ADVERTISEMENT

ಒಳನೋಟ: ಮೊಬೈಲ್‌ ಆ್ಯಪ್‌ ಸಿದ್ದವಿಲ್ಲ!– ರೈತರೇ ಪೋಡಿ ಮಾಡಿಕೊಳ್ಳಲು ಆಗಲ್ಲ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 19:30 IST
Last Updated 4 ಜೂನ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೊಡ್ಡಬಳ್ಳಾಪುರ: ಸರ್ವೇ, ಪೋಡಿ, ವಸತಿ ಉದ್ದೇಶದ ಭೂ ಪರಿರ್ವತನೆ ಸೇರಿದಂತೆ ಕಂದಾಯ ಇಲಾಖೆಯ ಬಹುತೇಕ ಸೇವೆಗಳನ್ನು ಆನ್‌ಲೈನ್‌ ಮೂಲಕ ರೈತರೇ ಮಾಡಿಕೊಳ್ಳುವಂತೆ ಸರಳೀಕರಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳುತ್ತಲೇ ಇದ್ದಾರೆ. ಆದರೆ ವಾಸ್ತವದಲ್ಲಿ ಆ ಮೊಬೈಲ್ ಆ್ಯಪ್ ಇನ್ನೂ ಸಿದ್ಧವಾಗಿಯೇ ಇಲ್ಲ!

ಕಾರ್ಯಕ್ರಮಗಳಲ್ಲಿ ಅವರು ನೀಡಿದ ಭರವಸೆ ಈಡೇರಿಲ್ಲ. ರೈತರೇ ಪೋಡಿ ಮಾಡಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ.

‘ಸದ್ಯ, ರೈತರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಇದು ಸಹ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ’ ಎಂಬುದು ಗ್ರಾಮಸ್ಥರ ದೂರು.

ADVERTISEMENT

‘ರೈತರು ಪೋಡಿ ಮಾಡಿಕೊಳ್ಳಲು ಆನ್ ಮೂಲಕ ಅರ್ಜಿ ಸಲ್ಲಿಗೆ ಲಿಂಕ್ https:// bhoomojini.karnataka.gov.in ಇದು. ‘ಆದರೆ ಈ ಲಿಂಕ್‌ ತೆರೆದು ಪೋಡಿ ಪ್ರಕ್ರಿಯೆ ನಡೆಸುವುದು ಸದ್ಯಕ್ಕಂತೂ ಅಸಾಧ್ಯ. ಹೀಗಾಗಿ ಭರವಸೆ ನೀಡುವುದನ್ನು ಸಚಿವರು ತಕ್ಷಣಕ್ಕೆ ನಿಲ್ಲಿಸಬೇಕು’ ಎಂದು ಬೆಂಗಳೂರು ಗ್ರಾಮಾಂತರ ರೈತ ಸಂಘದ ಜಿಲ್ಲಾ ಮುಖಂಡ ತಿಪ್ಪೂರು ಮುತ್ತೇಗೌಡ ಆಗ್ರಹಿಸಿದರು.

‘ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಹತ್ತಾರು ಬಾರಿ ಪ್ರಯತ್ನ ಪಟ್ಟರೂ ಓಟಿಪಿ ಬರುವುದೇ ಇಲ್ಲ. ಓಟಿಪಿ ಬಾರದ ಹೊರತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣವಾಗುವುದಿಲ್ಲ. ಹೀಗಾಗಿ ರೈತರು ತಾವೇ ತಮ್ಮ ಜಮೀನು ಪೋಡಿ ಮಾಡಿಕೊಳ್ಳಬಹುದು ಎನ್ನುವ ಮಾತು ಹೇಳಿಕೆಗೆ ಮಾತ್ರವೇ ಸೀಮಿತವಾಗಿದೆ. ಕಂದಾಯ ಸಚಿವರ ಹೇಳಿಕೆಗಳು ವಾಸ್ತವದಲ್ಲಿ ಜಾರಿಗೆ ಬಂದರಷ್ಟೇ ರೈತರಿಗೆ ಅನುಕೂಲವಾಗುತ್ತದೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.