ಕರಾವಳಿಯ ಅಥವಾ ಮಂಗಳೂರಿನ ಬಹುತೇಕ ಮನೆಗಳಲ್ಲಿ ವಿಶೇಷ ಅಡುಗೆಯಾಗಿ ಕಾಣಸಿಗೋದು ಪುಳಿಮುಂಚಿ. ಅಂದರೆ, ಹುಳಿ ಸಾರು ಅಥವಾ ಕರಿ. ಮೀನು ಅಥವಾ ಬಂಗುಡೆಯಲ್ಲಿ ಸಾಮಾನ್ಯವಾಗಿ ಪುಳಿಮುಂಚಿ ಮಾಡುತ್ತಾರೆ. ಆದರೆ, ‘ಪ್ರಜಾವಾಣಿ’ಯಿಂದ ಮಂಗಳೂರಿನಲ್ಲಿ ಆಯೋಜಿಸಿದ್ದ ಕರುನಾಡ ಸವಿಯೂಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಿಯಾಂಕಾ ನಾಯಕ್ ಎಂಬುವರು ಪ್ರಾನ್‌ಗಳಲ್ಲಿ ಪುಳಿಮುಂಚಿ ಮಾಡಿ ಗಮನ ಸೆಳೆದಿದ್ದರು. ಅದೇ ರೆಸಿಪಿಯನ್ನು ಇಲ್ಲಿ ಮಾಡಿ ತೋರಿಸಿದ್ದಾರೆ ಮುರಳಿ ಮತ್ತು ಸುಚಿತ್ರಾ ದಂಪತಿ. ಸಿಗಡಿಗಳ ಗಾತ್ರ ಸಣ್ಣದಿದ್ದಷ್ಟೂ ಇದರ ರುಚಿ ಹೆಚ್ಚುತ್ತದೆ. ಕುಚಲಕ್ಕಿ ಅನ್ನ ಅಥವಾ ನೀರ್ ದೋಸೆ ಈ ಪ್ರಾನ್ ಪುಳಿಮುಂಚಿಗೆ ಒಳ್ಳೆಯ ಕಾಂಬಿನೇಶನ್. ಮಣ್ಣಿನ ಮಡಿಕೆಯಲ್ಲಿ ಇದನ್ನು ಮಾಡಿಕೊಂಡು ತಿಂದರೆ ರುಚಿ ಇನ್ನೂ ಹೆಚ್ಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.