ADVERTISEMENT

ಎಳ್ಳಿನ ವಿಶೇಷ ತಿನಿಸುಗಳು

ಕೆ.ವಿ.ರಾಜಲಕ್ಷ್ಮಿ
Published 31 ಮೇ 2024, 19:05 IST
Last Updated 31 ಮೇ 2024, 19:05 IST
ಎಳ್ಳಿನ ಬರ್ಫಿ
ಎಳ್ಳಿನ ಬರ್ಫಿ   

1. ಬೇಸಿನ್ ಎಳ್ಳಿನುಂಡೆ
ಬೇಕಾಗುವ ಸಾಮಗ್ರಿಗಳು
ಎಳ್ಳು 1/4 ಕಪ್, ಕಡಲೆ ಹಿಟ್ಟು 1 ಕಪ್, ಕಂದು ಸಕ್ಕರೆ (ಬ್ರೌನ್ ಶುಗರ್ ) 1 1/2ಕಪ್, ತುಪ್ಪ.
ಮಾಡುವ ವಿಧಾನ: ಎಳ್ಳನ್ನು ಜಿಡ್ಡು ಸೋಕಿಸದೆ ಹುರಿದು, ಸಕ್ಕರೆಯೊಂದಿಗೆ ನುಣ್ಣಗೆ ಪುಡಿಮಾಡಿಕೊಳ್ಳಿ. ಕಡಲೆಹಿಟ್ಟನ್ನು ಗಂಟಿಲ್ಲದಂತೆ ಜರಡಿಯಾಡಿಸಿ. ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ, ಕಡಲೆಹಿಟ್ಟನ್ನು ಒಳ್ಳೆಯ ಪರಿಮಳ ಬರುವವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಸಕ್ಕರೆ ಎಳ್ಳಿನ ಮಿಶ್ರಣವನ್ನು ಸೇರಿಸಿ, ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಕೈಯಾಡಿಸಿ ಉರಿ ನಂದಿಸಿ, ಮಿಶ್ರಣವನ್ನು ಬೇರೊಂದು ತಟ್ಟೆಗೆ ವರ್ಗಾಯಿಸಿ ಸಣ್ಣ ಗಾತ್ರದ ಉಂಡೆಗಳನ್ನು ಕಟ್ಟಿ.

ಬೇಸಿನ್ ಎಳ್ಳಿನುಂಡೆ
ಗೋಧಿ-ಎಳ್ಳಿನುಂಡೆ

  ಗೋಧಿ-ಎಳ್ಳಿನುಂಡೆ

ಬೇಕಾಗುವ ಸಾಮಗ್ರಿಗಳು:  ಎಳ್ಳು 1/4 ಕಪ್ ಗೋಧಿ ಹಿಟ್ಟು 1 ಕಪ್ಗಸಗಸೆ 1 ಚಮಚ ಹುರಿದ ಶೇಂಗಾ 2 ಚಮಚ ಬೆಲ್ಲ 1 1/2ಕಪ್ ತುಪ್ಪ.ಮಾಡುವ ವಿಧಾನ: ಪ್ರತ್ಯೇಕವಾಗಿ ಎಳ್ಳುಗಸಗಸೆ ಮತ್ತು ಗೋಧಿ ಹಿಟ್ಟನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಶೇಂಗಾ ಗಸಗಸೆಯನ್ನು ಮಿಕ್ಸಿಯಲ್ಲಿ ತರಿತರಿಯಾಗಿ ಅರೆದುಕೊಳ್ಳಿ. ದಪ್ಪತಳದ ಪಾತ್ರೆಗೆ ಬೆಲ್ಲ ಹಾಕಿ ಅದು ಕರಗುವಷ್ಟು ಮಾತ್ರ ನೀರು ಸಣ್ಣ ಉರಿಯಲ್ಲಿ ಇಡಿ. ಬೆಲ್ಲ ಕರಗಿ ನೊರೆಯುಕ್ಕುವಾಗ ಹುರಿದ ಗೋಧಿ ಹಿಟ್ಟುಎಳ್ಳು ಶೇಂಗಾ ಗಸಗಸೆ ಪುಡಿ ಹಾಕಿ ಕೈಯಾಡಿಸುತ್ತಿರಿ. ಅವಶ್ಯಕತೆಗೆ ತಕ್ಕಂತೆ ತುಪ್ಪ ಹಾಕಿ ಚೆನ್ನಾಗಿ ಮಗುಚಿ. ಮಿಶ್ರಣ ಪಾತ್ರೆಯನ್ನು ಬಿಟ್ಟು ಬರುತ್ತಿದ್ದಂತೆ ತುಪ್ಪದ ಜಿಡ್ಡು ಕಾಣಿಸಿದ ತಟ್ಟೆಯ ಮೇಲೆ ಮಿಶ್ರಣವನ್ನು ಸುರಿಯಿರಿ. ಬಿಸಿಯಿದ್ದಾಗಲೇ ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿ.

ADVERTISEMENT

ಎಳ್ಳಿನ ಬರ್ಫಿ

ಬೇಕಾಗುವ ಸಾಮಗ್ರಿಗಳು:  ಎಳ್ಳು 1/4 ಕಪ್ ಮಿಲ್ಕ್ ಪೌಡರ್ 1/4 ಕಪ್ಒಣಕೊಬ್ಬರಿ ಪುಡಿ 1/2 ಕಪ್ ಬೆಲ್ಲ 1 ಕಪ್ ತುಪ್ಪ. ಮಾಡುವ ವಿಧಾನ: ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಎಳ್ಳನ್ನು ಹುರಿದುಕೊಳ್ಳಿ . ಅದೇ ಬಾಣಲೆಯಲ್ಲಿ ಬೆಲ್ಲ ತುಸು ನೀರು ಹಾಕಿ ಸಣ್ಣ ಉರಿಯಲ್ಲಿಡಿ. ಬೆಲ್ಲ ಸಂಪೂರ್ಣವಾಗಿ ಕರಗಿದ ಕೂಡಲೇ ಉಳಿದ ಎಲ್ಲಾ ಸಾಮಗ್ರಿ ಹಾಕಿ ಚೆನ್ನಾಗಿ ಕೈಯಾಡುತ್ತಿರಿ. ಅವಶ್ಯವಿದ್ದಲ್ಲಿ ಮೇಲ್ತುಪ್ಪ ಸೇರಿಸಿ. ಮಿಶ್ರಣ ಚೆನ್ನಾಗಿ ಬೆರೆತು ತಳ ಬಿಡುವಾಗ ಜಿಡ್ಡು ಸವರಿದ ತಟ್ಟೆಗೆ ಹುಯ್ದು ಒಂದರಿಂದ ಎರಡು ತಾಸು ತಣಿಯಲು ಬಿಡಿ. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.