ADVERTISEMENT

ಒಳನೋಟ: ಶುದ್ಧ ನೀರು ಕೊಡುವಲ್ಲಿ ಜೆಜೆಎಂ ಅನುಷ್ಠಾನ– ಗುರಿ ತಲುಪಲು ಏದುಸಿರು

ವಿ.ಎಸ್.ಸುಬ್ರಹ್ಮಣ್ಯ
Published 2 ಜುಲೈ 2022, 20:15 IST
Last Updated 2 ಜುಲೈ 2022, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಮನೆ ಮನೆಗೂ ಗಂಗೆ’ ಘೋಷಣೆಯಡಿ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರುಪೂರೈಸುವ ಜಲ ಜೀವನ ಮಿಷನ್‌ (ಜೆಜೆಎಂ) ಕಾಮಗಾರಿಗಳ ಅನುಷ್ಠಾನಕ್ಕೆ ಹತ್ತಾರು ಅಡೆತಡೆ ಎದುರಾಗುತ್ತಲೇ ಇವೆ. 2023–24ನೇ ಆರ್ಥಿಕ ವರ್ಷದ ಅಂತ್ಯದೊಳಗೆ ಗ್ರಾಮೀಣ ಪ್ರದೇಶದ ಎಲ್ಲ ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಗುರಿ ಸಾಧಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೆಜ್ಜೆ ಹಾಕಲು ಏದುಸಿರು ಬಿಡುತ್ತಿದೆ.

2019ರಲ್ಲಿ ಕೇಂದ್ರ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿತು. ಆದರೆ, ಕರ್ನಾಟಕದಲ್ಲಿ ಭೌತಿಕವಾಗಿ ಯೋಜನೆ ಅನುಷ್ಠಾನ ಆರಂಭವಾಗಿದ್ದು 2020ರಲ್ಲಿ. ಒಟ್ಟು ₹ 41,800 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಈ ಯೋಜನೆ ಅನುಷ್ಠಾನವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇಕಡ 50ರಷ್ಟು ವೆಚ್ಚ ಭರಿಸುತ್ತಿವೆ.

₹ 11,010 ಕೋಟಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸ ಬೇಕಾಗಿದೆ.

ADVERTISEMENT

ಸುಸ್ಥಿರ ಜಲ ಮೂಲಗಳಿಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನೀರು ಪೂರೈಕೆಗೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ₹ 30,790 ಕೋಟಿ ವ್ಯಯಿಸಲಾಗುತ್ತಿದೆ.

ಜೆಜೆಎಂ ಅಡಿ ರಾಜ್ಯದಲ್ಲಿ 1.01 ಕೋಟಿ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಸುವ ಗುರಿ ಇದೆ. ಈವರೆಗೆ 51.34 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಶೇಕಡ 50.74ರಷ್ಟು ಪ್ರಗತಿಯಾಗಿದ್ದು, ಉಳಿದ ಸುಮಾರು 50 ಲಕ್ಷ ಮನೆಗಳಿಗೆ ಇನ್ನು ಒಂದೂವರೆ ವರ್ಷದೊಳಗೆ ಸಂಪರ್ಕ ಕಲ್ಪಿಸಬೇಕಿದೆ.

2020–21ರಲ್ಲಿ 3.43 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದ್ದರೆ, 2021–22ರಲ್ಲಿ 25.17 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು. 2021–22ರಲ್ಲಿ ಕೇಂದ್ರ ಸರ್ಕಾರ ₹ 10,000 ಕೋಟಿ ಅನುದಾನ ಒದಗಿಸಿತ್ತು. ಆದರೆ, ರಾಜ್ಯಕ್ಕೆ ಬಳಸಲು ಸಾಧ್ಯವಾಗಿದ್ದು ₹ 4,000 ಕೋಟಿ ಮಾತ್ರ.

‘ಜೆಜೆಎಂ ಅನುಷ್ಠಾನದಲ್ಲಿ ನಿಗದಿತ ಗುರಿಗೆ ಹೋಲಿಸಿದರೆ ಶೇ 25ಕ್ಕಿಂತ ಕಡಿಮೆ ಸಾಧನೆ ಮಾಡಿದ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ’ ಎಂದು ಸಂಸತ್ತಿನ ಸ್ಥಾಯಿ ಸಮಿತಿಯ ವರದಿಯಲ್ಲೇ ಆಕ್ಷೇಪ ವ್ಯಕ್ತವಾಗಿತ್ತು.

