ಪ್ರಭಾ ಶಾಸ್ತ್ರಿ
ಯುಗಾದಿಗೆ ಬಗೆಬಗೆಯ ಹೋಳಿಗೆಯ ರೆಸಿಪಿ ನೀಡಿದ್ದಾರೆ ಪ್ರಭಾ ಶಾಸ್ತ್ರಿ
ಗಸಗಸೆಯ ಹೋಳಿಗೆ
ಬೇಕಾಗುವ ಸಾಮಗ್ರ‍್ರಿಗಳು: ಗಸಗಸೆ-1 ಕಪ್, ಒಣ ಕೊಬ್ಬರಿ ತುರಿ-1ಕಪ್, ಬೆಲ್ಲ-3/4ಕಪ್, ಎಲಕ್ಕಿ ಪುಡಿ ಸ್ವಲ್ಪ, ಪೇಣಿ ರವೆ-1/2ಕಪ್, ಗೋಧಿಹಿಟ್ಟು-1/2ಕಪ್, ಸ್ವಲ್ಪ ಉಪ್ಪು, ಅರಿಶಿನ ಸ್ವಲ್ಪ, ಎಣ್ಣೆ-4ಚಮಚ.
ಮಾಡುವ ವಿಧಾನ: ಗಸಗಸೆ, ಕೊಬ್ಬರಿತುರಿ ಎರಡನ್ನು ನುಣ್ಣಗೆ ಪುಡಿ ಮಾಡಿಕೊಂಡು, ದಪ್ಪ ತಳದ ಪಾತ್ರ‍್ರೆಗೆ ಹಾಕಿ ಬೆಲ್ಲ ಎಲ್ಲಕ್ಕಿಪುಡಿ ಹಾಕಿ ನೀರು ಎರಡು ಚಮಚ ಹಾಕಿ ಒಲೆಯ ಮೇಲೆ ಇಟ್ಟು ಮಗುಚಿ ಗಟ್ಟಿಯಾದ ನಂತರ ಇಳಿಸಿ ಹೂರಣ ರೆಡಿ. ಪೇಣಿರವೆ, ಗೋಧಿ ಹಿಟ್ಟು, ಸ್ವಲ್ಪ ಉಪ್ಪು, ಅರಿಶಿನ ಹಾಕಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನಂತೆ ಕಲೆಸಿ ಮೂರು ಚಮಚ ಎಣ್ಣೆಹಾಕಿ ನಾದಿ ಎರಡು ಗಂಟೆಕಾಲ ಮುಚ್ಚಿ ಇಡಿ. ಕಣಕ ರೆಡಿ.
ಕಣಕವನ್ನು ಕೈಯಲ್ಲಿ ತೆಗೆದುಕೊಂಡು ಅಗಲಮಾಡಿ ಹೂರಣದ ಉಂಡೆ ಇಟ್ಟು ಮುಚ್ಚಿ ಹೋಳಿಗೆ ಶೀಟಿಗೆ ಎಣ್ಣೆಹಚ್ಚಿಕೊಂಡು ತುಂಬಿದ ಉಂಡೆ ಇಟ್ಟು ಲಟ್ಟಿಸಿ ಕಾದತವಾದ ಮೇಲೆಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ ತೆಗೆಯಿರಿ.
ಹೆಸರುಬೇಳೆ ಹೋಳಿಗೆ
ಬೇಕಾಗುವ ಸಾಮಗ್ರ‍್ರಿಗಳು: ಹೆಸರುಬೇಳೆ-1ಕಪ್ ಸಕ್ಕರೆ-1/2ಕಪ್ ಎಲಕ್ಕಿ ಪುಡಿ ಸ್ವಲ್ಪ ತುಪ್ಪ-2ಚಮಚ ಹಾಲು-2ಚಮಚ ಪೇಣಿ ರವೆ-1/2ಕಪ್ ಗೋಧಿಹಿಟ್ಟು-1/2ಕಪ್ ಸ್ವಲ್ಪ ಉಪ್ಪು ಅರಿಶಿನ ಸ್ವಲ್ಪ ಎಣ್ಣೆ-4ಚಮಚ.
