ಈ ಸಿಹಿ ಅಮಟೆ ಮಾಮೂಲಿ ಅಮಟೆಗಿಂತ ತುಸು ಭಿನ್ನ. ಸ್ವಲ್ಪ ಸಿಹಿ- ಹುಳಿ ರುಚಿ. ಒಳಗಿನ ತಿರುಳು ಸಾಕಷ್ಟು ಇರುತ್ತದೆ. ಬೀಜ ಚಿಕ್ಕದಿರುತ್ತದೆ. ಅಡುಗೆಗೆ ಹೆಚ್ಚು ಸೂಕ್ತ. ಸಿಹಿ ಆಮಟೆಯಿಂದ ತಯಾರಿಸುವ ಕೆಲವು ಸಾಂಪ್ರದಾಯಿಕ ಅಡುಗೆಗಳನ್ನು ಸೌಖ್ಯ ಮೋಹನ್ ತಲಕಾಲುಕೊಪ್ಪ ಇಲ್ಲಿ ಪರಿಚಯಿಸಿದ್ದಾರೆ.
ಅಮಟೆಕಾಯಿ ಪಲ್ಯ
ಅಮಟೆಕಾಯಿ 4-5
ಈರುಳ್ಳಿ ಎರಡು
ಉಪ್ಪು
ಬೆಲ್ಲ
ಬೆಳ್ಳುಳ್ಳಿ 7-8 ಎಸಳು
ಸೂಜಿ ಮೆಣಸು
ಕಾಯಿತುರಿ ಎರಡು ಚಮಚ ಒಗ್ಗರಣೆಗೆ
ಎಣ್ಣೆ ಸಾಸಿವೆ ಒಣಮೆಣಸು ಕರಿಬೇವುಮಾಡುವ ವಿಧಾನ: ಅಮಟೆಕಾಯಿಯನ್ನು ತೆಳುವಾಗಿ ಕೆತ್ತಿ ಕೊಳ್ಳಬೇಕು. ಈರುಳ್ಳಿಯನ್ನು ಹೆಚ್ಚಿ ಒಗ್ಗರಣೆಗೆ ಹಾಕಿ ಹುರಿಯಿರಿ. ಅದಕ್ಕೆ ಅಮಟೆಕಾಯಿ ಸೇರಿಸಿ. ಉಪ್ಪು ಬೆಲ್ಲ ಹಾಕಿ. ಸ್ವಲ್ಪವೇ ನೀರು ಹಾಕಿ ಬೇಯಿಸಿ. ಬೆಳ್ಳುಳ್ಳಿ ಮತ್ತು ಸೂಜಿ ಮೆಣಸು ಹಾಗೂ ಕಾಯಿತುರಿಯನ್ನು ರುಬ್ಬಿ ಹಾಕಿ ಚೆನ್ನಾಗಿ ಹುರಿಯಿರಿ. ರುಚಿಯಾದ ಪಲ್ಯ ರೆಡಿ.
ಅಮಟೆಕಾಯಿ ಮೊಸರು ಗೊಜ್ಜು
ಬೇಕಾಗುವ ಸಾಮಗ್ರಿಗಳು:
ಅಮಟೆಕಾಯಿ 3-4
ಮೊಸರು ಎರಡು ದೊಡ್ಡ ಕಪ್
ಉಪ್ಪು
ಬೆಲ್ಲ
ಸ್ವಲ್ಪ ಈರುಳ್ಳಿ
ಒಂದು ಹಸಿಮೆಣಸಿನಕಾಯಿ ಎರಡು ಮೂರು ಒಗ್ಗರಣೆಗೆ
ಎಣ್ಣೆ ಸಾಸಿವೆ ಒಣಮೆಣಸುಮಾಡುವ ವಿಧಾನ : ಮೊದಲು ಅಮಟೆಕಾಯಿಯನ್ನು ಬೇಯಿಸಿ. ಅದಕ್ಕೆ ಉಪ್ಪು ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ನುರಿದುಕೊಳ್ಳಿ. ಹಸಿಮೆಣಸನ್ನು ಸುಟ್ಟುಜಜ್ಜಿ ಅದಕ್ಕೆ ಹಾಕಿ. ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಸೇರಿಸಿ. ಕೊನೆಯಲ್ಲಿ ಒಗ್ಗರಣೆ ಕೊಡಿ.
