ಬಹಳಷ್ಟು ಜನರಿಗೆ ಈಗ ಮಟನ್‌ಗಿಂತ (Mutton) ಹೆಚ್ಚು ಇಷ್ಟವಾಗೋದು ಚಿಕನ್ (Chicken). ಅದರಲ್ಲಿಯೂ, ಚಿಕನ್ ರುಚಿಯಾಗಿರಬೇಕು, ಬೇಗ ರೆಡಿ ಆಗಬೇಕು (Quick Recipe) ಎಂದು ಬಯಸುವವರೇ ಹೆಚ್ಚು. ಊಟ ಪ್ರಾರಂಭಕ್ಕೂ ಮುನ್ನ ಅಥವಾ ಯಾವುದೇ ಪಾರ್ಟಿ ವೇಳೆ ಒಳ್ಳೆಯ ಸ್ಟಾರ್ಟರ್ (Starter) ಬೇಕೆಂದರೆ ನೀವು ಬೋನ್‌ಲೆಸ್ ಚಿಕನ್ ಫ್ರೈ (Chicken Fry) ಕಡೆಗೆ ನೋಡಬಹುದು. ಅಂಥದ್ದೊಂದು ರೆಸಿಪಿ ಮಾಡಿ ತೋರಿಸಿದ್ದಾರೆ ಮುರಳಿ ಸುಚಿತ್ರಾ (Murali Suchitra) ದಂಪತಿ. ಟೆಂಡರ್ ಚಿಕನ್ (Tender Chicken) ಅನ್ನು ನೀವು ಮಧ್ಯಮ ಗಾತ್ರದ ಪೀಸ್‌ಗಳನ್ನಾಗಿ ಮಾಡಿಕೊಂಡು ಫ್ರೈ ಮಾಡಿದರೆ ಹೆಚ್ಚು ರುಚಿಯಾಗಿರುತ್ತದೆಯಲ್ಲದೆ, ಬಾಯಲ್ಲಿಟ್ಟರೆ ಕರಗಿಹೋಗುವಷ್ಟು ಮೃದುವೂ ಆಗಿರುತ್ತದೆ. ಅದರಲ್ಲಿಯೂ, ಸ್ಮೋಕಿ ಫ್ಲೇವರ್ (Smoky Flavour) ಕೊಟ್ಟು ಮಾಡಿ ತೋರಿಸಿರುವ ಈ ಬೋನ್‌ಲೆಸ್ ಚಿಕನ್ ಫ್ರೈ ರೆಸಿಪಿ ನಿಮಗೆ ಇಷ್ಟವಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.