ADVERTISEMENT

ಪ್ರಜ್ಞಾವಂತ ಆಹಾರ| ಅರಮನೆ ಮೈದಾನದಲ್ಲಿ ಸಿರಿಧಾನ್ಯ ವೈಭವ

ಸಾವೆ ಉಪ್ಪಿಟ್ಟು, ಮೊಳಕೆ ಕಟ್ಟಿದ ರಾಗಿ, ಸಿರಿಧಾನ್ಯಗಳ ಆರೋಗ್ಯಯುತ ಪೇಯ, ಬರಗು ದೋಸೆ, ಊದಲು ಇಡ್ಲಿ, ಸಿರಿಧಾನ್ಯಗಳ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 19:30 IST
Last Updated 20 ಜನವರಿ 2023, 19:30 IST
ಅರಮನೆ ಮೈದಾನದಲ್ಲಿ ಸಿರಿಧಾನ್ಯ ವೈಭವ
ಅರಮನೆ ಮೈದಾನದಲ್ಲಿ ಸಿರಿಧಾನ್ಯ ವೈಭವ   

ಸಾವೆ ಉಪ್ಪಿಟ್ಟು, ಮೊಳಕೆ ಕಟ್ಟಿದ ರಾಗಿ, ಸಿರಿಧಾನ್ಯಗಳ ಆರೋಗ್ಯಯುತ ಪೇಯ, ಬರಗು ದೋಸೆ, ಊದಲು ಇಡ್ಲಿ, ಸಿರಿಧಾನ್ಯಗಳ ಇಡ್ಲಿ ಮಿಕ್ಸ್‌... ಹೀಗೆ ಸಿರಿಧಾನ್ಯಗಳ ವೈವಿಧ್ಯವೇ ಅನಾವರಣಗೊಂಡಿದೆ.

– ಇದು ನಗರದ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಯಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದಲ್ಲಿ ಕಂಡುಬಂದ ದೃಶ್ಯ.

ಕೃಷಿ ಇಲಾಖೆ ಸಹಯೋಗದಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ಭವಿಷ್ಯದ ‍ಪೀಳಿಗೆಯ ಪ್ರಜ್ಞಾವಂತ ಆಹಾರವೆಂದು ಕರೆಯವ ಸಿರಿಧಾನ್ಯಗಳ ಮೌಲ್ಯವರ್ಧನೆ ಕಣ್ಮನ ಸೆಳೆಯುತ್ತಿದೆ. ಮೇಳಕ್ಕೆ ಬಂದವರು ಸಿರಿಧಾನ್ಯಗಳನ್ನು ಪರಿಚಯಿಸಿಕೊಳ್ಳುತ್ತಾ, ಅವುಗಳ ಖಾದ್ಯ ಸವಿಯುವ ಜತೆಗೆ ಖರೀದಿ ಮಾಡಬಹುದು. ಶನಿವಾರ ಮತ್ತು ಭಾನುವಾರವೂ ಈ ಸಿರಿಧಾನ್ಯ ವೈಭವವನ್ನು ಕಣ್ತುಂಬಿಕೊಳ್ಳಬಹುದು.

ADVERTISEMENT

ಕರ್ನಾಟಕ ವಿಭಾಗದಲ್ಲಿ 84 ಮಳಿಗೆಗಳಿದ್ದು, ಸಿರಿಧಾನ್ಯದ ನವೋದ್ಯಮವು ಅನಾವರಣಗೊಂಡಿದೆ. ರಾಗಿ, ನವಣೆ, ಸಾವೆಯ ಶ್ಯಾವಿಗೆ, ಬಹುವಿಧದ ಸಿರಿಧಾನ್ಯದ ರೊಟ್ಟಿ, ಸಾವೆ ಕಿಚಡಿ, ಪಲಾವ್‌, ಸಾಮೆ, ನವಣೆ, ಕೊರಲೆ, ಹಾರಕ, ಊದಲು ಸಿರಿಧಾನ್ಯದ ಅನ್ನ... ಹೀಗೆ ಈ ಎಲ್ಲ ಪದಾರ್ಥಗಳ ರುಚಿ ಸವಿಯಬಹುದು.

ಮೇಳದಲ್ಲಿ ಹಲವು ರೈತ ಉತ್ಪಾದಕ ಸಂಸ್ಥೆಗಳು, ಪ್ರಾದೇಶಿಕ ಸಾವಯವ ಒಕ್ಕೂಟದ ಮಳಿಗೆಗಳಿವೆ. ಸಿರಿಧಾನ್ಯಗಳ ಲಘು ಆಹಾರ, ರಾಗಿ ಬೈಟ್ಸ್‌, ಮೈದಾ ಮುಕ್ತ ಚೋಕೊ, ಮಸಾಲ ಓಟ್ಸ್ ಸೆಳೆಯುತ್ತಿವೆ.

ಸಾವಯವ ಉತ್ಪನ್ನಗಳು, ಬೇಳೆಕಾಳು ಗಳು, ಡೇರಿ ಉತ್ಪನ್ನಗಳೂ ಇವೆ. ಸಾವಯವ ಹತ್ತಿಯಿಂದ ಮಾಡಿದ ವಸ್ತ್ರಗಳು, ಸೌಂದರ್ಯವರ್ಧಕಗಳು ಇವೆ. ಸಿರಿಧಾನ್ಯ ಸಂಸ್ಕರಿಸುವ ಯಂತ್ರೋಪಕರಣಗಳಿವೆ.

ದೇಶದ ವಿವಿಧ ಭಾಗಗಳಿಂದ ಸಿರಿಧಾನ್ಯ ಮತ್ತು ಸಾವಯವ ಉತ್ಪಾದಕ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನದಲ್ಲಿಟ್ಟಿವೆ.

ಸಿರಿಧಾನ್ಯಗಳು, ಅಕ್ಕಿ, ಅವಲಕ್ಕಿ, ನೂಡಲ್ಸ್‌, ಪಾಸ್ತಾ, ದೋಸೆ, ಇಡ್ಲಿ, ಬಿಸಿಬೇಳೆ ಬಾತ್‌, ಕುರುಂ ಕುರುಂ, ಸಿರಿಧಾನ್ಯ ಮಾಲ್ಟ್‌ ಗ್ರಾಹಕರನ್ನು ಸೆಳೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.