ಮಾಡುವ ವಿಧಾನ: ಹೆಸರುಬೇಳೆಯನ್ನು ಬಣ್ಣ ಸ್ವಲ್ಪ ಬದಲಾಗುವವರೆಗೆ ಹುರಿದುಕೊಂಡು ನುಣ್ಣಗೆ ಪುಡಿಮಾಡಿಕೊಳ್ಳಬೇಕು. ಸಕ್ಕರೆಯನ್ನು ಪುಡಿಮಾಡಿಕೊಂಡು ಎರಡನ್ನು ಪಾತ್ರ‍್ರೆಗೆ ಹಾಕಿ ತುಪ್ಪಹಾಕಿ ಕಲೆಸಿ ಹಾಲನ್ನು ಹಾಕಿ ಮೃದುಮಾಡಿಕೊಳ್ಳಬೇಕು. ಹೂರಣ ರೆಡಿ.ಪೇಣಿರವೆ ಗೋಧಿ ಹಿಟ್ಟು ಸ್ವಲ್ಪ ಉಪ್ಪು ಅರಿಶಿನ ಹಾಕಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನಂತೆ ಕಲೆಸಿ ಮೂರು ಚಮಚ ಎಣ್ಣೆಹಾಕಿ ನಾದಿ ಎರಡು ಗಂಟೆಕಾಲ ಮುಚ್ಚಿ ಇಡಿ. ಕಣಕ ರೆಡಿ.ಕಣಕವನ್ನು ಕೈಯಲ್ಲಿ ತೆಗೆದುಕೊಂಡು ಅಗಲಮಾಡಿ ಹೂರಣದ ಉಂಡೆ ಇಟ್ಟು ಮುಚ್ಚಿ ಹೋಳಿಗೆ ಶೀಟಿಗೆ ಎಣ್ಣೆಹಚ್ಚಿಕೊಂಡು ತುಂಬಿದ ಉಂಡೆ ಇಟ್ಟು ಲಟ್ಟಿಸಿ ಕಾದತವಾದ ಮೇಲೆಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ ತೆಗೆಯಿರಿ.
ಪನ್ನಿರ್ ಒಬ್ಬಟ್ಟು
ಬೇಕಾಗುವ ಸಾಮಗ್ರ‍್ರಿಗಳು: ಪನ್ನಿರ್ ತುರಿದಿದ್ದು-1ಬಟ್ಟಲು ಸಪ್ಪೆಕೋವಾ-1/4ಬಟ್ಟಲು ಸಕ್ಕರೆಪುಡಿ-1/4ಬಟ್ಟಲು ಎಲಕ್ಕಿಪುಡಿ ಸ್ವಲ್ಪ ಪೇಣಿ ರವೆ-1/2ಕಪ್ ಗೋಧಿಹಿಟ್ಟು-1/2ಕಪ್ ಸ್ವಲ್ಪ ಉಪ್ಪು ಅರಿಶಿನ ಸ್ವಲ್ಪ ಎಣ್ಣೆ-4ಚಮಚ.
