ADVERTISEMENT

Infographics| ಭಾರತ ಬಯಲು ಶೌಚ ಮುಕ್ತ ಎಂಬ ಮಿಥ್ಯೆಗೆ ಎರಡು ವರ್ಷ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 19:30 IST
Last Updated 30 ಸೆಪ್ಟೆಂಬರ್ 2021, 19:30 IST
   

ಭಾರತವು ಬಯಲು ಶೌಚ ಮುಕ್ತ ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019ರ ಅಕ್ಟೋಬರ್ 2ರಂದು ಘೋಷಿಸಿದ್ದರು. ಆ ಘೋಷಣೆಯಾಗಿ ಇದೇ ಅಕ್ಟೋಬರ್ 2ಕ್ಕೆ ಎರಡು ವರ್ಷವಾಗಲಿದೆ. ಆದರೆ ದೇಶದ ಹಲವು ರಾಜ್ಯಗಳ ಶೇ 100ರಷ್ಟು ಮನೆಗಳಲ್ಲಿ ಪ್ರತ್ಯೇಕ ಶೌಚಾಲಯ ಇನ್ನೂ ನಿರ್ಮಾಣವಾಗಿಲ್ಲ. ದೇಶದ ಎಲ್ಲಾ ರಾಜ್ಯಗಳೂ, ಎಲ್ಲಾ ಗ್ರಾಮಗಳನ್ನೂ ಶೇ 100ರಷ್ಟು ಬಯಲು ಶೌಚ ಮುಕ್ತ ಎಂದು ಘೋಷಿಸಿಲ್ಲ. ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿರುವ ಎಲ್ಲಾ ಗ್ರಾಮಗಳ ಪರಿಶೀಲನೆಯೂ ನಡೆದಿಲ್ಲ. ದೇಶದ 35,000ಕ್ಕೂ ಹೆಚ್ಚು ಹಳ್ಳಿಗಳು ಇನ್ನೂ ಬಯಲು ಶೌಚ ಮುಕ್ತ ಎಂಬ ಪ್ರಮಾಣಪತ್ರ ಪಡೆದಿಲ್ಲ. ಆದರೆ ಸರ್ಕಾರವು ಮಾತ್ರ ಎರಡು ವರ್ಷಗಳ ಹಿಂದೆಯೇ, ‘ಭಾರತವು ಬಯಲು ಶೌಚ ಮುಕ್ತ ದೇಶವಾಗಿದೆ’ ಎಂದು ಘೋಷಿಸಿದೆ. ಅದಾಗಿ ಎರಡು ವರ್ಷ ಕಳೆದರೂ ಘೋಷಣೆಯು ಸಂಪೂರ್ಣ ಸತ್ಯವಾಗಿಲ್ಲ

--------------

ಐದು ರಾಜ್ಯಗಳು ಬಯಲು ಶೌಚ ಮುಕ್ತವಲ್ಲ

ADVERTISEMENT

ಶೇ 100ರಷ್ಟು ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿರುವ ರಾಜ್ಯಗಳು

ರಾಜ್ಯ;ಕುಟುಂಬವು ಪ್ರತ್ಯೇಕ ಶೌಚಾಲಯ ಹೊಂದಿರುವ ಪ್ರಮಾಣ

ಪಂಜಾಬ್;99.72%

ಬಿಹಾರ;99.5%

ಮಹಾರಾಷ್ಟ್ರ;99.9%

ಮಣಿಪುರ;99.9%

ತಮಿಳುನಾಡು;99.9%

---

35 ಸಾವಿರ ಹಳ್ಳಿಗಳಲ್ಲಿ ಇನ್ನೂ ಬಯಲು ಶೌಚ

6,38,588: 2011ರ ಜನಗಣತಿ ಪ್ರಕಾರ ದೇಶದಲ್ಲಿರುವ ಗ್ರಾಮಗಳ ಸಂಖ್ಯೆ

6,03,004: 2021ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿದ್ದ ಗ್ರಾಮಗಳ ಸಂಖ್ಯೆ

