ಸಸ್ಯಹಾರಿಗಳಿಗೂ, ಮಾಂಸಾಹಾರವನ್ನು ತಿಂದಿದ್ದೇವೇನೋ ಎಂಬಂತಹ ‘ಫೀಲ್’ ಕೊಡುವುದು ಪನೀರ್ ಘೀ ರೋಸ್ಟ್ (Paneer Ghee Roast). ಕರಾವಳಿಯ (Coastal Special) ಈ ವಿಶೇಷ ಖಾದ್ಯವನ್ನು ಮಾಡುವುದು ಹೇಗೆ ಎಂಬ ಕುತೂಹಲ ಹಲವರಿಗೆ ಇರುತ್ತದೆ. ಚಿಕನ್ ಘೀ ರೋಸ್ಟ್ (Chicken Ghee Roast) ಮಾಡುವುದನ್ನು ತೋರಿಸಿಕೊಟ್ಟವರು ಮಂಗಳೂರು ಜನ (Mangaluru) . ಅದೇ ಚಿಕನ್ ಬದಲು, ಪನೀರ್ ತುಣುಕುಗಳನ್ನು ಹಾಕಿ ಘೀ ರೋಸ್ಟ್ ಮಾಡುವುದನ್ನು ಪ್ರಾರಂಭಿಸಿದವರೂ ಅವರೇ. ಘೀ ರೋಸ್ಟ್ ಎಂದಕೂಡಲೇ ಮೊದಲು ಮನಸೆಳೆಯುವುದು ಅದರ ಪರಿಮಳ. ಈ ಪರಿಮಳಕ್ಕೆ ಕಾರಣ ಒಂದು ವಿಶೇಷ ಪೌಡರ್. ಆ ಪೌಡರ್ ಏನು, ಘೀ ರೋಸ್ಟ್ ಮಾಡುವುದು ಹೇಗೆ ಎಂಬುದನ್ನು ಈ ವಿಡಿಯೊದಲ್ಲಿ ತೋರಿಸಿಕೊಟ್ಟಿದ್ದಾರೆ ಸಿಹಿಕಹಿ ಚಂದ್ರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.