ಮೀನಿನ ಅಡುಗೆಗಳನ್ನು ಒಂದೊಂದು ಕಡೆ ಒಂದೊಂದು ರುಚಿಯಲ್ಲಿ ತಯಾರಿಸುತ್ತಾರೆ. ಪ್ರತಿಯೊಂದು ಮೀನಿಗೂ ಬೇರೆ ಬೇರೆ ರೀತಿಯಲ್ಲಿ ಮಸಾಲೆ ಅರೆಯಬೇಕಾಗುತ್ತಿದೆ. ಅದರಲ್ಲಿಯೂ ಬಾಂಗಡ ಮೀನು ಕರಿ ಮಾಡುವುದು ಸುಲಭ. ಬಾಂಗಡ ಮೀನು ಕರಿ ಮಾಡಲು 'ಪ್ರಜಾವಾಣಿ ರೆಸಿಪಿ' ನೋಡಿ.
ಸಾಮಗ್ರಿಗಳು
೧. ಬಾಂಗಡ ಮೀನು ಹೆಚ್ಚಿದ್ದು - ೧/೨ ಕೆಜಿ
೨. ಉಪ್ಪು - ಸ್ವಲ್ಪ
೩. ನಿಂಬೆರಸ - ೧ ಚಮಚ
೪. ಎಣ್ಣೆ - ೨ ದೊಡ್ಡ ಚಮಚ
೫. ಈರುಳ್ಳಿ - ೨
೬. ಕರಿಬೇವು -ಸ್ವಲ್ಪ
೭. ತುಪ್ಪ - ೧ ಚಮಚ
ರುಬ್ಬುವುದಕ್ಕೆ
೧. ತೆಂಗಿನ ತುರಿ - ೧ ೧/೨ ಕಪ್
೨. ಹುಣಸೇಹಣ್ಣು - ೧ ಚಮಚ
೩. ಅರಿಶಿನ - ೧ ಚಮಚ
೪. ಗರಮ್ ಮಸಾಲ - ೧ ಚಮಚ
೫. ಟೊಮ್ಯಾಟೊ ಹೆಚ್ಚಿದ್ದು - ೧
೬. ಹುಳಿ ಪುಡಿ - ೨ ದೊಡ್ಡ ಚಮಚ
ಮಾಡುವ ವಿಧಾನ:
ರುಬ್ಬುವುದಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಜೊತೆಯಲ್ಲಿ ಹಾಕಿ ಮೊದಲು ರುಬ್ಬಿಟ್ಟುಕೊಳ್ಳಿ. ಆಮೇಲೆ ೨ ದೊಡ್ದ ಚಮಚ ಎಣ್ಣೆಯನ್ನು ಬಾಣಲೆಗೆ ಹಾಕಿ ಬಿಸಿ ಮಾಡಿ. ರುಬ್ಬಿಕೊಂಡ ಮಸಾಲೆಯನ್ನು ಬಾಣಲೆಗೆ ಹಾಕಿ. ಒಂದು ಕಪ್ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಇದು ಕುದಿಯುತ್ತಿರುವ ಹಾಗೇ ಫಿಶ್‌ನ್ನು ಸೇರಿಸಿ ೨ ನಿಮಿಷ ಕುದಿಸಿ. ಕೊನೆಗೆ ಕರಿಬೇವು, ತುಪ್ಪ ಸೇರಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.