6,01,780: 2021ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬಯಲು ಶೌಚ ಮುಕ್ತ ಎಂಬುದು ದೃಢಪಟ್ಟ ಗ್ರಾಮಗಳ ಸಂಖ್ಯೆ

35,361: ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಳ್ಳದೇ ಇರುವ ಗ್ರಾಮಗಳ ಸಂಖ್ಯೆ

1,224: ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿದ್ದರೂ, ಅದು ದೃಢಪಡದ ಗ್ರಾಮಗಳ ಸಂಖ್ಯೆ

---

ಶೇ 27ರಷ್ಟು ನಗರಗಳಲ್ಲಿನ್ನೂ ಬಯಲು ಶೌಚ ರೂಢಿ

4,520: ದೇಶದಲ್ಲಿರುವ ಒಟ್ಟು ನಗರಗಳ ಸಂಖ್ಯೆ

4,369 (97%): ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿರುವ ನಗರಗಳು

4,316 (95%): ಬಯಲು ಶೌಚ ಮುಕ್ತ ಎಂಬ ಘೋಷಣೆ ಪರಿಶೀಲನೆಗೆ ಒಳಪಟ್ಟ ನಗರಗಳು

3,305 (73%): ಬಯಲು ಶೌಚ ಮುಕ್ತ ಎಂಬ ಪ್ರಮಾಣಪತ್ರ ಪಡೆದ ನಗರಗಳ ಸಂಖ್ಯೆ

1,011 (23%): ಬಯಲು ಶೌಚ ಮುಕ್ತ ಎಂಬ ಘೋಷಣೆ ತಿರಸ್ಕರಿಸಲ್ಪಟ್ಟ ನಗರಗಳು

1,215 (27%): ಬಯಲು ಶೌಚ ಮುಕ್ತವಲ್ಲದ ನಗರಗಳ ಸಂಖ್ಯೆ

ದೇಶದಲ್ಲಿರುವ ಒಟ್ಟು ನಗರಗಳಲ್ಲಿ ಶೇ 97ರಷ್ಟು ನಗರಗಳಷ್ಟೇ ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ. ಒಟ್ಟು ನಗರಗಳಲ್ಲಿ ಶೇ 95ರಷ್ಟು ನಗರಗಳು ನಿಜವಾಗಿಯೂ ಬಯಲು ಶೌಚ ಮುಕ್ತವಾಗಿವೆಯೇ ಎಂಬುದನ್ನು ಪರಿಶೀಲಿಸಲಾಗಿದೆ. ಇವುಗಳಲ್ಲಿ ಶೇ 23ರಷ್ಟು ನಗರಗಳು ಬಯಲು ಶೌಚ ಮುಕ್ತವಾಗಿಲ್ಲ ಎಂಬುದು ದೃಢಪಟ್ಟಿದೆ. ಹೀಗಾಗಿಒಟ್ಟು ನಗರಗಳಲ್ಲಿ ಶೇ 73ರಷ್ಟು ನಗರಗಳಿಗಷ್ಟೇ ಬಯಲು ಶೌಚ ಮುಕ್ತ ನಗರ ಎಂಬ ಪ್ರಮಾಣ ಪತ್ರ ದೊರೆತಿದೆ.ಶೇ 27ರಷ್ಟು ನಗರಗಳು ಬಯಲುಶೌಚ ಮುಕ್ತವಾಗಿಯೇ ಇಲ್ಲ. ಹೀಗಿದ್ದೂ ಸರ್ಕಾರವು ‘ಭಾರತವು ಬಯಲು ಶೌಚ ಮುಕ್ತ ದೇಶ’ ಎಂದು ಘೋಷಿಸಿದೆ

ಆಧಾರ: ಸ್ವಚ್ಛಭಾರತ ಗ್ರಾಮೀಣ ಡ್ಯಾಶ್‌ಬೋರ್ಡ್‌, ಸ್ವಚ್ಛಭಾರತ ನಗರ ಡ್ಯಾಶ್‌ಬೋರ್ಡ್‌, 2011ರ ಜನಗಣತಿ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.