ADVERTISEMENT

ಕ್ರಿಸ್ಮಸ್‌ ಸಂಭ್ರಮ: ಮನೆಯಲ್ಲಿಯೇ ಮಾಡಿ, ರುಚಿಕರ ಕೇಕು

ಗೌರಮ್ಮ ಕಟ್ಟಿಮನಿ
Published 15 ಡಿಸೆಂಬರ್ 2023, 20:29 IST
Last Updated 15 ಡಿಸೆಂಬರ್ 2023, 20:29 IST
ಪ್ಲಮ್ ಕೇಕ್
ಪ್ಲಮ್ ಕೇಕ್   

ಕ್ರೈಸ್ತರ ಸಂಭ್ರಮ ಇಮ್ಮಡಿಗೊಳಿಸುವ ಕ್ರಿಸ್ಮಸ್‍ಗೆ ಬೆರಳೆಣಿಕೆಯಷ್ಟು ದಿನಗಳು ಬಾಕಿ ಇದ್ದು, ಈಗಾಗಲೇ ಎಲ್ಲರೂ ತಯಾರಿ ಆರಂಭಿಸಿದ್ದಾರೆ. ಕ್ರಿಸ್ಮಸ್ ಅಂದ ತಕ್ಷಣ ಥಟ್ಟನೆ ನೆನಪಾಗುವುದು ಪ್ಲಮ್ ಕೇಕ್, ಪ್ಲೇನ್ ಪ್ಲಮ್‌ ಕೇಕ್ ಹಾಗೂ ರೋಸ್ಟ್ ಕುಕ್ಸ್. ಸ್ನೇಹಿತರು, ಸಂಬಂಧಿಕರಿಗೆ ಈ ಕೇಕ್‍ಗಳನ್ನು ನೀಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಾದ್ರೆ ಮನೆಯಲ್ಲೆ ರುಚಿಕರವಾಗಿ ಹಾಗೂ ಸುಲಭವಾಗಿ ಕೇಕ್ ಮಾಡುವ ವಿಧಾನ ಇಲ್ಲಿದೆ.

ರೋಸ್‌ ಕುಕಿಸ್‌:

ಬೇಕಾಗುವ ಸಾಮಗ್ರಿಗಳು:

ADVERTISEMENT

ಅರ್ಧ ಕೆಜಿ ಮೈದಾ ಹಿಟ್ಟು, 4 ಮೊಟ್ಟೆ, 250 ಗ್ರಾಂ ಕೆಜಿ ಸಕ್ಕರೆ ಪುಡಿ, ಏಲಕ್ಕಿ, ವೆನಿಲಾ, 1 ಕಪ್ ಹಾಲು

ಮೊದಲಿಗೆ ಮೊಟ್ಟೆಯನ್ನು ಒಂದು ಬೌಲ್‍ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು, ನಂತರ ಮೈದಾ ಹಿಟ್ಟನ್ನು ಸಾಣಿಸಿ, ಅದಕ್ಕೆ ಮಿಕ್ಸ್ ಮಾಡಿಟ್ಟುಕೊಂಡ ಮೊಟ್ಟೆ, ಸಕ್ಕರೆ ಪುಡಿ, ಪುಡಿ ಮಾಡಿದ ಏಲಕ್ಕಿ ಅಥವಾ ವೆನಿಲಾ ಎಸ್ಸೆನ್ಸ್, ಹಾಲು ಜೊತೆಗೆ ಅಗತ್ಯ ಇದ್ದಲ್ಲಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಿಸಿ ನಾಲ್ಕೈದು ಗಂಟೆ ನೆನೆಯಲು ಬಿಡಬೇಕು.

