ADVERTISEMENT

ಮಳೆಗೆ ಮಾಂಸಾಹಾರಿ ಖಾದ್ಯ: ಹೈದ್ರಾಬಾದಿ ರೆಡ್ ಚಿಕನ್, ಚಿಕನ್ ಪೆಪ್ಪರ್ ಡ್ರೈ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 0:23 IST
Last Updated 19 ಅಕ್ಟೋಬರ್ 2024, 0:23 IST
<div class="paragraphs"><p>ಹೈದ್ರಾಬಾದಿ ರೆಡ್ ಚಿಕನ್</p></div>

ಹೈದ್ರಾಬಾದಿ ರೆಡ್ ಚಿಕನ್

   

ಹೈದ್ರಾಬಾದಿ ರೆಡ್ ಚಿಕನ್

ಬೇಕಾಗುವ ಸಾಮಗ್ರಿಗಳು: ಚಿಕನ್ 1/2 ಕೆ.ಜಿ, 1 ಕಪ್ ಮೊಸರು, 2 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಟೊಮೆಟೊ ಪ್ಯೂರಿ (ಅರೆದ ಟೊಮೊಟೊ ),1 ಟೀಸ್ಪೂನ್ ಟೊಮೆಟೊ ಕೆಚಪ್, 1 ಟೀ ಸ್ಪೂನ್ ಸೋಯಾ ಸಾಸ್, 2 ಟೀ ಸ್ಪೂನ್ ವಿನೆಗರ್, 1 ಟೀ ಸ್ಪೂನ್ ಚಿಲ್ಲಿ ಸಾಸ್,1 ಟೀ ಸ್ಪೂನ್ ಕೆಂಪುಮೆಣಸಿನ ಪುಡಿ,1/2 ಚಮಚ ಅರಶಿಣಪುಡಿ, 1 ಚಮಚ ಕೊತ್ತಂಬರಿ ಪುಡಿ,1 ಚಮಚ ಗರಂ ಮಸಾಲಾ ಪುಡಿ, 1/2 ಚಮಚ ಕಾಳುಮೆಣಸಿನ ಪುಡಿ, 1 ಚಮಚ ಜೀರಿಗೆ ಪುಡಿ ಒಂದು ಹಿಡಿಯಷ್ಟು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, 1 ಟೇಬಲ್ ಚಮಚ ಅಡುಗೆ ಎಣ್ಣೆ, 2 ಮಧ್ಯಮ ಗಾತ್ರದ ಈರುಳ್ಳಿ,ರುಚಿಗೆ ತಕ್ಕಷ್ಟು ಉಪ್ಪು.

ADVERTISEMENT

ಪೇಸ್ಟ್ ಮಾಡಲು ಬೇಕಾಗುವ ಸಾಮಗ್ರಿಗಳು : 10 ರಿಂದ 15 ಬಾದಾಮಿ ಮತ್ತು ಗೋಡಂಬಿ, 4 ಏಲಕ್ಕಿ, 1 ಕಪ್ ಹಾಲು ಎಲ್ಲವನ್ನು ಒಟ್ಟಿಗೆ ಸೇರಿಸಿ ಪೇಸ್ಟ್ ಮಾಡಿಡಿ.

ಅಗಲವಾದ ಪಾತ್ರೆಯಲ್ಲಿ ಮಧ್ಯಮ ಗಾತ್ರದ ಚಿಕನ್ ತುಂಡುಗಳನ್ನು ಹಾಕಿ ಅದರ ಮೇಲೆ ಮೇಲೆ ಸೂಚಿಸಿರುವ ಎಲ್ಲ ಸಾಸ್, ಟೊಮೆಟೊ ಪ್ಯೂರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು ಮಸಾಲೆ ಪುಡಿಗಳು, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಂದು ಗಂಟೆ ನೆನೆಯಲು ಬಿಡಿ. ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ನೀರುಳ್ಳಿಯನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಮಸಾಲೆ ಬೆರೆಸಿಟ್ಟ ಚಿಕನ್ ಅನ್ನು ಬಾಣಲೆಗೆ ಹಾಕಿ ನೀರು ಸೇರಿಸದೆ ಮಧ್ಯಮ ಉರಿಯಲ್ಲಿ 20 ನಿಮಿಷ ಬೇಯಿಸಿ. ಕೊನೆಗೆ ಬೇಯಿಸಿದ ಚಿಕನ್ ಗೆ ಅರೆದಿಟ್ಟ ಗೋಡಂಬಿ ಬಾದಾಮಿ ಪೇಸ್ಟ್ ಹಾಗೂ ಅರ್ಧ ಕಪ್ ನೀರನ್ನು ಸೇರಿಸಿ, ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 10 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ಫ್ರೆಶ್ ಕ್ರೀಮ್ ಹಾಕಿ ಗಾರ್ನಿಶ್ ಮಾಡಿ. ರುಚಿಯಾದ ಹೈದ್ರಾಬಾದಿ ರೆಡ್ ಚಿಕನ್ ಸವಿಯಲು ಸಿದ್ದ.

