ADVERTISEMENT

ಬೆಳಗಿನ ಸುದ್ದಿಗಳು: ಪ್ರಾಚೀನರು ಕಂಡಂತೆ ಭೂಮಿ, ಆರ್‌ಸಿಬಿ ರೋಚಕ ಜಯ, ಮತ್ತಷ್ಟು..

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 3:12 IST
Last Updated 22 ಏಪ್ರಿಲ್ 2019, 3:12 IST
   

ಇಂದು ವಿಶ್ವ ಭೂಮಿ ದಿನ. ಪ್ರಾಚೀನರು ಕಂಡಂತೆ ‘ಪೃಥ್ವಿ’ ಹೇಗಿತ್ತು, ಪೆಸಿಫಿಕ್ ಮಹಾಸಾಗರದಲ್ಲಿ ರೂಪುಗೊಂಡಿರುವ ಮಹಾನ್ ತಿಪ್ಪೆ ಸಾಮ್ರಾಜ್ಯದ ಬಗ್ಗೆ ತಿಳಿದಿದ್ದೀರಾ? ಶ್ರೀಲಂಕಾದಲ್ಲಿ ಈಸ್ಟರ್ ಆಚರಣೆ ವೇಳೆ ನಡೆದ ಸರಣಿ ಸ್ಫೋಟ, ಒಂದು ರನ್‌ ಅಂತರದಲ್ಲಿ ಗೆದ್ದ ಆರ್‌ಸಿಬಿ, ರಾಹುಲ್‌ ಗಾಂಧಿ ಸ್ಪರ್ಧಿಸುತ್ತಿರುವ ವಯನಾಡಿನಾಡಿನ ರಾಜಕೀಯ ಚಿತ್ರಣವೇನು? ಕುರುಬ ಸಮುದಾಯದನಾಯಕ ಎನಿಸಿಕೊಳ್ಳಲು ಸಿದ್ದರಾಮಯ್ಯ–ಈಶ್ವರಪ್ಪ ಕಸರತ್ತು, ಮೊದಲ ಹಂತದ ಚುನಾವಣೆದಲ್ಲಿ ಹಕ್ಕು ಚಲಾಯಿಸಿದ ತೃತೀಯ ಲಿಂಗಿಗಳೆಷ್ಟು? ಚುನಾವಣೆ ಹೊಸ್ತಿಲಲ್ಲಿ ಶಿವಮೊಗ್ಗದಲ್ಲಿ ವಶಪಡಿಸಿಕೊಂಡ ಅಕ್ರಮ ಹಣವೆಷ್ಟು? ಬೆಂಗಳೂರು ವಿಮಾನ ನಿಲ್ದಾಣದಲ್ಲೊಂದು ಕಿರುಕಾನನ!

ಇವು ಈ ದಿನದ ಪ್ರಮುಖ ಸುದ್ದಿಗಳು. ಇವುಗಳ ಜೊತೆಗೆ ಸಂಪಾದಕೀಯ, ವಿಶ್ಲೇಷಣೆ, ಅಂಕಣಗಳನ್ನು ಓದಲು ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ಕಿಸಿ.

ಹೇ ಭೂಮಾತೆ, ನಿನ್ನ ಮೇಲೆ ಕಾಲಿಟ್ಟು ನೋಯಿಸುತ್ತಿದ್ದೇವೆ, ಕ್ಷಮಿಸು
ನೀವು ಶಾಲಾ ದಿನಗಳಲ್ಲೇ ಅಟ್ಲಸ್ ನೋಡಿರಬಹುದು. ಅದು ಭೂಪಟ, ಅಲ್ಲಿ ಎಲ್ಲ ಖಂಡಗಳ ಬಗ್ಗೆಯೂ ವಿವರವಿರುತ್ತದೆ. ನದಿ, ಬೆಟ್ಟ, ಸಮುದ್ರ, ಮೈದಾನ, ಪ್ರಸ್ಥಭೂಮಿ, ಕಣಿವೆ ಇತ್ಯಾದಿ. ಅಟ್ಲಸ್ ಹೆಸರಿನ ಹಿಂದೆ ಸಾಹಸದ ಕಥೆಯೊಂದಿದೆ.