ಅಮಟೆಕಾಯಿ ಮಂದನ ಗೊಜ್ಜು
ಬೇಕಾಗುವ ಸಾಮಗ್ರಿಗಳು:
ಅಮಟೆಕಾಯಿ 20
ಉಪ್ಪು
ಬೆಲ್ಲ
ಸೂಜಿ ಮೆಣಸು (ಗಾಂಧಾರಿ ಮೆಣಸು)15 - 20
ಬೆಳ್ಳುಳ್ಳಿ 10-12 ಎಸಳು ಒಗ್ಗರಣೆಗೆ
ಎಣ್ಣೆ ಸಾಸಿವೆ ಕಡ್ಲೆಬೇಳೆ ಒಣಮೆಣಸುಮಾಡುವ ವಿಧಾನ : ಮೊದಲು ಅಮಟೆ ಕಾಯಿಯನ್ನು ಬೇಯಿಸಿಕೊಳ್ಳಿ. ಸಿಪ್ಪೆ ಹಾಗೂ ತಿರುಳನ್ನು ಕೆತ್ತಿ ಮಿಕ್ಸಿಗೆ ಹಾಕಿ. ರುಬ್ಬುವಾಗ ಮೆಣಸು ಬೆಳ್ಳುಳ್ಳಿ ಮತ್ತು ಉಪ್ಪು ಸೇರಿಸಿ. ದಪ್ಪ ಬಾಣಲೆಯಲ್ಲಿ ಒಗ್ಗರಣೆ ಇಟ್ಟು ಸಾಸಿವೆ ಸಿಡಿದ ನಂತರ ರುಬ್ಬಿದ ಮಿಶ್ರಣ ಹಾಕಿ ಚೆನ್ನಾಗಿ ಕುದಿಸಿ. ಸ್ವಲ್ಪ ಎಣ್ಣೆ ಬಿಡುವವರೆಗೂ ಕುದಿಸಿದರೆ ತುಂಬಾ ದಿನ ಹಾಳಾಗುವುದಿಲ್ಲ. ಮಳೆಗಾಲದಲ್ಲಿ ಬಿಸಿ ಬಿಸಿ ಅನ್ನದ ಜೊತೆ ಚೆನ್ನಾಗಿರುತ್ತದೆ.
ಅಮಟೆಕಾಯಿ ಸಾರು
ಬೇಕಾಗುವ ಸಾಮಗ್ರಿ:
ಅಮಟೆಕಾಯಿ 2-3
ತೆಂಗಿನತುರಿ ಅರ್ಧ ಕಪ್
ಉಪ್ಪು
ಸಾಂಬಾರ್ ಪೌಡರ್
ಖಾರದಪುಡಿ
ಬೆಲ್ಲ ಸ್ವಲ್ಪ ಒಗ್ಗರಣೆಗೆ
ಎಣ್ಣೆ ಸಾಸಿವೆ ಜೀರಿಗೆ ಬೆಳ್ಳುಳ್ಳಿ ಕರಿಬೇವುಮಾಡುವ ವಿಧಾನ : ಅಮಟೆಕಾಯಿಯನ್ನು ಹೆಚ್ಚಿಕೊಳ್ಳಿ. ಅದನ್ನು ಒಗ್ಗರಣೆಗೆ ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ಸ್ವಲ್ಪ ನೀರು ಸೇರಿಸಿ ಮೆತ್ತಗೆ ಬೇಯಿಸಿ. ಬೇಯುವಾಗ ಉಪ್ಪು ಬೆಲ್ಲ ಸೇರಿಸಿ ತೆಂಗಿನಕಾಯಿಯ ಜೊತೆ ಖಾರದಪುಡಿಸಾಂಬಾರ್ ಪೌಡರ್ ಹಾಕಿ ರುಬ್ಬಿ. ನಂತರ ಈ ರುಬ್ಬಿದ ಮಸಾಲವನ್ನು ಬೇಯಿಸಿದ ಅಮಟೆಗೆ ಸೇರಿಸಿ. ನಂತರ ನೀರು ಸೇರಿಸಿ ಚೆನ್ನಾಗಿ ಕುದಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.