ನವದೆಹಲಿ: ಬಾಣಸಿಗ (ಚೆಫ್ಸ್) ಕುನಾಲ್ ಕಪೂರ್ ಅವರು ‘ಕುನಾಲ್ ಕಪೂರ್ ಇನ್ ದಿ ಕಿಚನ್’ ಎಂಬ ಪುಸ್ತಕ ಬರೆದಿದ್ದು,‘ದೊಡ್ಡ ಪಂಜಾಬಿ ಕುಟುಂಬದ ಹುಡುಗನೊಬ್ಬನ ಪಯಣದ ನೆನಪುಗಳು ಮಾತ್ರವಲ್ಲದೆಪ್ರೀತಿಪಾತ್ರರ ಜತೆಗಿನ ಸಹಭೋಜನದ ಸವಿನೆನಪುಗಳನ್ನು ಬಣ್ಣಿಸಲಾಗಿದೆ’ ಎಂದು ಹೇಳಿಕೊಂಡಿದ್ದಾರೆ.
ಓಂ ಬುಕ್ಸ್ ಇಂಟರ್‌ನ್ಯಾಷನಲ್ ಪ್ರಕಟಿಸಿರುವ ಈ ಕೃತಿ ಮಾರ್ಚ್ 15 ರಂದು ಬಿಡುಗಡೆಯಾಗಲಿದೆ.
ಕುನಾಲ್ ಕಪೂರ್ ಅವರು ಕುಕಿಂಗ್ ಮತ್ತು ಪ್ರಯಾಣ ಆಧಾರಿತ ಟೆಲಿವಿಷನ್ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದಾರೆ.
ಈ ಪುಸ್ತಕದಲ್ಲಿ ಅವರು ತಮ್ಮ ಬಾಲ್ಯ ಮತ್ತು ಅಜ್ಜನ ಕೈ ಊಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸಲಾಡ್, ಕೋಳಿ, ಮೀನು, ಪಾನೀಯ, ಸಿಹಿತಿಂಡಿಗಳು ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ಮಾಡುವ ವಿಧಾನಗಳ ಬಗ್ಗೆ ಸರಳವಾಗಿ ಮತ್ತು ಚಿತ್ರದೊಂದಿಗೆ ವಿವರಿಸಿದ್ದಾರೆ.
ತಮ್ಮ ಪುಸ್ತಕದಲ್ಲಿ ಒಟ್ಟು 15 ಬಗೆಯ ಪರಿಪೂರ್ಣವಾದ ಮತ್ತು ಜನಪ್ರಿಯವಾಗಿರುವ ಭೋಜನಗಳಬಗ್ಗೆ ಹೇಳಲಾಗಿದೆ ಎಂದು ಕುನಾಲ್ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.