ADVERTISEMENT

ಮೊಹರಂ ವಿಶೇಷ: ಚೊಂಗೆ, ಕಿಚಡಿ

ಸುಷ್ಮಾ ಸವಸುದ್ದಿ
Published 12 ಜುಲೈ 2024, 23:30 IST
Last Updated 12 ಜುಲೈ 2024, 23:30 IST
   
ಮೊಹರಂ ತ್ಯಾಗ, ಬಲಿದಾನದ ಸ್ಮರಣೆಯ ಪ್ರತೀಕವಷ್ಟೇ ಅಲ್ಲ. ಅದು ಹಿಂದೂ– ಮುಸ್ಲಿಮರ ಭಾವೈಕ್ಯ ಸಾರುವ ಹಬ್ಬವೂ ಹೌದು. ಮೊಹರಂ ಹಬ್ಬ ಮಾಂಸಾಹಾರ ಪ್ರಿಯರಿಗಷ್ಟೇ ಅಲ್ಲದೇ, ಸಸ್ಯಾಹಾರಿಗಳಿಗೂ ಬಾಯಲ್ಲಿ ನೀರುಣಿಸುತ್ತದೆ. ಮೊಹರಂ ಸಮೀಪಿಸುತ್ತಿದ್ದು, ಹಬ್ಬದ ವಿಶೇಷ ಅಡುಗೆಯಾದ ಚೊಂಗೆ ಮತ್ತು ಕಿಚಡಿ ತಯಾರಿಸುವ ವಿಧಾನ ಇಲ್ಲಿದೆ

ಚೊಂಗೆ

ಬೇಕಾಗುವ ಸಾಮಗ್ರಿಗಳು: 1 ಕಪ್ ಗೋಧಿ ಹಿಟ್ಟು, ತುರಿದ ಕೊಬ್ಬರಿ, ಬೆಲ್ಲ, ಸ್ವಲ್ಪ ಸೋಂಪು, ಸ್ವಲ್ಪ ಗಸಗಸೆ, ಏಲಕ್ಕಿ ಪುಡಿ, ಉಪ್ಪು ಎಣ್ಣೆ.

ಮಾಡುವ ವಿಧಾನ: ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು, ನೀರು ಹಾಕಿ ಹದವಾಗಿ ನಾದಿಕೊಂಡು, 10 ನಿಮಿಷ ಹಾಗೇ ಬಿಡಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಬೆಲ್ಲ ಕರಗಿಸಿ ಪಾಕ ಮಾಡಬೇಕು. ಬಿಸಿ ಪಾಕಕ್ಕೆ ಏಲಕ್ಕಿ ಪುಡಿ ಹಾಕಬೇಕು. ಚಪಾತಿ ಲಟ್ಟಿಸಿಕೊಳ್ಳಬೇಕು, ಅದನ್ನು ರೋಲ್ ಮಾಡಿ ಮತ್ತೊಮ್ಮೆ ಉಳ್ಳಿ ಮಾಡಿ, ಚಿಕ್ಕದಾಗಿ, ದಪ್ಪ ಇರುವಂತೆ ಲಟ್ಟಿಸಿಕೊಳ್ಳಬೇಕು. ಅದನ್ನು ಬೇಯಿಸಿ, ಅದರ ಒಂದು ಬದಿಗೆ ಪಾನಕ, ಕೊಬ್ಬರಿ, ಸೋಂಪು, ಗಸಗಸೆ ಹಾಕಿದರೆ ಚೊಂಗೆ ತಯಾರು.

ADVERTISEMENT
ಚೊಂಗೆ

ಕಿಚಡಿ

ಬೇಕಾಗುವ ಸಾಮಗ್ರಿಗಳು: ಅಕ್ಕಿ, ತೊಗರಿ ಬೆಳೆ, ಈರುಳ್ಳಿ, ಕೊತ್ತಂಬರಿ, ಹಸಿ ಮೆಣಸಿನಕಾಯಿ, ಕರಿಬೇವು, ಚಕ್ಕೆ, ಲವಂಗ, ಬೆಳ್ಳುಳ್ಳಿ ಎಳಸು, ಉಪ್ಪು, ಅರಿಶಿಣ, ಎಣ್ಣೆ, ತುಪ್ಪ

ಮಾಡುವ ವಿಧಾನ: ಅಕ್ಕಿ ಮತ್ತು ತೊಗರಿ ಬೆಳೆಯನ್ನು ಒಂದು ಪಾತ್ರೆಯಲ್ಲಿ ಬೆರೆಸಿ, ತೊಳೆಯಬೇಕು. ಕೊಬ್ಬರಿ, ಲವಂಗ, ಚಕ್ಕೆ, ಬೆಳ್ಳುಳ್ಳಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.

ಕುಕ್ಕರನ್ನು ಒಲೆ ಮೇಲಿಟ್ಟು, ಎಣ್ಣೆ, ಸ್ವಲ್ಪ ತುಪ್ಪ ಹಾಕಿ, ಕಾಯ್ದ ನಂತರ ಸಾಸಿವೆ, ಜೀರಿಗೆ, ಕರಿಬೇವು, ದೊಡ್ಡ ಗಾತ್ರದಲ್ಲಿ ಹೆಂಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಅರಿಶಿಣ ಹಾಕಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಬೇಯಿಸಬೇಕು. ನಂತರ ತೊಳೆದಿಟ್ಟ ಅಕ್ಕಿ ಮತ್ತೆ ಬೆಳೆಯನ್ನು ಕುಕ್ಕರ್‌ಗೆ ಹಾಕಿ ಸರಿಯಾಗಿ ಮಿಕ್ಸ್ ಮಾಡಬೇಕು. ನಂತರ ರುಬ್ಬಿಟ್ಟುಕೊಂಡ ಕೊಬ್ಬರಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಎಲ್ಲವನ್ನು ಮಿಕ್ಸ್ ಮಾಡಿಕೊಂಡು ಕುಕ್ಕರ್ ಬಾಯಿ ಹಾಕಿ ಮೂರು ವಿಜಲ್ ಕೂಗಿಸಿದರೇ ಕಿಚಡಿ ರೆಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.