ADVERTISEMENT

ನಳಪಾಕ: ಪುಂಡಿ ಸೊಪ್ಪು ಪುಳಿಯೋಗರೆ.. ಮಾಡಿ ನೋಡಿ ಒಮ್ಮೆ

ಪೂರ್ಣಿಮಾ ಗೊಂದೆನಾಯ್ಕರ
Published 13 ಅಕ್ಟೋಬರ್ 2023, 23:41 IST
Last Updated 13 ಅಕ್ಟೋಬರ್ 2023, 23:41 IST
ಪುಂಡಿ ಸೊಪ್ಪು ಪುಳಿಯೋಗರೆ
ಪುಂಡಿ ಸೊಪ್ಪು ಪುಳಿಯೋಗರೆ   

ಹುಣಸೆಹುಳಿಯ ಪುಳಿಯೋಗರೆ ಎಲ್ಲರಿಗೂ ಗೊತ್ತು. ಆಗಿಂದಾಗ ಮಾಡಿಕೊಂಡು, ಉಣ್ಣಬಹುದಾದ ಪುಳಿಯೋಗರೆಯನ್ನೇ ಹೋಲುವ ಖಾದ್ಯ ಇದು. ಪುಂಡಿಪುಳಿಯೋಗರೆ. ಪುಂಡಿ ಸೊಪ್ಪನ್ನು ಬಳಸಿ ಮಾಡುವ ಈ ಪುಳಿಯೋಗರೆ ನಾಲಗೆಯ ರುಚಿಮೊಗ್ಗುಗಳನ್ನು ಅರಳಿಸಿ, ಹೊಟ್ಟೆ ಹಸಿಯುವಂತೆ ಮಾಡುತ್ತವೆ. ಹಸಿರು ಬಣ್ಣದ ಈ ಪುಳಿಯೋಗರೆ ಪ್ರಯತ್ನಿಸಿ ನೋಡಿ


ಬೇಕಾಗುವ ಸಾಮಗ್ರಿಗಳು: ಒಂದು ಕಟ್ಟು ಪುಂಡಿ ಸೊಪ್ಪು, ಬೇಯಿಸಿದ ಅನ್ನ ಒಂದು ಬಟ್ಟಲು, ಎಣ್ಣೆ, ಶೇಂಗಾ, ಗೋಡಂಬಿ, ದ್ರಾಕ್ಷಿ, ಉದ್ದಿನಬೇಳೆ, ಕಡ್ಲೆಬೇಳೆ, ಸಾಸಿವೆ, ಜೀರಿಗೆ, ಉಪ್ಪು, ಅರಿಸಿಣ, ಕೆಂಪು ಒಣ ಮೆಣಸಿನಕಾಯಿ, ಮೆಂತೆಕಾಳು, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ: ಕಾದ ಬಾಣಲಿಗೆ ಎರಡು ಸಣ್ಣ ಚಮಚ ಎಣ್ಣೆ ಹಾಕಿ ಅದಕ್ಕೆ ಅರ್ಧ ಚಮಚ ಮೆಂತೆಕಾಳು, 5ರಿಂದ 6 ಕೆಂಪು ಒಣ ಮೆಣಸಿನಕಾಯಿ, ಬಿಡಿಸಿಟ್ಟುಕೊಂಡ ಪುಂಡಿಸೊಪ್ಪು ಹಾಕಿ ಹುರಿದುಕೊಳ್ಳಬೇಕು. ಹುರಿದುಕೊಂಡ ಸಾಮಗ್ರಿಗಳನ್ನು ನೀರು ಹಾಕದೆ ಮಿಕ್ಸಿಯಲ್ಲಿ ನುನ್ನಗೆ ರುಬ್ಬಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲಿಯಲ್ಲಿ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ, ಶೇಂಗಾ ಹುರಿದಿಟ್ಟುಕೊಳ್ಳಬೇಕು. ಪುಳಿಯೊಗರೆ ತಯಾರಿಗಾಗಿ ಒಂದು ಬಾಣಲಿಗೆ ಪಲ್ಯಕ್ಕೆ ಬೇಕಾಗುವಷ್ಟು ಎಣ್ಣೆ ಹಾಕಿ ಅದಕ್ಕೆ ಉದ್ದಿನಕಾಳು, ಸಾಸಿವೆ, ಜೀರಿಗೆ, ಕರಿಬೇವು, ಕೆಂಪು ಒಣ ಮೆಣಸಿನಕಾಯಿ, ಅರಿಸಿಣ (ಕಾರ ಜಾಸ್ತಿ ಬೇಕೆನ್ನುವವರು ಹಸಿಮೆಣಸಿನಕಾಯಿ ಹಾಕಿಕೊಳ್ಳಬಹುದು), ರುಬ್ಬಿಟ್ಟುಕೊಂಡ ಪುಂಡಿಸೊಪ್ಪಿನ ಪೌಡರ್‌ ಹಾಕಿ ಮಿಕ್ಸ್‌ ಮಾಡಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು. ಚೆನ್ನಾಗಿ ಬೆಂದ ನಂತರ ತಯಾರಿಸಿಟ್ಟುಕೊಂಡ ಅನ್ನವನ್ನು ಹಾಕಿ ಚಿತ್ರಾನ್ನ ರೀತಿಯಲ್ಲಿ ಮಿಶ್ರಣ ಮಾಡಬೇಕು.

ADVERTISEMENT
ಪುಂಡಿಸೊಪ್ಪು–ಪ್ರಜಾವಾಣಿ ಚಿತ್ರ–ಗೋವಿಂದರಾಜ ಜವಳಿ
ಪುಂಡಿಸೊಪ್ಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.