ಪ್ರೊ. ಬರಗೂರು ರಾಮಚಂದ್ರಪ್ಪ ಸರ್ವಾಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಪರಿಷ್ಕರಿಸಿದ್ದ 10ನೇ ತರಗತಿಯ ಸಮಾಜವಿಜ್ಞಾನ ಭಾಗ–1ರ ಪುಸ್ತಕದಲ್ಲಿ ಇದ್ದ ಹಲವು ಪಾಠಗಳನ್ನು, ರೋಹಿತ್ ಚಕ್ರತೀರ್ಥ ನೇತೃತ್ವದ ಪರಿಶೀಲನಾ ಸಮಿತಿಯು ಕೈಬಿಟ್ಟಿದೆ. ಕೆಲವು ಪಾಠಗಳಲ್ಲಿ ಇದ್ದ ವಿವರಗಳನ್ನು ಕೈಬಿಡಲಾಗಿದೆ, ಕೆಲವು ವಿವರಗಳನ್ನು ಹೊಸದಾಗಿ ಸೇರಿಸಲಾಗಿದೆ. ಪರಿಷ್ಕರಣ ಸಮಿತಿ ಅಂತಿಮಗೊಳಿಸಿದ್ದ ಪಠ್ಯದಲ್ಲಿ ಇದ್ದ ಸಾಮಾಜಿಕ ಅಸಮಾನತೆ, ಕಾರ್ಪೊರೇಟ್ ತಂತ್ರಗಾರಿಕೆ ಭಾಗಗಳನ್ನು ಪರಿಶೀಲನಾ ಸಮಿತಿಯು ಕೈಬಿಟ್ಟಿದೆ. ನಿರುದ್ಯೋಗ ಸಮಸ್ಯೆ, ಕೋಮುವಾದ ಸಮಸ್ಯೆ ಭಾಗಗಳ ವಿವರಗಳನ್ನು ಬದಲಿಸಲಾಗಿದೆ. ಪ್ರಾದೇಶಿಕವಾದವು ದೇಶದ ದೊಡ್ಡ ಸಮಸ್ಯೆ ಎಂಬ ಹೊಸ ಭಾಗವನ್ನು ಪುನರ್‌ಪರಿಷ್ಕರಣೆಯಲ್ಲಿ ಸೇರಿಸಲಾಗಿದೆ.
ನಾರಾಯಣ ಗುರು ಪಾಠ ಕೈಬಿಟ್ಟು, ಮತ್ತೆ ತೆಗೆದುಕೊಂಡ ಚಕ್ರತೀರ್ಥ ಸಮಿತಿ
ನಾರಾಯಣ ಗುರು ಅವರಿಗೆ ಸಂಬಂಧಿಸಿದ ಪೂರ್ಣ ಪರಿಚಯವನ್ನು ಪರಿಷ್ಕರಣ ಸಮಿತಿಯು 10ನೇ ತರಗತಿಯ ಸಮಾಜ ವಿಜ್ಞಾನ ಭಾಗ–1ರಲ್ಲಿ ಸೇರಿಸಿತ್ತು. ಆದರೆ, ಪುನರ್‌ಪರಿಷ್ಕರಣ ಸಮಿತಿಯು ನಾರಾಯಣ ಗುರು ಅವರಿಗೆ ಸಂಬಂಧಿಸಿದ ಪರಿಚಯವನ್ನು ಒಂದು ಪ್ಯಾರಾಕ್ಕೆ ಇಳಿಸಿತ್ತು. ‘ಪ್ರಜಾವಾಣಿ’ ಈ ಬಗ್ಗೆ ವರದಿ ಪ್ರಕಟಿಸಿದ ನಂತರ, 10ನೇ ತರಗತಿಯ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡಿದೆ.
