ಸೋಂಪು, ಓಂಕಾಳು ಕಷಾಯ
ಬೇಕಾಗುವ ಸಾಮಗ್ರಿ: ಸೋಂಪು 2 ಚಮಚ, ಓಂಕಾಳು 4 ಚಮಚ, ಜೀರಾ 4 ಚಮಚ.
ಮಾಡುವ ವಿಧಾನ: ಓಂಕಾಳು ಮತ್ತು ಜೀರಿಗೆಯನ್ನು ಡ್ರೈ ರೋಸ್ಟ್ ಮಾಡಿ ನಂತರ ಸೋಂಪುಕಾಳು ಹಾಕಿ ಮಿಶ್ರಣ ಮಾಡಿ. ಕಾಳುಗಳು ತಣಿದ ನಂತರ ಪುಡಿ ಮಾಡಿಟ್ಟುಕೊಳ್ಳಿ. ಒಂದು ಲೋಟ ಬಿಸಿನೀರಿಗೆ 1/4 ಚಮಚ ಪುಡಿ, ಬ್ಲಾಕ್ ಸಾಲ್ಟ್ ಸೇರಿಸಿ ಸೇವಿಸಿ.
ಶುಂಠಿ –ದನಿಯ ಕಷಾಯ
ಬೇಕಾಗುವ ಸಾಮಗ್ರಿ: ಒಣಶುಂಠಿ ತುಂಡುಗಳು 1/4 ಕಪ್ ದನಿಯ(ಕೊತ್ತಂಬರಿ ಬೀಜ ) 1/2 ಕಪ್ ತಾಟಿಬೆಲ್ಲದ ತುಂಡುಗಳು 1 ಕಪ್. ಮಾಡುವ ವಿಧಾನ: ಮೊದಲಿಗೆ ದನಿಯವನ್ನು ಕೆಂಪಗೆ ಹುರಿದುಕೊಳ್ಳಿ ಅದೇ ಬಾಣಲಿಯಲ್ಲಿ ಒಣ ಶುಂಠಿ ತುಂಡುಗಳನ್ನು ಬೆಚ್ಚಗೆ ಮಾಡಿಕೊಳ್ಳಿ. ಇವೆರಡೂ ತಣಿದ ನಂತರ ತಾಟಿ ಬೆಲ್ಲದ ತುಂಡುಗಳೊಂದಿಗೆ ಸೇರಿಸಿ ಪುಡಿ ಮಾಡಿಕೊಳ್ಳಿ. ಒಂದು ಲೋಟ ಬಿಸಿನೀರಿಗೆ 1 ಚಮಚ ಪುಡಿಯನ್ನು ಸೇರಿಸಿ ಸೇವಿಸಿ.
ಮೆಂತ್ಯ –ಒಣಸೊಂಡೆಕಾಯಿ ಕಷಾಯ
ಬೇಕಾಗುವ ಸಾಮಗ್ರಿ: ಮೆಂತ್ಯ ಒಣ ಸೊಂಡೆಕಾಯಿ ಕಪ್ಪು ಜೀರಿಗೆ ತಲಾ 4 ಚಮಚ. ಮಾಡುವ ವಿಧಾನ: ಮೇಲೆ ಕಾಣಿಸಿದ ಮೂರೂ ಪದಾರ್ಥಗಳನ್ನು ಬೇರೆಬೇರೆಯಾಗಿಡ್ರೈ ರೋಸ್ಟ್ ಮಾಡಿ.ತಣಿಸಿ ನಂತರ ಪುಡಿಮಾಡಿಕೊಳ್ಳಿ. ಒಂದು ಲೋಟ ಬಿಸಿನೀರಿಗೆ 1/4 ಚಮಚ ಪುಡಿ 1/2 ಚಮಚ ಜೇನುತುಪ್ಪ ಸೇರಿಸಿ ಸೇವಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.