ನಂತರ ಗ್ಯಾಸ್‍ನ ಎರಡು ಒಲೆಗಳ ಮೇಲೆ ಎರಡು ಬಾಣಲಿಯಲ್ಲಿ ಎಣ್ಣೆ ಕಾಯಲು ಇಡಬೇಕು. ಒಂದರಲ್ಲಿ ರೋಸ್‌ ಕುಕಿಸ್‌ ಮಾಡುವ ಎರಡು ಸಾಚಾಗಳನ್ನು ಕಾಯಿಸಬೇಕು, ನಂತರ ಕಾದ ಸಾಚಾ ಮೇಲೆ ಹಿಟ್ಟನ್ನು ಹಾಕುತ್ತಾ ಎಣ್ಣೆಯಲ್ಲಿ ಬಿಡಬೇಕು. ಎಣ್ಣೆಯಲ್ಲಿ ಸರಿಯಾಗಿ ಬೆಂದ ನಂತರ ಅದು ಸಾಚಾದಿಂದ ಬೇರ್ಪಡುತ್ತದೆ. ಮತ್ತೆ ಸಾಚಾವನ್ನು ಕಾಯುತ್ತಿರುವ ಎಣ್ಣೆಯಲ್ಲಿ ಬಿಡಬೇಕು. ಕಾದಿರುವ ಮತ್ತೊಂದು ಸಾಚಾದಲ್ಲಿ ಹಿಟ್ಟನ್ನು ಹಾಕಿ ಮತ್ತೊಂದು ಬಾಣಲಿಗೆ ಹಾಕಬೇಕು. ಹೀಗೆ ಮಾಡುತ್ತಾ ಹೋದರೆ ರುಚಿಕರವಾದ ರೋಸ್‌ ಕುಕಿಸ್‌ ತಿನ್ನಲು ರೆಡಿ. ಮೊಟ್ಟೆ ತಿನ್ನದವರು ಮೊಟ್ಟೆ ಬದಲು ಕಾರ್ನ್‍ಫ್ಲೋರ್ ಹಿಟ್ಟನ್ನು ಬಳಸಿಯೂ ಕುಕಿಸ್‌ ತಯಾರಿಸಬಹುದು. ಇದನ್ನು ಒಂದು ತಿಂಗಳವರೆಗೆ ಇಟ್ಟು ತಿನ್ನಬಹುದು.

ಪ್ಲಮ್ ಕೇಕ್:

ಪ್ಲಮ್ ಕೇಕ್

ಬೇಕಾಗುವ ಸಾಮಗ್ರಿಗಳು:

ಅರ್ಧ ಕೆಜಿ ಮೈದಾ ಹಿಟ್ಟು, 2 ಮೊಟ್ಟೆ, ಸಕ್ಕರೆ ಪುಡಿ, ಚೆರ‍್ರಿ, ಡ್ರೈಫ್ರೂಟ್ಸ್, ಫ್ರೂಟಿ ಫ್ರೂಟಿ, ಹಾಲು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ವೆನಿಲಾ ಎಸ್ಸೆನ್ಸ್, ಚಾಕಲೆಟ್ ಪೌಡರ್

ಡ್ರೈಫ್ರೂಟ್ಸ್  ಎಲ್ಲವೂ ತಲಾ 50ಗ್ರಾಂನಷ್ಟು ಆರೆಂಜ್  ಜ್ಯೂಸ್‌ನಲ್ಲಿ ರಾತ್ರಿ ನೆನಿಸಿಡಬೇಕು.

ನಂತರ ಖಾಲಿ ಕುಕ್ಕರ್‌ನಲ್ಲಿ ಸ್ಟ್ಯಾಂಡ್ ಇಟ್ಟು, ಹೆಚ್ಚಿನ ಪ್ರಮಾಣದಲ್ಲಿ ಕಾಯಿಸಿ, ನಂತರ ಉರಿ ಕಡಿಮೆ ಮಾಡಬೇಕು. ಈಗ ಡಬ್ಬಿಯನ್ನು ಸ್ಟ್ಯಾಂಡ್ ಮೇಲಿಟ್ಟು, ಕುಕ್ಕರ್‌ನ ಸಿಟಿ ತೆಗೆದು ಮುಚ್ಚಳವನ್ನು ಹಾಕಬೇಕು. ಒಂದು ಗಂಟೆವರೆಗೆ ಬೇಯಿಸಿ ನಂತರ ತಣ್ಣಗಾಗಲು ಬಿಡಬೇಕು. ಮೇಲೆ ಒಣದ್ರಾಕ್ಷಿ, ಗೋಡಂಬಿ ಹಾಗೂ ಪಿಸ್ತಾ ಹಾಕಿ ಅಲಂಕಾರ ಮಾಡಿದರೆ ಪ್ಲಮ್ ಕೇಕ್ ತಿನ್ನಲು ರೆಡಿ. ಇದನ್ನು 15 ದಿನಗಳವರೆಗೆ ಇಟ್ಟು ತಿನ್ನಬಹುದು.

