ADVERTISEMENT

ಒಳನೋಟ| ಸೈಬರ್ ಅಪರಾಧಗಳ ಹಬ್ ‘ಜಾಮತಾರಾ, ಕರಮಾಟಾಂಡ್’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 20:14 IST
Last Updated 10 ಸೆಪ್ಟೆಂಬರ್ 2022, 20:14 IST
ಜಾರ್ಖಂಡ್‌ನ ಜಾಮತಾರಾ ಗ್ರಾಮದಲ್ಲಿರುವ ಸೈಬರ್ ಕ್ರೈಂ ಠಾಣೆ ಹೊರನೋಟ
ಜಾರ್ಖಂಡ್‌ನ ಜಾಮತಾರಾ ಗ್ರಾಮದಲ್ಲಿರುವ ಸೈಬರ್ ಕ್ರೈಂ ಠಾಣೆ ಹೊರನೋಟ   

ಜಾರ್ಖಂಡ್‌ ರಾಜ್ಯದ ಜಾಮತಾರ್ ಹಾಗೂ ಕರಮಾಟಾಂಡ್ ಎಂಬ ಗ್ರಾಮಗಳು, ಸೈಬರ್ ವಂಚನೆ ಹಬ್‌ ಎನಿಸಿಕೊಂಡಿವೆ. ಇಲ್ಲಿಯ ಬಹುತೇಕ ಗ್ರಾಮಸ್ಥರೇ ಸೈಬರ್‌ ವಂಚಕರಾಗಿ ಮಾರ್ಪಟ್ಟು, ದೇಶದೆಲ್ಲೆಡೆ ಅಪರಾಧ ಎಸಗುತ್ತಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಸೈಬರ್ ಅಪರಾಧಗಳ ತನಿಖೆ ಕೈಗೊಂಡ ಪ್ರತಿಯೊಂದು ರಾಜ್ಯದ ಪೊಲೀಸರ ತಂಡಗಳು, ಎರಡೂ ಗ್ರಾಮಗಳಿಗೂ ಭೇಟಿ ನೀಡುತ್ತಾರೆ. ಸ್ಥಳೀಯರೇ ಸೈಬರ್ ವಂಚಕರೆಂಬುದು ಹಲವು ಬಾರಿ ನ್ಯಾಯಾಲಯದಲ್ಲೂ ಸಾಬೀತು ಆಗಿದೆ. ಇದೇ ಕಾರಣಕ್ಕೆ 5 ಸಾವಿರ ಜನಸಂಖ್ಯೆಯೂ ಇಲ್ಲದ ಜಾಮತಾರಾದಲ್ಲಿ ಪ್ರತ್ಯೇಕವಾಗಿ ಸೈಬರ್ ಕ್ರೈಂ ಠಾಣೆ ತೆರೆಯಲಾಗಿದೆ. ಡಿವೈಎಸ್ಪಿ ದರ್ಜೆ ಅಧಿಕಾರಿ ಠಾಣೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದು, ಹೊರರಾಜ್ಯಗಳಿಂದ ಬರುವ ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದಾರೆ.

‘ಜಾಮತಾರಾ, ಕರಮಾಟಾಂಡ್ ಗ್ರಾಮದಲ್ಲಿ ಅರ್ಧಕ್ಕೆ ಶಾಲೆ ಬಿಟ್ಟವರು ಹೆಚ್ಚಿದ್ದಾರೆ. ಅವರೆಲ್ಲ ಬಡವರು. ಹಣದ ಆಮಿಷವೊಡ್ಡಿ ಅವರಿಗೆ ಸೈಬರ್ ಅಪರಾಧಗಳ ತರಬೇತಿ ನೀಡಲಾಗುತ್ತದೆ. ನಂತರ ವಂಚನೆಗೆ ಬಳಸಿಕೊಳ್ಳಲಾಗುತ್ತದೆ. ದಿನ ಕಳೆದಂತೆ ಗ್ರಾಮಸ್ಥರೇ ಸ್ವತಂತ್ರವಾಗಿ ವಂಚನೆಗೆ ಇಳಿಯುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಸೈಬರ್ ವಂಚನೆಗೂಜಾಮತಾರಾ, ಕರಮಾಟಾಂಡ್ ಗ್ರಾಮಗಳಿಗೂ ನಂಟು ಇದ್ದೇ ಇದೆ’ ಎಂದು ಸೈಬರ್ ಕ್ರೈಂ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.

ADVERTISEMENT

‘ಎರಡೂ ಗ್ರಾಮಗಳಲ್ಲಿ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳು, 25ಕ್ಕೂ ಹೆಚ್ಚು ಎಟಿಎಂಗಳು, 15ಕ್ಕೂ ಹೆಚ್ಚು ಮೊಬೈಲ್ ಟವರ್‌ಗಳು, 25ಕ್ಕೂ ಹೆಚ್ಚು ಸೈಬರ್ ಸೆಂಟರ್‌ಗಳಿವೆ. ಇವೆಲ್ಲವೂ ವಂಚನೆಗೆ ಸಹಕಾರಿಯಾಗಿವೆ. ಸ್ಥಳೀಯ ಕೆಲ ಪೊಲೀಸರೂ ಆರೋಪಿಗಳ ಜೊತೆ ಕೈ ಜೋಡಿಸಿದ್ದಾರೆ. ಹೊರ ರಾಜ್ಯಗಳಿಂದ ಬಂಧಿಸಲು ಬರುವ ಪೊಲೀಸರ ಮೇಲೆ ದಾಳಿ ಮಾಡುವ ಪ್ರವೃತ್ತಿ ಬೆಳೆದಿದೆ. ಹೀಗಾಗಿ, ಗ್ರಾಮದಲ್ಲಿರುವ ವಂಚಕರನ್ನು ಸಂಪೂರ್ಣವಾಗಿ ಸದೆಬಡಿಯಲು ಸಾಧ್ಯವಾಗುತ್ತಿಲ್ಲ’ ಎಂದು ವಸ್ತುಸ್ಥಿತಿ ತೆರೆದಿಡುತ್ತಾರೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.