ಪೆರಿಯಾರ್ ಪಾಠಕ್ಕೆ ಕತ್ತರಿ
ಪರಿಷ್ಕರಣ ಸಮಿತಿ ರಚಿಸಿದ್ದ ಸಮಾಜವಿಜ್ಞಾನ ಭಾಗ–1ರ ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು’ ಎಂಬ ಪಾಠದಲ್ಲಿ ನಾರಾಯಣ ಗುರು ಮತ್ತು ಪೆರಿಯಾರ್ ಅವರಿಗೆ ಸಂಬಂಧಿಸಿದ ವಿವರಗಳನ್ನು, ಪರಿಶೀಲನಾ ಸಮಿತಿಯು ಈ ಪಠ್ಯಪುಸ್ತಕದಿಂದ ತೆಗೆದುಹಾಕಿದೆ. ಆದರೆ, ಈ ಇಬ್ಬರ ವಿವರಗಳನ್ನು 10ನೇ ತರಗತಿಯ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಹೊಸ ಪಾಠವಾಗಿ ಸೇರಿಸಲಾಗಿದೆ. ಆದರೆ, ಪೆರಿಯಾರ್ ಅವರ ಬಗ್ಗೆ ಮೂಲ ಪಾಠದಲ್ಲಿ ಇದ್ದ ಕೆಲವು ವಿವರಗಳನ್ನು ಕನ್ನಡ ಪಠ್ಯಪುಸ್ತಕದಲ್ಲಿ ತೆಗೆಯಲಾಗಿದೆ. ತೆಗೆಯಲಾದ ವಿವರಗಳನ್ನು ಈ ಚಿತ್ರದಲ್ಲಿ ಹೈಲೈಟ್ ಮಾಡಲಾಗಿದೆ.
ಪರಿಷ್ಕೃತ ಪಠ್ಯ (ಬರಗೂರು ರಾಮಚಂದ್ರಪ್ಪ ಸಮಿತಿ)
ಪುನರ್‌ಪರಿಷ್ಕೃತ ಪಠ್ಯ (ರೋಹಿತ್ ಚಕ್ರತೀರ್ಥ ಸಮಿತಿ)
ಭಾರತದ ಸಮಸ್ಯೆಗಳು ಬದಲು
ಪರಿಷ್ಕರಣ ಸಮಿತಿಯು ಅಂತಿಮಗೊಳಿಸಿದ್ದ ಪಠ್ಯಪುಸ್ತಕದಲ್ಲಿ ‘ಭಾರತದ ಸಮಸ್ಯೆಗಳು ಮತ್ತು ಅವುಗಳ ಪರಿಹಾರೋಪಾಯಗಳು’ ಎಂಬ ಪಾಠವಿತ್ತು. ಪರಿಶೀಲನಾ ಸಮಿತಿ ಸಹ ಈ ಪಾಠವನ್ನು ಉಳಿಸಿಕೊಂಡಿದೆ. ಆದರೆ, ಪಾಠದ ಭಾಗಗಳನ್ನು ಬದಲಿಸಿದೆ.
ಪರಿಷ್ಕೃತ ಪಠ್ಯ (ಬರಗೂರು ರಾಮಚಂದ್ರಪ್ಪ ಸಮಿತಿ)
ಪುನರ್‌ಪರಿಷ್ಕೃತ ಪಠ್ಯ (ರೋಹಿತ್ ಚಕ್ರತೀರ್ಥ ಸಮಿತಿ)
‘ಪ್ರಾದೇಶಿಕವಾದವೂ ಒಂದು ಸಮಸ್ಯೆ’
ಪರಿಷ್ಕರಣ ಸಮಿತಿಯು ಅಂತಿಮಗೊಳಿಸಿದ್ದ ಪಠ್ಯಪುಸ್ತದಲ್ಲಿ ‘ಭಾರತಕ್ಕಿರುವ ಸವಾಲುಗಳು ಮತ್ತು ಅವುಗಳ ಪರಿಹಾರೋಪಾಯಗಳು’ ಎಂಬ ಪಾಠಕ್ಕೆ ಪರಿಶೀಲನಾ ಸಮಿತಿ ‘ಪ್ರಾದೇಶಿಕವಾದ’ ಎಂಬ ಭಾಗವನ್ನು ಸೇರಿಸಿದೆ. ಆ ಭಾಗದ ವಿವರ ಈ ರೀತಿ ಇದೆ.