ಆರಂಭದಲ್ಲೇ ತೊಡಕು: ‘2019ರಲ್ಲಿ ಯೋಜನೆ ಅನುಷ್ಠಾನ ಆರಂಭಿಸಿದಾಗಲೇ ತೊಡಕು ಎದುರಾಗಿದ್ದವು. ಜಲ ಮೂಲಗಳನ್ನು ಗುರುತಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ಕೊಳವೆ ಮಾರ್ಗದ ನಕ್ಷೆ ಮತ್ತು ಯೋಜನಾ ವರದಿ ಸಿದ್ಧಪಡಿಸುವುದು ವಿಳಂಬವಾಯಿತು. ಕೆಲವು ಪ್ರದೇಶಗಳಲ್ಲಿ ಭಾಗಶಃ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಲಾಗಿತ್ತು. 2020ಲ್ಲಿ ಭೌತಿಕ ಅನುಷ್ಠಾನ ಆರಂಭವಾದ ಬಳಿಕವೇ ಲೋಪಗಳು ಸ್ಪಷ್ಟವಾಗಿ ಗೋಚರಿಸಿದವು‘ ಎನ್ನುತ್ತವೆ ಜೆಜೆಎಂ ಅನುಷ್ಠಾನ ಘಟಕದ ಮೂಲಗಳು.

‘ಈಗಲೂ ನಲ್ಲಿ ಸಂಪರ್ಕ ಕಲ್ಪಿಸುವ ಕೆಲಸ ಸ್ವಲ್ಪ ವೇಗವಾಗಿ ನಡೆದಿದೆ. ಆದರೆ, ಸುಸ್ಥಿರ ಜಲ ಮೂಲಗಳಿಂದ ನೀರು ತರುವುದಕ್ಕೆ ಪೂರಕ ಕಾಮಗಾರಿಗಳು ಹೆಚ್ಚು ವೇಗ ಪಡೆದಿಲ್ಲ. ಹೆಚ್ಚಿನ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಅವು ಪೂರ್ಣಗೊಂಡು ನೀರು ಪೂರೈಕೆ ಆರಂಭವಾಗಲು ದೀರ್ಘ ಕಾಲ ಬೇಕಾಗಬಹುದು’ ಎನ್ನುತ್ತಾರೆ ಅಧಿಕಾರಿಗಳು.

ಅಲ್ಲಲ್ಲಿ ಕಳಪೆ ಕಾಮಗಾರಿ ಆರೋಪ

ಜೆಜೆಎಂ ಯೋಜನೆ ಆರಂಭವಾದ ದಿನಗಳಿಂದಲೂ ಕಳಪೆ ಕಾಮಗಾರಿಯ ಆರೋಪ ಕೇಳಿಬರುತ್ತಲೇ ಇದೆ. ಗ್ರಾಮ ಪಂಚಾಯಿತಿಗಳು ಹಿಂದೆ ನಿರ್ಮಿಸಿದ್ದ ನೀರು ಪೂರೈಕೆ ಜಾಲವನ್ನೇ ಈ ಯೋಜನೆ ಹೆಸರಿಗೆ ಬಳಸಿಕೊಂಡಿರುವ ದೂರು ಕೆಲವೆಡೆ ಇದೆ. ಕೆಲ ಗ್ರಾಮಗಳಲ್ಲಿ ಈ ಯೋಜನೆಯಡಿ ಹಾಕಿದ ಕೊಳವೆ ಮಾರ್ಗಗಳ ಪೈಪ್‌ಗಳು ಕೆಲವೇ ದಿನಗಳಲ್ಲಿ ಒಡೆದುಹೋಗಿದ್ದು, ಕಳಪೆ ಪೈಪ್‌ ಬಳಸುತ್ತಿರುವ ಆರೋಪವಿದೆ. ಕೆಲವೆಡೆ ನಲ್ಲಿ ಸಂಪರ್ಕ ಮಾತ್ರ ಇದ್ದು, ನೀರು ಹರಿಯುವುದೇ ಇಲ್ಲ ಎಂಬ ದೂರುಗಳಿವೆ.

ಸಮಾಧಾನಕರ ಸ್ಥಿತಿಗೆ ತಲುಪಿದ್ದೇವೆ: ಅತೀಕ್‌

‘ಜೆಜೆಎಂ ಅಡಿಯಲ್ಲಿ ರಾಜ್ಯದ 28,630 ಹಳ್ಳಿಗಳಿಗೆ ನೀರು ಪೂರೈಸಬೇಕಿದೆ. ಆರಂಭದ ದಿನಗಳಲ್ಲಿ ಈ ಯೋಜನೆಯ ಪ್ರಗತಿ ಕುಂಠಿತವಾಗಿತ್ತು. ಈಗ ಸಮಾಧಾನಕರ ಸ್ಥಿತಿಗೆ ಬಂದು ತಲುಪಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಹೇಳಿದರು.