ADVERTISEMENT

ಲಂಕಾ: ಸರಣಿ ಸ್ಫೋಟಕ್ಕೆ 215 ಬಲಿ, ನಾಲ್ವರು ಭಾರತೀಯರು ಸಾವು
ರಾಜಧಾನಿ ಕೊಲಂಬೊ ಸೇರಿದಂತೆ ಮೂರು ಕಡೆ ಈಸ್ಟರ್ ಆಚರಣೆಯ ಸಂಭ್ರಮ ದಿನ(ಭಾನುವಾರ) ಸಂಭವಿಸಿದ ಸರಣಿ ಸ್ಫೋಟಗಳಿಂದಾಗಿ ಶ್ರೀಲಂಕಾದಲ್ಲಿ 35 ವಿದೇಶಿಯರು ಸೇರಿದಂತೆ 215ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಏನಿದು ‘ದಿ ಪೆಸಿಫಿಕ್ ಗಾರ್ಬೇಜ್ ಪ್ಯಾಚ್-’?
ಅದರ ಪೂರ್ಣ ಹೆಸರು ‘ದಿ ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್’! ಹೆಸರೇ ಸೂಚಿಸುವಂತೆ ಅದು ಪೆಸಿಫಿಕ್ ಮಹಾಸಾಗರದಲ್ಲಿ ರೂಪುಗೊಂಡಿರುವ ಒಂದು ಮಹಾನ್ ತಿಪ್ಪೆ ಸಾಮ್ರಾಜ್ಯ. ಹಾಗಿದ್ದೂ ಆ ಮಹಾ ಸಾಗರದ ಕಲ್ಪನಾತೀತ ವಿಸ್ತಾರದಿಂದಾಗಿ ಅದು ಕೇವಲ ಕಸದ ಒಂದು ತೇಪೆ (ಗಾರ್ಬೇಜ್ ಪ್ಯಾಚ್) ಯಂತೆ ಕಾಣುತ್ತದೆ ಅಷ್ಟೆ.

ವಯನಾಡಿನಲ್ಲಿ ಒಂದೇ ಪ್ರಶ್ನೆ: ವೈ ನಾಟ್‌ ರಾಹುಲ್‌?
‘ರಾಹುಲ್‌ ಗಾಂಧಿ ಅಷ್ಟು ದೂರದ ಅಮೇಠಿಯಿಂದ ನಮ್ಮ ವಯನಾಡಿಗೆ ಬಂದು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಸಲ ಅವರಿಗೊಂದು ಅವಕಾಶ ಏಕೆ ಕೊಡಬಾರದು?’ ಎನ್ನುತ್ತಾರೆ ಇಲ್ಲಿನ ಬಹುತೇಕ ಮತದಾರರು.

ಸಿಎಸ್‌ಕೆ ವಿರುದ್ಧ ಆರ್‌ಸಿಬಿಗೆ ರೋಚಕ ಜಯ
4,6,6,2,6, ರನ್‌ಔಟ್ ..! -ಭಾನುವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಓವರ್‌ನ ರೋಚಕ ರಸದೌತಣದ ಸಾರಾಂಶವಿದು. ಮಹೇಂದ್ರಸಿಂಗ್ ಧೋನಿಯ ಎಲ್ಲ ಶ್ರಮವೂ ವ್ಯರ್ಥವಾಯಿತು. ಆದರೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಒಂದು ರನ್‌ರೋಚಕ ಜಯ ಒಲಿಯಿತು.

ಸೋಲುವ ಕಡೆ ಕುರುಬರಿಗೆ ಟಿಕೆಟ್‌: ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು
‘ಸೋಲುವಂತಹ ಕ್ಷೇತ್ರಗಳಲ್ಲಿ ಕುರುಬರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿ ತಮ್ಮನ್ನು ಕುರುಬರ ನಾಯಕ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ತಿರುಗೇಟು ನೀಡಿದರು.

ಅಕ್ರಮ ಹಣ, ಮದ್ಯ ವಶ: ಶಿವಮೊಗ್ಗದಲ್ಲೇ ಹೆಚ್ಚು
ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮವಾಗಿ ಹಣ ಮತ್ತು ಮದ್ಯ ಸಾಗಿಸಿದ ಅತೀ ಹೆಚ್ಚು ಪ್ರಕರಣ ದಾಖಲಾಗಿದೆ.

