ದೋಸೆಯನ್ನು ಸಾಗು, ಪಲ್ಯ ಅಥವಾ ಚಟ್ನಿ ಜೊತೆಗೆ ತಿನ್ನುವುದು ಸಾಮಾನ್ಯ. ಹದವಾದ ಕೋಳಿಗಸ್ಸಿಯಲ್ಲಿ ದೋಸೆ ತಿಂದರೆ ಅದರ ರುಚಿಯೇ ಬೇರೆ! ನೀವು ಕೂಡ ಕೋಳಿಗಸ್ಸಿ ಮಾಡುವುದನ್ನು ಕಲಿಯಬೇಕಾದರೆ ‘ಪ್ರಜಾವಾಣಿ ರೆಸಿಪಿ’ ನೋಡಿ.
1. ಬೇಯಿಸಿದ ಕೋಳಿ - 1/2 ಕೇಜಿ
2. ಉಪ್ಪು - ಸ್ವಲ್ಪ
3. ಎಣ್ಣೆ - 4 ದೊಡ್ಡ ಚಮಚ
4. ಈರುಳ್ಳಿ – 1
5. ಟೊಮ್ಯಾಟೋ - 1
ರುಬ್ಬುವುದಕ್ಕೆ (1)
1. ಬ್ಯಾಡಗಿ ಮೆಣಸಿನ ಕಾಯಿ 15
2. ಧನಿಯಾ ಕಾಳು - 1 ದೊಡ್ಡ ಚಮಚ
3. ಜೀರಿಗೆ ಕಾಳು - 1 ಚಮಚ
4. ಮೆಂತ್ಯ - 1/2 ಚಮಚ
5. ಕರಿಮೆಣಸು - 1/2 ಚಮಚ
6. ಚಕ್ಕೆ - 2
7. ಲವಂಗ - 2
8. ಈರುಳ್ಳಿ - 1
ಎಲ್ಲವನ್ನು ಒಂದು ಸ್ಪೂನ್ ಎಣ್ಣೆಯಲ್ಲಿ ಹುರಿದು ತಣ್ಣಗಾದ ನಂತರ ಸ್ವಲ್ಪ ನೀರಿನಲ್ಲಿ ರುಬ್ಬುವುದು.
ರುಬ್ಬುವುದು (2)
1. ತೆಂಗಿನ ತುರಿ - 1 ಕಪ್
2. ಬೆಳ್ಳುಳ್ಳಿ ಎಸಳು- 6
3. ಜೀರಿಗೆ - 1/2 ಸ್ಪೂನ್
4. ಎಲ್ಲವನ್ನೂ ಚೆನ್ನಾಗಿ ರುಬ್ಬುವುದು
ಒಗ್ಗರಣೆಗೆ
1. ತುಪ್ಪ - ಒಂದು ದೊಡ್ದ ಚಮಚ
2. ಈರುಳ್ಳಿ ಹೆಚ್ಚಿದ್ದು - 1
ಮಾಡುವ ವಿಧಾನ: ಮೊದಲು ಎರಡು ವಿಧವಾದ ರುಬ್ಬಿದ ಮಿಶ್ರಣವನ್ನು ರೆಡಿ ಮಾಡಿಕೊಳ್ಳಿ:
1. ಬಾಣಲೆಯಲ್ಲಿ ಒಂದು ಸ್ಪೂನ್ ಎಣ್ಣೆ ಬಿಸಿ ಮಾಡಿ, ಬ್ಯಾಡಿಗೆ ಮೆಣಸು, ಧನಿಯಾ ಕಾಳು, ಜೀರಿಗೆ ಕಾಳು, ಮೆಂತ್ಯ, ಕರಿಮೆಣಸು, ಚೆಕ್ಕೆ, ಲವಂಗ, ಹೆಚ್ಚಿದ ಈರುಳ್ಳಿ ಎಲ್ಲವನ್ನೂ ಒಂದೊಂದಾಗಿ ಹುರಿಯಿರಿ. ತಣ್ಣಗಾದ ಮೇಲೆ ಸ್ವಲ್ಪ ನೀರು ಸೇರಿಸುತ್ತಾ ರುಬ್ಬಿಕೊಳ್ಳಿ. ರುಬ್ಬಿಕೊಂಡ ಈ ಮಸಾಲೆಯನ್ನು ಪಕ್ಕಕ್ಕಿಡಿ.
2. ತೆಂಗಿನ ತುರಿ, ಬೆಳ್ಳುಳ್ಳಿ ಎಸಳು, ಜೀರಿಗೆ ಎಲ್ಲವನ್ನೂ ಒಟ್ಟಾಗಿ ಹಾಕಿ ಚೆನ್ನಾಗಿ ರುಬ್ಬಿ. ಇದನ್ನೂ ಪಕ್ಕಕ್ಕಿಡಿ. ಈಗ, ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಸ್ವಲ್ಪ ಹೆಚ್ಚಿದ ಈರುಳ್ಳಿ, ಸ್ವಲ್ಪ ಟೊಮ್ಯಾಟೊ, ರುಬ್ಬಿದ ಒಂದನೇ ಮಿಶ್ರಣ, ಚಿಕನ್, 1 1/2 ಕಪ್ ನೀರು, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ರುಬ್ಬಿದ 2ನೇ ಮಿಶ್ರಣವನ್ನು ಸೇರಿಸಿ. ಜೊತೆಗೆ ಉಳಿದ ಟೊಮ್ಯಾಟೊ ಸೇರಿಸಿ ಚೆನ್ನಾಗಿ ಕುದಿಸಿ. ಹೆಚ್ಚಿದ ಈರುಳ್ಳಿಯನ್ನು ತುಪ್ಪದಲ್ಲಿ ಹುರಿದು ಬೇಯುತ್ತಿರುವ ಕೋಳಿ ಗಸ್ಸಿಗೆ ಸೇರಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.