ಮೊಟ್ಟೆಯನ್ನು ಚೆನ್ನಾಗಿ ಬೀಟ್ ಮಾಡಿ, ನಂತರ ಅದಕ್ಕೆ 300 ಗ್ರಾಂ ಸಕ್ಕರೆ ಪುಡಿ ಹಾಕಿ ಕಲಿಸಿ, ಅದಕ್ಕೆ ಅರ್ಧ ಕಪ್ ಹಾಲು ಬೆರೆಸಿ ಮತ್ತೆ ಕಲಿಸಬೇಕು. ನಂತರ ಮೈದಾ ಹಿಟ್ಟನ್ನು ಸಾಣಿಸುತ್ತಾ ಈ ಮುಂಚೆ ತಯಾರಿಸಿದ ಸಕ್ಕರೆ ಪುಡಿಯ ಮೇಲೆ ಮೆಲ್ಲಗೆ ಹಾಕುತ್ತಾ ಕಲಿಸಬೇಕು, ಇದಕ್ಕೆ ಅರ್ಧ ಚಮಚ ಬೇಕಿಂಗ್ ಪೌಡರ್, ಅರ್ಧ ಚಮಚ ಬೇಕಿಂಗ್ ಸೋಡಾ, ವೆನಿಲಾ ಎಸ್ಸೆನ್ಸ್, ಸ್ವಲ್ಪ ಚಾಕಲೆಟ್ ಪೌಡರ್ ಹಾಕಿ ಅರ್ಧ ಗಂಟೆವರೆಗೂ ಚೆನ್ನಾಗಿ ಕಲಿಸಬೇಕು. ನಂತರ ಅದನ್ನು ಕುಕ್ಕರ್ ಅಥವಾ ಓವನ್‍ನಲ್ಲಿ ಇಡುವ ಮುನ್ನ ಡ್ರೈ ಫ್ರೂಟ್ಸ್ ಅನ್ನು ಕೇಕ್ ಮಾಡುವ ಹಿಟ್ಟಿಗೆ ಮಿಕ್ಸ್ ಮಾಡಿ ನಿಮಗೆ ಬೇಕಾದ ಆಕಾರದ ಡಬ್ಬಿಗಳಲ್ಲಿ(ಶೇಪ್‌) ಕೆಳಗೆ ಬಟರ್ ಪೇಪರ್ ಹಾಕಿ, ಸ್ವಲ್ಪ ತುಪ್ಪ ಸವರಿ ಮೇಲೆ ಒಂಚೂರು ಮೈದಾ ಹಿಟ್ಟು ಹಾಕಿಡಬೇಕು.

ಪ್ಲೇನ್ ಪ್ಲಮ್ ಕೇಕ್:

ಪ್ಲೇನ್ ಪ್ಲಮ್ ಕೇಕ್

ಪ್ಲಮ್ ಕೇಕ್ ಮಾಡುವ ರೀತಿಯಲ್ಲೆ ಪ್ಲೇನ್ ಪ್ಲಮ್ ಕೇಕ್ ಮಾಡಬಹುದು. ಆದರೆ ಇದರಲ್ಲಿ ಯಾವುದೇ ಫ್ರೂಟ್ಸ್ ಹಾಗೂ ಚಾಕಲೆಟ್ ಪೌಡರ್ ಬಳಸಬಾರದು.

ಮಾಹಿತಿ: ಫ್ರಾಂಜಲಾ ನವೀನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.