ವಿಮಾನ ನಿಲ್ದಾಣದಲ್ಲಿ ಕಿರು ಕಾನನ, ನಡುವೆ ಕೆರೆಗಳು!
ಸಾಲು ಸಾಲು ಮರಗಳು, ಸಣ್ಣ ಸಣ್ಣ ಕೆರೆಗಳು, ಅಲ್ಲಲ್ಲಿ ತೂಗು ಸೇತುವೆಗಳು, ಕಣ್ಣು ಹಾಯಿಸಿದಲ್ಲೆಲ್ಲ ಹಚ್ಚ ಹಸಿರು... ಯಾವುದೋ ಸಣ್ಣ ಕಾಡಿನೊಳಗೆ ಸುತ್ತಾಡಿದ ಅನುಭವ.
ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಿರ್ಮಿಸುತ್ತಿರುವ ಎರಡನೇ ಟರ್ಮಿನಲ್‌ನ ‘ಪರಿಸರ ಸ್ನೇಹಿ’ ರೂಪವಿದು.

ಸಂವಿಧಾನ ಬದಲಾಯಿಸಿದರೆ ರಕ್ತಪಾತ, ನಾನೇ ಅದರ ನೇತೃತ್ವ ವಹಿಸುವೆ: ಸಿದ್ದರಾಮಯ್ಯ
‘ಸಂವಿಧಾನ ಬದಲಾಯಿಸಲೆಂದೇ ನಾವು ಬಂದಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ದೇಶದ ಧರ್ಮ ಶಾಸ್ತ್ರವಾದ ಸಂವಿಧಾನ ಬದಲಾಯಿಸಿದರೆ ರಕ್ತಪಾತ ಉಂಟಾಗಲಿದೆ. ಅದರ ಮುಂದಾಳತ್ವ ನಾನೇ ವಹಿಸುವೆ’ –ಸಿದ್ದರಾಮಯ್ಯ

ಮೊದಲ ಹಂತ: 502 ತೃತೀಯ ಲಿಂಗಿಗಳು ಮಾತ್ರ ಮತದಾನ
ರಾಜ್ಯದಲ್ಲಿ ಸುಮಾರು ಒಂದು ಲಕ್ಷ ತೃತೀಯ ಲಿಂಗಿಗಳಿದ್ದು, ಈ ಪೈಕಿ, 4,839 ಮಂದಿ ಮಾತ್ರ ಮತದಾರರ ಪಟ್ಟಿಯಲ್ಲಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ 2,022 ಮಂದಿ ಮತದಾರರಿದ್ದರು. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಿದೆ. 2014ರಲ್ಲಿ ರಾಜ್ಯದಲ್ಲಿ 3,890 ತೃತೀಯ ಲಿಂಗಿಗಳು ಮತದಾರರ ಪಟ್ಟಿ ಯಲ್ಲಿದ್ದರು. ಈ ಪೈಕಿ 167 ಜನ ಮಾತ್ರ ಮತ ಚಲಾಯಿಸಿದ್ದರು.

ಸಂಪಾದಕೀಯ: ಸಿದ್ಧ ಮಾದರಿ ಆಲೋಚನೆಯ ಉರುಳಿಗೆ ಸಿಲುಕಿದ ರಾಹುಲ್‌
ವಿವೇಕವನ್ನು ಬಳಸಲು ಇಚ್ಛಿಸದ ಸೋಮಾರಿ ಮನಸ್ಸುಗಳು ಸಿದ್ಧ ಮಾದರಿಗಳನ್ನು ಸೃಷ್ಟಿಸಿಟ್ಟುಕೊಂಡು ಅವುಗಳ ಚೌಕಟ್ಟಿನಲ್ಲೇ ಜಗತ್ತನ್ನು ಗ್ರಹಿಸುತ್ತವೆ. ನಿರ್ದಿಷ್ಟ ಬುಡಕಟ್ಟುಗಳು ಅಪರಾಧಿ ಗುಣವನ್ನು ಹೊಂದಿವೆ ಎಂದು ಬ್ರಿಟಿಷರು ಭಾವಿಸಿದ್ದರು.

ಬೆರಗಿನ ಬೆಳಕು: ಮನಸ್ಸಿನ ಆಟ
ಹಿಂದೆ ಬ್ರಹ್ಮದತ್ತ ರಾಜ್ಯಭಾರಮಾಡುವಾಗ ಬೋಧಿಸತ್ವ ಪಟ್ಟದ ರಾಣಿಯ ಮಗನಾಗಿದ್ದ. ಅವನಿಗೆ ಆರು ಸಹೋದರರು. ಅವರು ದೊಡ್ಡವರಾದ ಮೇಲೆ ಅವರಿಗೆಲ್ಲ ಮದುವೆಯಾಗಿ ಸುಖವಾಗಿದ್ದರು. ಒಮ್ಮೆ ರಾಜ ಯೋಚಿಸಿದ, ಇವರಲ್ಲಿ ಯಾರು ನಿಜವಾಗಿ ಸಮರ್ಥನೋ ಅವನೇ ರಾಜನಾಗಬೇಕು.

