ADVERTISEMENT

ಒಳನೋಟ | ಮಾಹಿತಿ ನೀಡಿದ್ದಕ್ಕೆ ಜೀವ ತೆತ್ತ ಯಲ್ಲಾಲಿಂಗ

ಪ್ರಮೋದ
Published 18 ಜೂನ್ 2022, 20:04 IST
Last Updated 18 ಜೂನ್ 2022, 20:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಪ್ಪಳ: ಸರ್ಕಾರದ ಕಾಮಗಾರಿ ಗಳ ಭ್ರಷ್ಟಾಚಾರದ ಬಗ್ಗೆ ಮಾಧ್ಯಮ ಗಳಿಗೆ ಮಾಹಿತಿ ನೀಡಿದ ಎಂಬ ಕಾರಣಕ್ಕೆ ಯಲ್ಲಾಲಿಂಗ ಎಂಬ ವಿದ್ಯಾರ್ಥಿ ಜೀವವನ್ನೇ ಕಳೆದು ಕೊಳ್ಳಬೇಕಾಯಿತು.

ಕನಕಗಿರಿ ತಾಲ್ಲೂಕಿನ ಕನಕಾ ಪುರ ಗ್ರಾಮದ ಯಲ್ಲಾಲಿಂಗ 2015ರಲ್ಲಿ ಊರಿನಲ್ಲಿ ಚರಂಡಿ, ರಸ್ತೆ ಹಾಗೂ ಜನತಾ ಮನೆಗಳ ಅವ್ಯವಸ್ಥೆ ಕುರಿತು ಸ್ಥಳೀಯ ಟಿವಿ ವಾಹಿನಿಗೆ ಬೈಟ್‌ ನೀಡಿದ್ದ. ಅದು ಎರಡು ದಿನ ಪ್ರಸಾರಗೊಂಡಿತ್ತು. ಇನ್ನಷ್ಟು ಕಾಮಗಾರಿಗಳ ಬಗ್ಗೆಯೂ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆದಿದ್ದ. ಇದು ಕೆಲ ರಾಜಕೀಯ ವ್ಯಕ್ತಿಗಳ ಮತ್ತು ಅವರ ಹಿಂಬಾಲಕರ ಸಿಟ್ಟಿಗೆ ಕಾರಣವಾ ಗಿತ್ತು. ಗಂಗಾವತಿಯಿಂದ ಗಿಣಿಗೇರಾವರೆಗೆ ಪ್ರಯಾಣಿಸಿದ್ದ ಯಲ್ಲಾಲಿಂಗ ಅವರನ್ನು ಬೈಕ್‌ ಮೇಲೆ ಹಿಂಬಾಲಿಸಿ ಕೊಪ್ಪಳ ರೈಲು ನಿಲ್ದಾಣದಲ್ಲಿ ಹಿಡಿದಿದ್ದರು. ಹಳಿಗಳ ಮೇಲೆ ಹೊಡೆದ ಕಾರಣ ಯಲ್ಲಾಲಿಂಗ ಅಲ್ಲಿಯೇ ಕುಸಿದು ಬಿದ್ದ. ಹಳಿಗಳ ಮೇಲೆ ಮಲಗಿಸಿದ್ದರಿಂದ ರೈಲು ಹರಿದು ದೇಹ ಎರಡು ತುಂಡಾಗಿತ್ತು. ಇದರ ಬಗ್ಗೆ ಸಿಐಡಿ ಕೂಡ ವರದಿಯಲ್ಲಿ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ 9 ಮಂದಿ ಆರೋಪಿಗಳು 2018 ರಲ್ಲಿ ಜಾಮೀನು ಪಡೆದರು. ಈ ಘಟನೆ ರಾಜಕೀಯ ಮತ್ತು ಜಾತಿಗಳ ನಡುವಿನ ವಾಕ್ಸಮರಕ್ಕೂ ಕಾರಣವಾಯಿತು.

ADVERTISEMENT

ಆದರೆ, ಯಲ್ಲಾಲಿಂಗನ ತಾಯಿ ಕೆಂಚಮ್ಮ ಈಗಲೂ ಕಣ್ಣೀರು ಹಾಕುತ್ತಿದ್ದಾರೆ. ಅವರ ಮನೆ ಮತ್ತು ಕನಕಾಪುರದ ಸ್ಥಿತಿ ಮಾತ್ರ ಹಾಗೆಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.