ADVERTISEMENT

ಆಹಾರ: ಕಾಯಿ ವಡೆ, ಗೋರಿಕಾಯಿ ಉಂಡೆ ಮಾಡುವುದು ಹೇಗೆ?

ಆಹಾರ: ಕಾಯಿ ವಡೆ, ಗೋರಿಕಾಯಿ ಉಂಡೆ ಮಾಡುವುದು ಹೇಗೆ?

ಕೆ.ವಿ.ರಾಜಲಕ್ಷ್ಮಿ
Published 21 ಜೂನ್ 2024, 16:06 IST
Last Updated 21 ಜೂನ್ 2024, 16:06 IST

ಕಾಯಿ ವಡೆ

ಕಾಯಿ ವಡೆ

ಗೋರಿಕಾಯಿ ಉಂಡೆ

ADVERTISEMENT

ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿ ಬೇಯಿಸಿದ ಎಳೆ ಗೋರಿಕಾಯಿ 1 ಕಪ್, ಕಡಲೆಬೇಳೆ ಮುಕ್ಕಾಲು ಕಪ್, ಹೆಸರುಬೇಳೆ ಕಾಲು ಕಪ್, ಒಣಮೆಣಸಿನಕಾಯಿ 5-6, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಬೇಳೆಗಳನ್ನು ಒಂದುಗಂಟೆ ನೀರಲ್ಲಿ ನೆನೆಸಿ ಒಣಮೆಣಸಿನಕಾಯಿ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ನಂತರ ಗೋರಿಕಾಯಿ ಸೇರಿಸಿ ಚೆನ್ನಾಗಿ ಕಲೆಸಿ. ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಕಟ್ಟಿ ಇಡ್ಲಿಪಾತ್ರೆಯಲ್ಲಿ ಹತ್ತು ನಿಮಿಷ ಬೇಯಿಸಿ.

ಕಾಯಿ ವಡೆ

ಬೇಕಾಗುವ ಸಾಮಗ್ರಿ: ಹೆಸರು ಬೇಳೆ 1 ಕಪ್, ಕಡಲೆ ಬೇಳೆ 1/4 ಕಪ್, ತೆಂಗಿನ ತುರಿ 1/2 ಕಪ್,ಒಣ ಮೆಣಸಿನಕಾಯಿ 2-4, ಶುಂಠಿ ಸಣ್ಣ ತುಂಡು, ಚಿಟಿಕಿ ಇಂಗು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಹೆಸರುಬೇಳೆ, ಕಡಲೆ ಬೇಳೆಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ, ನೀರು ಬಸಿದು, ಉಳಿದ ಪದಾರ್ಥಗಳೊಂದಿಗೆ ಸೇರಿಸಿ ಗಟ್ಟಿಯಾಗಿ ರುಬ್ಬಿ. ನಂತರ ವಡೆಯಾಕಾರದಲ್ಲಿ ತಟ್ಟಿ, ಹಬೆಯಲ್ಲಿ ಹತ್ತುನಿಮಿಷ ಬೇಯಿಸಿ.

ಗೋರಿಕಾಯಿ ಉಂಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.