ADVERTISEMENT

ಒಳನೋಟ | ಸಿರಿಧಾನ್ಯ: ₹47 ಲಕ್ಷ ವೆಚ್ಚದ ಸಂಸ್ಕರಣಾ ಯಂತ್ರ

ನಾಗರಾಜ ಚಿನಗುಂಡಿ
Published 27 ನವೆಂಬರ್ 2021, 20:43 IST
Last Updated 27 ನವೆಂಬರ್ 2021, 20:43 IST
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ ಸಿರಿಧಾನ್ಯ
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ ಸಿರಿಧಾನ್ಯ   

ರಾಯಚೂರು: ಸಿರಿಧಾನ್ಯ ಬೆಳೆಯುವ ರೈತರ ಅನುಕೂಲಕ್ಕಾಗಿ ರಾಯಚೂರು ವಿಶ್ವವಿದ್ಯಾಲಯದಲ್ಲಿ ₹ 47 ಲಕ್ಷ ವೆಚ್ಚದಲ್ಲಿ ಸಂಸ್ಕರಣಾ ಯಂತ್ರ ಹಾಕಲಾಗಿದೆ. ಮೂರು ತಿಂಗಳಿಂದ ಯಂತ್ರವು ಕೆಲಸ ಮಾಡುತ್ತಿದೆ. ಈ ಯಂತ್ರದಿಂದ ಗಂಟೆಗೆ ಒಂದು ಟನ್‌ ಸಿರಿಧಾನ್ಯ ಸಂಸ್ಕರಣೆ ಮಾಡುವುದರ ಜೊತೆಗೆ ಪ್ಯಾಕಿಂಗ್‌ ಹಾಗೂ ಲೇಬಲಿಂಗ್‌ ಕೂಡ ಮಾಡಬಹುದಾಗಿದೆ. ಸಂಸ್ಕರಣೆ ಮಾಡಲು ಪ್ರತಿ ಕೆ.ಜಿ.ಗೆ ₹ 5 ಹಾಗೂ ಪ್ಯಾಕಿಂಗ್‌ ಹಾಗೂ ಲೇಬಲಿಂಗ್‌ಗೆ ಹೆಚ್ಚುವರಿ ₹ 2 ಶುಲ್ಕ ಪಡೆಯಲಾಗುತ್ತದೆ.

‘ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಂದ ರೈತರು ಸಂಸ್ಕರಣೆಗಾಗಿ ಸಿರಿಧಾನ್ಯಗಳನ್ನು ತೆಗೆದುಕೊಂಡು ಬರುತ್ತಿದ್ದಾರೆ. ಸಿರಿಧಾನ್ಯ ಮೌಲ್ಯವರ್ಧನೆ ತರಬೇತಿ ವ್ಯವಸ್ಥೆಯೂ ವಿಶ್ವವಿದ್ಯಾಲಯದಲ್ಲಿದೆ’ ಎನ್ನವುದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಉದಯಕುಮಾರ್‌ ನಿಡೋಣಿ ಅವರ ಹೇಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT