ADVERTISEMENT

ರೆಸಿಪಿ: ಮಸಾಲ ಚಿಕನ್ ಲೆಗ್‌ಪೀಸ್‌

ದೀಪಕ್ ಎನ್.
Published 30 ಜುಲೈ 2022, 4:18 IST
Last Updated 30 ಜುಲೈ 2022, 4:18 IST
ಮಸಾಲ ಚಿಕನ್ ಲೆಗ್‌ಪೀಸ್‌
ಮಸಾಲ ಚಿಕನ್ ಲೆಗ್‌ಪೀಸ್‌   

ಮಸಾಲ ಚಿಕನ್‌ ಲೆಗ್‌ ಪೀಸ್‌ – ಸುಲಭ, ಸರಳ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ವಿಶಿಷ್ಟ ಚಿಕನ್ ಖಾದ್ಯ. ಮಳೆಗಾಲ, ಚಳಿಗಾಲಕ್ಕೆ ಹೇಳಿ ಮಾಡಿಸಿದ ಖಾದ್ಯವೂ ಹೌದು.

ಬೇಕಾಗುವ ಸಾಮಗ್ರಿಗಳು: ಚಿಕನ್ ಲೆಗ್‌ ಪೀಸ್ – 4, ಕಾಳುಮೆಣಸು – 2 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ- 2 ಚಮಚ, ಚಿಕನ್ ಮಸಾಲ – 2 ಚಮಚ, ಗೋಧಿ ಹಿಟ್ಟು – ಅರ್ಧ ಕಪ್, ಅಡುಗೆ ಎಣ್ಣೆ – 2 ಕಪ್, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಚಿಕನ್ ಲೆಗ್ ಪೀಸ್‌ಗಳನ್ನು ಚೆನ್ನಾಗಿ ತೊಳೆದು ಸ್ವಚ್ಚಗೊಳಿಸಿ. ಕಾಳುಮೆಣಸು, ಶುಂಠಿ, ಮೆಣಸಿನ ಹುಡಿ, ಹಾಗೂ ಬೆಳ್ಳುಳ್ಳಿ, ಚಿಕನ್ ಮಸಾಲವನ್ನು ಚೆನ್ನಾಗಿ ಮಿಶ್ರಣವನ್ನು ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚಿಕನ್ ಕಾಲುಗಳಿಗೆ ಈ ಮಸಾಲ ಮಿಶ್ರಣವನ್ನು ಸವರಿ. 30 ನಿಮಿಷಗಳ ಕಾಲ ಇದನ್ನು ಹಾಗೆಯೆ ಬಿಡಿ.

ADVERTISEMENT

ಪ್ಯಾನ್‍ನಲ್ಲಿ ಎಣ್ಣೆ ಬಿಸಿ ಮಾಡಲು ಇಡಿ. ಅದು ಕಾಯುತ್ತಿದ್ದಂತೆ, ಗೋಧಿ ಹುಡಿಯಲ್ಲಿ ಚಿಕನ್ ಕಾಲುಗಳನ್ನು ಉರುಳಿಸಿ ಕಾದಿರುವ ಎಣ್ಣೆಗೆ ಹಾಕಿ ಮತ್ತು ಚೆನ್ನಾಗಿ ಬೇಯಿಸಿದರೆ ಮಸಾಲ ಚಿಕನ್ ಲೆಗ್ ಪೀಸ್ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.