ADVERTISEMENT

ಸಂಖ್ಯೆ-ಸುದ್ದಿ | ನಬಾರ್ಡ್ ವರದಿ: ಕುಗ್ಗಿದ ಕೃಷಿ ಭೂಮಿ; ಹೆಚ್ಚಿದ ಆದಾಯ, ವೆಚ್ಚ

ನಬಾರ್ಡ್ ಸಮೀಕ್ಷಾ ವರದಿ: ಸಾಲ ಪಡೆದ ಗ್ರಾಮೀಣ ಕೃಷಿ, ಕೃಷಿಯೇತರ ಕುಟುಂಬಗಳ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 0:30 IST
Last Updated 21 ಅಕ್ಟೋಬರ್ 2024, 0:30 IST
   

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್) ಅಖಿಲ ಭಾರತ ಗ್ರಾಮೀಣ ಆರ್ಥಿಕ ಒಳಗೊಳ್ಳುವಿಕೆ ಸಮೀಕ್ಷೆ 2021–22 (ಎನ್‌ಎಎಫ್‌ಐಎಸ್‌) ಬಿಡುಗಡೆಯಾಗಿದೆ. ಇದು ಕೃಷಿ ವಲಯ ಮತ್ತು ಗ್ರಾಮೀಣ ಬದುಕಿನಲ್ಲಿ ಆಗಿರುವ ಬದಲಾವಣೆಗಳ ಕಡೆಗೆ ಗಮನ ಸೆಳೆಯುತ್ತಿದೆ. ಗ್ರಾಮೀಣ ಭಾರತದಲ್ಲಿ ಕೃಷಿ ಜಮೀನಿನ ವಿಸ್ತೀರ್ಣ ಕಡಿಮೆ ಆಗಿದ್ದರೆ, ರೈತರ ಆದಾಯ ಹೆಚ್ಚಾಗಿದೆ. ವೆಚ್ಚವೂ ಜಾಸ್ತಿಯಾಗಿದೆ. ಸಾಲ ಮಾಡುತ್ತಿರುವವರ ಸಂಖ್ಯೆಯೂ ಏರಿಕೆಯಾಗಿದೆ

ದೇಶದ ಗ್ರಾಮೀಣ ಭಾಗದ ಜನರ ಜೀವನೋಪಾಯ ಮತ್ತು ಒಳಗೊಳ್ಳುವಿಕೆಯನ್ನು ಅರಿಯುವ ಸಲುವಾಗಿ ‘ನಬಾರ್ಡ್‌’ ಎರಡನೆಯ ಬಾರಿಗೆ ಗ್ರಾಮೀಣ ಆರ್ಥಿಕ ಒಳಗೊಳ್ಳುವಿಕೆ ಸಮೀಕ್ಷೆ 2021–22 (ಎನ್‌ಎಎಫ್‌ಐಎಸ್‌) ನಡೆಸಿದೆ (ಮೊದಲ ಸಮೀಕ್ಷೆ ನಡೆದದ್ದು 2016–17ರಲ್ಲಿ). ಜನರ ಜೀವನ ಮಟ್ಟದಲ್ಲಿ ಐದು ವರ್ಷಗಳಲ್ಲಿ ಆಗಿರುವ ಬದಲಾವಣೆಯನ್ನು ವರದಿ ತಿಳಿಸುತ್ತದೆ. ಗ್ರಾಮೀಣ ಭಾಗದ ಬಡವರು ಮತ್ತು ದುರ್ಬಲ ವರ್ಗದವರು ಆರ್ಥಿಕ ಉತ್ಪನ್ನ ಮತ್ತು ಸೇವೆಗಳನ್ನು ಬಳಸುವುದನ್ನು ಅವರ ಬೆಳವಣಿಗೆಯ ಮುಖ್ಯ ಅಂಶ ಎಂದು ಪರಿಗಣಿಸಲಾಗಿದೆ. ಸಮೀಕ್ಷೆಯು ಗ್ರಾಮೀಣ ಭಾಗದ ರೈತರ ಮತ್ತು ಕೃಷಿಯೇತರ ಜನರ ಉಳಿತಾಯ, ಸಾಲ, ವಿಮೆ, ಪಿಂಚಣಿ ಮತ್ತು ಹಣಕಾಸು ಸಾಕ್ಷರತೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಜನರ ಹಣಕಾಸು ಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ವರ್ತನೆಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. 

ಎನ್‌ಎಎಫ್‌ಐಎಸ್‌ 16–17ಕ್ಕಿಂತ ಎನ್‌ಎಎಫ್‌ಐಎಸ್‌ 2021–22ರಲ್ಲಿ ದೇಶದ ಹೆಚ್ಚು ಜಿಲ್ಲೆ ಮತ್ತು ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿದ್ದು, 28 ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶ, 710 ಜಿಲ್ಲೆ, 10,000 ಹಳ್ಳಿಗಳ ಒಂದು ಲಕ್ಷ ಕುಟುಂಬಗಳು, 4,39,492 ಜನರನ್ನು ಸಮೀಕ್ಷೆ ನಡೆಸಲಾಗಿದೆ. ಇದು ಕೋವಿಡ್ ನಂತರದ ಸಮೀಕ್ಷೆಯಾಗಿರುವುದರಿಂದ ಸಹಜವಾಗಿಯೇ ಸಾಂಕ್ರಾಮಿಕದ ಪರಿಣಾಮಗಳು ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿವೆ. ಸಮೀಕ್ಷೆ ಮಾಡಲಾದ ಕುಟುಂಬಗಳ ಪೈಕಿ ಶೇ 56.7 ಕೃಷಿ ಕುಟುಂಬಗಳಾಗಿದ್ದರೆ, ಶೇ 43.3 ಕೃಷಿಯೇತರ ಕುಟುಂಬಗಳಾಗಿವೆ. ‌

ADVERTISEMENT

ಆಧಾರ: ನಬಾರ್ಡ್‌ನ ಅಖಿಲ ಭಾರತ ಗ್ರಾಮೀಣ ಆರ್ಥಿಕ ಒಳಗೊಳ್ಳುವಿಕೆ ಸಮೀಕ್ಷೆ–2021–22 ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.