‘ಏಳು ಜಿಲ್ಲೆಗಳಲ್ಲಿ ನೀರಿನ ಮೂಲದ ಕೊರತೆ ಇದೆ. ಅಲ್ಲಿ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಜೆಜೆಎಂ ಅನುಷ್ಠಾನ ಪೂರ್ಣಗೊಳಿಸಬೇಕಿರುವ ಗಡುವನ್ನು 2024ರವರೆಗೂ ವಿಸ್ತರಿಸಬೇಕೆಂಬ ರಾಜ್ಯ ಸರ್ಕಾರದ ಕೋರಿಕೆಯನ್ನು ಕೇಂದ್ರ ಸರ್ಕಾರ ಮಾನ್ಯ ಮಾಡಿದೆ’ ಎಂದರು.

ಜೆಜೆಎಂ ಯೋಜನೆ

ಯೋಜನೆ ವ್ಯಾಪ್ತಿಯಲ್ಲಿರುವ ಒಟ್ಟು ಮನೆಗಳು– 1.01 ಕೋಟಿ

ನಲ್ಲಿ ಸಂಪರ್ಕ ಕಲ್ಪಿಸಿರುವ ಮನೆಗಳು– 51.34 ಲಕ್ಷ

ಒಟ್ಟು ಯೋಜನಾ ವೆಚ್ಚ– ₹ 41,800 ಕೋಟಿ

ನಲ್ಲಿ ಸಂಪರ್ಕ ಕಲ್ಪಿಸಲು– ₹ 11,010 ಕೋಟಿ

ಜಲ ಮೂಲಗಳಿಂದ ನೀರು ತರ‌ಲು– ₹ 30,790 ಕೋಟಿ

ಅಲ್ಲಲ್ಲಿ ಕಳಪೆ ಕಾಮಗಾರಿ ಆರೋಪ

ಜೆಜೆಎಂ ಯೋಜನೆ ಆರಂಭವಾದ ದಿನಗಳಿಂದಲೂ ಕಳಪೆ ಕಾಮಗಾರಿಯ ಆರೋಪ ಕೇಳಿಬರುತ್ತಲೇ ಇದೆ. ಗ್ರಾಮ ಪಂಚಾಯಿತಿಗಳು ಹಿಂದೆ ನಿರ್ಮಿಸಿದ್ದ ನೀರು ಪೂರೈಕೆ ಜಾಲವನ್ನೇ ಈ ಯೋಜನೆ ಹೆಸರಿಗೆ ಬಳಸಿಕೊಂಡಿರುವ ದೂರು ಕೆಲವೆಡೆ ಇದೆ. ಕೆಲ ಗ್ರಾಮಗಳಲ್ಲಿ ಈ ಯೋಜನೆಯಡಿ ಹಾಕಿದ ಕೊಳವೆ ಮಾರ್ಗಗಳ ಪೈಪ್‌ಗಳು ಕೆಲವೇ ದಿನಗಳಲ್ಲಿ ಒಡೆದುಹೋಗಿದ್ದು, ಕಳಪೆ ಪೈಪ್‌ ಬಳಸುತ್ತಿರುವ ಆರೋಪವಿದೆ. ಕೆಲವೆಡೆ ನಲ್ಲಿ ಸಂಪರ್ಕ ಮಾತ್ರ ಇದ್ದು, ನೀರು ಹರಿಯುವುದೇ ಇಲ್ಲ ಎಂಬ ದೂರುಗಳಿವೆ.

ಸಮಾಧಾನಕರ ಸ್ಥಿತಿಗೆ ತಲುಪಿದ್ದೇವೆ: ಅತೀಕ್‌

‘ಜೆಜೆಎಂ ಅಡಿಯಲ್ಲಿ ರಾಜ್ಯದ 28,630 ಹಳ್ಳಿಗಳಿಗೆ ನೀರು ಪೂರೈಸಬೇಕಿದೆ. ಆರಂಭದ ದಿನಗಳಲ್ಲಿ ಈ ಯೋಜನೆಯ ಪ್ರಗತಿ ಕುಂಠಿತವಾಗಿತ್ತು. ಈಗ ಸಮಾಧಾನಕರ ಸ್ಥಿತಿಗೆ ಬಂದು ತಲುಪಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಹೇಳಿದರು.

‘ಏಳು ಜಿಲ್ಲೆಗಳಲ್ಲಿ ನೀರಿನ ಮೂಲದ ಕೊರತೆ ಇದೆ. ಅಲ್ಲಿ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಜೆಜೆಎಂ ಅನುಷ್ಠಾನ ಪೂರ್ಣಗೊಳಿಸಬೇಕಿರುವ ಗಡುವನ್ನು 2024ರವರೆಗೂ ವಿಸ್ತರಿಸಬೇಕೆಂಬ ರಾಜ್ಯ ಸರ್ಕಾರದ ಕೋರಿಕೆಯನ್ನು ಕೇಂದ್ರ ಸರ್ಕಾರ ಮಾನ್ಯ ಮಾಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.