ಅಂಕಣ:ವಿದೇಶಕ್ಕೆ ಹಾರುವ ಮುನ್ನ, ಜೋಪಾನ!
ಮುಗಿಲಿನ ದೂರಕೆ ಹಾರಿ, ವಿದೇಶಗಳ ಸುಂದರ ನಗರಗಳನ್ನು ವಾಸ್ತು ವೈಭವನ್ನು ಕಣ್ತುಂಬಿಕೊಳ್ಳಬೇಕು, ಸ್ವಚ್ಛ ಕಡಲ ತೀರದಲ್ಲಿ ವಿಹರಿಸಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸದ ಅನುಭವವನ್ನು ಪಡೆದುಕೊಳ್ಳಬೇಕೆನ್ನುವುದು ಶ್ರೀಸಾಮಾನ್ಯನ ಹೆಬ್ಬಯಕೆ. ಹೀಗೆ ವಿದೇಶ ಪ್ರವಾಸ ಮಾಡುವ ಹಾದಿಯಲ್ಲಿ ನೀವು ನಿಮ್ಮ ಕುಟುಂಬದ ಸುರಕ್ಷತೆಯನ್ನು ಟ್ರಾವೆಲ್ ಇನ್ಶೂರೆನ್ಸ್ ಮೂಲಕ ಖಾತರಿಪಡಿಸಿಕೊಳ್ಳುವುದು ಬಹಳ ಮುಖ್ಯ.

ಅಂಕಣ:ಪಕ್ಷಗಳ ಪ್ರಣಾಳಿಕೆಯಲ್ಲಿ ಶಾಲೆಗಳು ಎಲ್ಲಿವೆ?
ಭಾರತ, 2014ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದಾಗ, ಶಾಲಾ ಶಿಕ್ಷಣದ ವಿಚಾರದಲ್ಲಿ ಉತ್ಸಾಹದ ವಾತಾವರಣ ಇತ್ತು. ಆ ಚುನಾವಣೆ ನಡೆದಿದ್ದು ಪ್ರಧಾನವಾಗಿ ಬೇರೆ ವಿಷಯಗಳನ್ನು ಮುಂದಿರಿಸಿಕೊಂಡಾದರೂ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಶಾಲಾ ಶಿಕ್ಷಣ ವ್ಯವಸ್ಥೆ ಸುಧಾರಣೆಯ ಬಗ್ಗೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದವು. ಆದರೆ, ಈ ವ್ಯವಸ್ಥೆಯಲ್ಲಿನ ಸುಧಾರಣೆ ಕುರಿತ ಉತ್ಸಾಹ ಉಳಿದುಕೊಂಡಿದೆಯೇ? 2019ರ ಚುನಾವಣೆಯಲ್ಲಿ ಶಾಲಾ ಶಿಕ್ಷಣವು ಮುಖ್ಯವಾಗಿ ಉಳಿದುಕೊಂಡಿದೆಯೇ?

ಗಂಟಲಲ್ಲಿ ಋಣದ ಕಡುಬು?
ಮುಗಿಲಿನ ದೂರಕೆ ಹಾರಿ, ವಿದೇಶಗಳ ಸುಂದರ ನಗರಗಳನ್ನು ವಾಸ್ತು ವೈಭವನ್ನು ಕಣ್ತುಂಬಿಕೊಳ್ಳಬೇಕು, ಸ್ವಚ್ಛ ಕಡಲ ತೀರದಲ್ಲಿ ವಿಹರಿಸಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸದ ಅನುಭವವನ್ನು ಪಡೆದುಕೊಳ್ಳಬೇಕೆನ್ನುವುದು ಶ್ರೀಸಾಮಾನ್ಯನ ಹೆಬ್ಬಯಕೆ. ಹೀಗೆ ವಿದೇಶ ಪ್ರವಾಸ ಮಾಡುವ ಹಾದಿಯಲ್ಲಿ ನೀವು ನಿಮ್ಮ ಕುಟುಂಬದ ಸುರಕ್ಷತೆಯನ್ನು ಟ್ರಾವೆಲ್ ಇನ್ಶೂರೆನ್ಸ್ ಮೂಲಕ ಖಾತರಿಪಡಿಸಿಕೊಳ್ಳುವುದು ಬಹಳ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.