ಚಿಕನ್ ಪೆಪ್ಪರ್ ಡ್ರೈ

ಚಿಕನ್ ಪೆಪ್ಪರ್ ಡ್ರೈ

ಬೇಕಾಗುವ ಸಾಮಗ್ರಿಗಳು : ಬೋನ್‌ಲೆಸ್‌ ಚಿಕನ್ 1/2 ಕೆ.ಜಿ, ಕರಿಮೆಣಸಿನ ಪುಡಿ 3 ಚಮಚ, ಗಟ್ಟಿ ಮೊಸರು 1/2 ಕಪ್ , ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಬೆಣ್ಣೆ 2 ಚಮಚ. ಉಪ್ಪು ರುಚಿಗೆ ತಕ್ಕಷ್ಟು.

ಚಿಕನ್ ಅನ್ನು ಚಿಕ್ಕದಾಗಿ ಕತ್ತರಿಸಿ ಚೆನ್ನಾಗಿ ತೊಳೆದಿಡಿ. ತೊಳೆದ ಚಿಕನ್‌ಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಕರಿಮೆಣಸಿನ ಪುಡಿ, ಮೊಸರು ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ. ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ನೆನೆಸಿಟ್ಟ ಚಿಕನ್ ಸೇರಿಸಿ, ಬೇಯುವಾಗ ಚಿಕನ್ ಚೆನ್ನಾಗಿ ನೀರು ಬಿಡುತ್ತದೆ. ಆಗಾಗ ಮಗುಚುತ್ತಾ, ನೀರು ಆರುವವರೆಗೆ ಬೇಯಿಸಿ. ಅನ್ನ, ಚಪಾತಿಯೊಂದಿಗೆ ಸವಿಯಲು ರುಚಿಯಾದ ಚಿಕನ್ ಪೆಪ್ಪರ್ ಡ್ರೈ ಸಿದ್ದ.

ಚಿಕನ್ ಗ್ರೀನ್ ಗ್ರೇವಿ

ಚಿಕನ್ ಗ್ರೀನ್ ಗ್ರೇವಿ

ಬೇಕಾಗುವ ಸಾಮಗ್ರಿಗಳು: 1/2 ಕೆಜಿ ಚಿಕನ್, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1/2 ಕಪ್ ಗಟ್ಟಿ ಮೊಸರು, 1 ಟೊಮೆಟೊ ಅರೆದು ಪ್ಯೂರಿ ಮಾಡಿಕೊಳ್ಳಬೇಕು, ಹಸಿಮೆಣಸಿನಕಾಯಿ 7 ರಿಂದ ಎಂಟು, ಕೊತ್ತಂಬರಿ ಸೊಪ್ಪು 1 ಹಿಡಿ , ಪುದೀನಾ ಸೊಪ್ಪು 1/2 ಹಿಡಿ, ಧನಿಯಾ 1 ಚಮಚ, ಸೋಂಪು 1 ಚಮಚ, ಅರಶಿಣ 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು
ಈರುಳ್ಳಿ 3, ಉಪ್ಪು ರುಚಿಗೆ ತಕ್ಕಷ್ಟು.

ಈರುಳ್ಳಿಯನ್ನು ಉದ್ದಕ್ಕೆ ಹೆಚ್ಚಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕಾಯಿಸಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಧನಿಯಾ, ಸೋಂಪು, ಕಾಯಿಮೆಣಸು ಹಾಕಿ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹುರಿದಿಟ್ಟ ವಸ್ತುಗಳ ಜೊತೆಗೆ ಕೊತ್ತಂಬರಿ, ಪುದೀನಾ ಸೊಪ್ಪು ಸೇರಿಸಿ ಅರೆದಿಟ್ಟುಕೊಳ್ಳಿ. ಚೆನ್ನಾಗಿ ಕಾದ ಈರುಳ್ಳಿಗೆ ಅರೆದ ಮಸಾಲೆ ಜತೆಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವವರೆಗೆ ಬಾಡಿಸಿ. ನಂತರ ಮಸಾಲೆಗೆ ಚಿಕನ್, ಅರಿಶಿಣಪುಡಿ, ಮೊಸರು, ಉಪ್ಪು ಹಾಗೂ ಟೊಮೆಟೊ ಪ್ಯೂರಿ ಸೇರಿಸಿ ಸ್ವಲ್ಪ ನೀರು ಸೇರಿಸಿ ಮುಚ್ಚಳ ಮುಚ್ಚಿಟ್ಟು ಬೇಯಿಸಿ. ತಳ ಹತ್ತದಂತೆ ಆಗಾಗ ಮಗುಚಿ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಬೇಯಿಸಿದರೆ ರುಚಿಯಾದ ಚಿಕನ್ ಗ್ರೀನ್‌ ಗ್ರೇವಿ ಅನ್ನು ಚಪಾತಿ ರೊಟ್ಟಿಯ ಜತೆಗೆ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.