೇ ಹೆಗ್ಗಳಿಕೆಯನ್ನು ಹೊಂದಿದೆ
1950ರಲ್ಲಿ ಜಾರಿಗೊಂಡ ಮೂಲ ಸಂವಿಧಾನವು 395 ವಿಧಿಗಳು, 22 ಭಾಗಗಳು ಹಾಗೂ 8 ಅನುಸೂಚಿಗಳನ್ನು ಒಳಗೊಂಡಿತ್ತು
ಕಾಲದಿಂದ ಕಾಲಕ್ಕೆ ತರಲಾದ 106 ತಿದ್ದುಪಡಿಗಳಿಂದಾಗಿ ಪ್ರಸ್ತುತ ಭಾರತ ಸಂವಿಧಾನವು 460ಕ್ಕೂ ಹೆಚ್ಚು ವಿಧಿಗಳು, 25 ಭಾಗಗಳು ಮತ್ತು 12 ಅನುಸೂಚಿಗಳನ್ನು ಹೊಂದಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.