ರೋಹಿತ್ ಚಕ್ರತೀರ್ಥ ಅವರ ಸಮಿತಿಯು ಪ್ರಾದೇಶಿಕವಾದದ ಸಮಸ್ಯೆಗಳನ್ನು ಈ ರೀತಿ ವಿವರಿಸಿದೆ
*ಪ್ರಾದೇಶಿಕ ಮನೋಭಾವ ತೀರಾ ಹೆಚ್ಚು ಅನಿಸಿದರೆ ಅದು ರಾಷ್ಟ್ರದ ಏಕತೆ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆ ಒದಗಿಸುತ್ತದೆ
*ಅತಿಯಾದ ಭಾಷಾಭಿಮಾನವೂ ರಾಷ್ಟ್ರೀಯವಾದದ ವಿರುದ್ಧ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ
*ಪ್ರಾದೇಶಿಕವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ.
ಪ್ರಾದೇಶಿಕವಾದ ಕುರಿತ ಪಠ್ಯ
ಪರಿಷ್ಕರಣ ಸಮಿತಿಯ ಪಠ್ಯಪುಸ್ತಕದಲ್ಲಿ ಕೋಮುವಾದಕ್ಕೆ ಸಂಬಂಧಿಸಿದಂತೆ ಇದ್ದ ವಿವರ
ಪರಿಶೀಲನಾ ಸಮಿತಿಯ ಪಠ್ಯಪುಸ್ತಕದಲ್ಲಿ ಕೋಮುವಾದಕ್ಕೆ ಸಂಬಂಧಿಸಿದಂತೆ ಇರುವ ವಿವರ
*****
ಡಾ.ಜಿ.ಎಸ್.ಮುಡಂಬಡಿತ್ತಾಯ ಸಮಿಯು ರಚಿಸಿ, ಡಾ. ಬರಗೂರು ರಾಮಚಂದ್ರಪ್ಪ ಸಮಿತಿಯು ಪರಿಷ್ಕರಿಸಿದ ಮತ್ತು ರೋಹಿತ್ ಚಕ್ರತೀರ್ಥ ಸಮಿತಿಯು ಪುನರ್‌ಪರಿಷ್ಕರಿಸಿದ ಪಠ್ಯಪುಸ್ತಕಗಳ ಪಿಡಿಎಫ್ ಪ್ರತಿಗಳನ್ನು ಕರ್ನಾಟಕ ಪಠ್ಯಪುಸ್ತಕಗಳ ಸಂಘದ ಜಾಲತಾಣದಲ್ಲಿ ಹಾಕಲಾಗಿದೆ. ಆದರೆ, ಎಲ್ಲಾ ಪಠ್ಯಪುಸ್ತಕಗಳ ಎಲ್ಲಾ ಪುಟಗಳ ಮೇಲೂ ‘ನಾಟ್ ಫಾರ್ ರಿಪಬ್ಲಿಷಿಂಗ್’ (ಮರುಮುದ್ರಣಕ್ಕಲ್ಲ) ಎಂದು ವಾಟರ್‌ಮಾರ್ಕ್ ಹಾಕಲಾಗಿದೆ. ಹೀಗಾಗಿ ಈ ಪಿಡಿಎಫ್ ಪ್ರತಿಗಳ ಬದಲಿಗೆ ಲಭ್ಯವಿರುವ ಭೌತಿಕ ಪ್ರತಿಗಳನ್ನಷ್ಟೇ ಇಲ್ಲಿ ಪರಿಶೀಲನೆಗೆ ನೀಡಲಾಗಿದೆ. ಮುಡಂಬಡಿತ್ತಾಯ ನೇತೃತ್ವದ ಸಮಿತಿಯು ರಚಿಸಿದ್ದ ಪಠ್ಯಪುಸ್ತಕದ ಭೌತಿಕ ಪ್ರತಿ ಲಭ್ಯವಾಗದ ಕಾರಣ, ಅದನ್ನು ಇಲ್ಲಿ ನೀಡಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.