ADVERTISEMENT

ಬಿಸಿಲ ಧಗೆಗೆ ಮಜ್ಜಿಗೆ ಖಾದ್ಯಗಳು

ನಳಪಾಕ

ಸುಧಾ ಎಚ್‌.ಎಸ್.
Published 3 ಮಾರ್ಚ್ 2017, 19:30 IST
Last Updated 3 ಮಾರ್ಚ್ 2017, 19:30 IST
ಬಿಸಿಲ ಧಗೆಗೆ ಮಜ್ಜಿಗೆ ಖಾದ್ಯಗಳು
ಬಿಸಿಲ ಧಗೆಗೆ ಮಜ್ಜಿಗೆ ಖಾದ್ಯಗಳು   

ಮಜ್ಜಿಗೆ ಪಳದ್ಯ


ಬೇಕಾಗಿರುವ ಸಾಮಗ್ರಿ

ಒಂದು ಚಮಚ ಸಾಸಿವೆ, ಎರಡು ಎಸಳು ಕರಿಬೇವು, ಸ್ವಲ್ಪ ಇಂಗು, 2 ಚಮಚ ಹುಳಿಪುಡಿ, ನಾಲ್ಕೈದು ಎಸಳು ಬೆಳ್ಳುಳ್ಳಿ, 2 ಚಮಚ ಎಣ್ಣೆ.
ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ, ಸಾಸಿವೆ, ಕರಿಬೇವು, ಇಂಗು, ಹುಳಿಪುಡಿ, ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಹುರಿಯಿರಿ. ಬೆಳ್ಳುಳ್ಳಿ ಹಾಗು ಹುಳಿಪುಡಿ ಸ್ವಲ್ಪ ಕಂದು ಬಣ್ಣಕ್ಕೆ ಬಂದಮೇಲೆ ಅದಕ್ಕೆ ನೀರು ಹಾಗೂ ಉಪ್ಪು ಸೇರಿಸಿ ಕುದಿಸಿ. ನಂತರ ಮಜ್ಜಿಗೆ ಸೇರಿಸಿ.

*

ADVERTISEMENT

ಮಜ್ಜಿಗೆ ಹುಳಿ


ಬೇಕಾಗುವ ಸಾಮಗ್ರಿ

3 ಕಪ್ ಮೊಸರು, ಒಂದು ಕುಂಬಳಕಾಯಿ, 3 ಕೆಂಪು ಮೆಣಸಿನಕಾಯಿ, ಅರ್ಧ ಹೋಳು ಶುಂಠಿ, 3 ಹಸಿ ಮೆಣಸಿನಕಾಯಿ, 8-10 ಬೆಳ್ಳುಳ್ಳಿ ಎಸಳು, ಚಿಟಿಕೆ ಅರಿಶಿಣ ಪುಡಿ, ಚಿಟಿಕೆ ಸಾಸಿವೆ, 3 ಟೇಬಲ್ ಸ್ಪೂನ್ ಎಣ್ಣೆ, ರುಚಿಗೆ ಉಪ್ಪು.

ಮಾಡುವ ವಿಧಾನ
ಮೊಸರು, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಹಸಿ ಶುಂಠಿಯನ್ನು ಮತ್ತು ನೀರನ್ನು ಮಿಕ್ಸಿಯಲ್ಲಿ ಹಾಕಿ 8-10 ರೌಂಡ್‌ ತಿರುಗಿಸಿ. ಕುಂಬಳ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಅದಕ್ಕೆ ಅರಿಶಿಣದ ಪುಡಿಯನ್ನು ಹಾಕಿ ಬೇಯಿಸಿ ಒಂದು ಪ್ಯಾನ್‌ನಲ್ಲಿ ಎಣ್ಣೆ, ಸಾಸಿವೆ, ಕೆಂಪು ಮೆಣಸಿನ ಕಾಯಿ ಹಾಕಿ ಹಾಕಿ ಒಗ್ಗರಣೆ ಮಾಡಿ.

ಮಿಕ್ಸಿಯಲ್ಲಿ ಇರುವ ಮಿಶ್ರಣವನ್ನು ಈ ಒಗ್ಗರಣೆಗೆ ಹಾಕಿ ಉಪ್ಪು ಹಾಕಿದರೆ ಆರೋಗ್ಯಕರ ಮೊಸರು ಹುಳಿ ಸಿದ್ಧ.

ಇದೇ ವಿಧಾನದಲ್ಲಿ ಬೀನ್ಸ್‌ ಹುಳಿ, ಸೌತೆಕಾಯಿ, ಸೀಮೆಬದನೆ, ಬದನೆಕಾಯಿ ಹುಳಿಯನ್ನೂ ಮಾಡಬಹುದು. ಕುಂಬಳಕಾಯಿಯ ಬದಲಾಗಿ ಇವುಗಳನ್ನು ಹಾಕಿ ಇದೇ ಮಾದರಿ ಅನುಸರಿಸಬಹುದು.

*

ಮಸಾಲಾ ಮಜ್ಜಿಗೆ


ಬೇಕಾಗುವ ಸಾಮಗ್ರಿ
ಅರ್ಧ ಲೀಟರ್‌ ಮೊಸರು, ಅರ್ಧ ಲೋಟ ನೀರು, ಶುಂಠಿ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, 4-5 ಕಾಳು ಮೆಣಸು, ಒಂದು ಚಮಚ ಜೀರಿಗೆ, ರುಚಿಗೆ ಉಪ್ಪು.

ಮಾಡುವ ವಿಧಾನ
ಮೊಸರಿಗೆ ಸ್ವಲ್ಪ ನೀರನ್ನು ಸೇರಿಸಿ ಬಾಟಲಿಯಲ್ಲಿ ಹಾಕಿ ಕಡೆಯಿರಿ ಇಲ್ಲವೇ ಮಿಕ್ಸಿಯಲ್ಲಿ ರುಬ್ಬಿ.  ಇದಕ್ಕೆ ಪುಡಿ ಮಾಡಿದ ಕಾಳುಮೆಣಸು, ಜೀರಿಗೆ ಹಾಗೂ ಚಿಕ್ಕಚಿಕ್ಕದಾಗಿ ತುಂಡರಿಸಿದ ಶುಂಠಿಯನ್ನು ಸೇರಿಸಿ ಸ್ವಲ್ಪ ತಿರುವಿ. ಅದಕ್ಕೆ ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಇನ್ನೊಂದು ಸುತ್ತು ತಿರುಗಿಸಿ.

ತಣ್ಣಗೆ ಬೇಕಿದ್ದರೆ ಐಸ್‌ ಸೇರಿಸಿ ಇಲ್ಲವೇ ಫ್ರಿಡ್ಜ್‌ನಲ್ಲಿ ಇಟ್ಟು ಕುಡಿಯಿರಿ. ಕುಡಿಯುವಾಗ ಒಂದೆರಡು ಹನಿ ನಿಂಬೆರಸ ಸೇರಿಸಿದರೆ ಬೇಸಿಗೆಗೆ ಒಳ್ಳೆಯ ಕೂಲ್‌ಡ್ರಿಂಕ್‌ ಆಗುತ್ತದೆ.

**

(ಸುಧಾ ಎಚ್‌. ಎಸ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.