ಮಾಡುವ ವಿಧಾನ: ಒಂದು ಪಾತ್ರ‍್ರೆಗೆ ತುರಿದು ಪನ್ನಿರ್ ಕೋವಾ ಸಕ್ಕರೆಪುಡಿ ಎಲ್ಲಕ್ಕಿಪುಡಿ ಹಾಕಿ ಚನ್ನಾಗಿ ಕಲೆಸಿಕೊಳ್ಳಿ. ಹೊರಣ ರೆಡಿ.ಪೇಣಿರವೆ ಗೋಧಿ ಹಿಟ್ಟು ಸ್ವಲ್ಪ ಉಪ್ಪು ಅರಿಶಿನ ಹಾಕಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನಂತೆ ಕಲೆಸಿ ಮೂರು ಚಮಚ ಎಣ್ಣೆಹಾಕಿ ನಾದಿ ಎರಡು ಗಂಟೆಕಾಲ ಮುಚ್ಚಿ ಇಡಿ. ಕಣಕ ರೆಡಿ.ಕಣಕವನ್ನು ಕೈಯಲ್ಲಿ ತೆಗೆದುಕೊಂಡು ಅಗಲಮಾಡಿ ಹೂರಣದ ಉಂಡೆ ಇಟ್ಟು ಮುಚ್ಚಿ ಹೋಳಿಗೆ ಶೀಟಿಗೆ ಎಣ್ಣೆಹಚ್ಚಿಕೊಂಡು ತುಂಬಿದ ಉಂಡೆ ಇಟ್ಟು ಲಟ್ಟಿಸಿ ಕಾದತವಾದ ಮೇಲೆಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ ತೆಗೆಯಿರಿ.
ಕೋವಾ ಹೋಳಿಗೆ
ಬೇಕಾಗುವ ಸಾಮಗ್ರ‍್ರಿಗಳು: ಸಪ್ಪೆಕೋವಾ-1ಬಟ್ಟಲು ಬೆಲ್ಲ-1/4ಬಟ್ಟಲು ಗೋಧಿಹಿಟ್ಟು-2ಚಮಚ ಎಲಕ್ಕಿ ಪುಡಿ ಸ್ವಲ್ಪ ತುಪ್ಪ-2ಚಮಚ ಪೇಣಿ ರವೆ-1/2ಕಪ್ ಗೋಧಿಹಿಟ್ಟು-1/2ಕಪ್ ಸ್ವಲ್ಪ ಉಪ್ಪು ಅರಿಶಿನ ಸ್ವಲ್ಪ ಎಣ್ಣೆ-4ಚಮಚ.
ಮಾಡುವ ವಿಧಾನ: ದಪ್ಪತಳದ ಪಾತ್ರ‍್ರೆಯನ್ನು ಒಲೆಯ ಮೇಲೆ ಇಟ್ಟು ಬಿಸಿಯಾದ ಮೇಲೆ ಒಂದು ಚಮಚ ತುಪ್ಪಹಾಕಿ ಗೋಧಿಹಿಟ್ಟು ಹಾಕಿ ಪರಿಮಳ ಬರುವವರೆಗೆ ಹುರಿದು ತೆಗೆದು ಇಟ್ಟುಕೊಳ್ಳಿ. ಅದೇ ಪಾತ್ರ‍್ರೆಗೆ ಒಂದು ಚಮಚ ತುಪ್ಪಹಾಕಿ ಕೋವಾಹಾಕಿ ಮಗುಚಿ ಬೆಲ್ಲ ಎಲಕ್ಕಿಪುಡಿ ಹಾಕಿ ಮಗುಚಿ ಹುರಿದಿಟ್ಟು ಗೋಧಿಹಿಟ್ಟು ಹಾಕಿ ಚನ್ನಾಗಿ ಮಗುಚಿ ಸ್ವಲ್ಪ ಗಟ್ಟಿಯಾದ ಮೇಲೆ ಇಳಿಸಿ. ಹೂರಣ ರೆಡಿ.ಪೇಣಿರವೆ ಗೋಧಿ ಹಿಟ್ಟು ಸ್ವಲ್ಪ ಉಪ್ಪು ಅರಿಶಿನ ಹಾಕಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನಂತೆ ಕಲೆಸಿ ಮೂರು ಚಮಚ ಎಣ್ಣೆಹಾಕಿ ನಾದಿ ಎರಡು ಗಂಟೆಕಾಲ ಮುಚ್ಚಿ ಇಡಿ. ಕಣಕ ರೆಡಿ.ಕಣಕವನ್ನು ಕೈಯಲ್ಲಿ ತೆಗೆದುಕೊಂಡು ಅಗಲಮಾಡಿ ಹೂರಣದ ಉಂಡೆ ಇಟ್ಟು ಮುಚ್ಚಿ ಹೋಳಿಗೆ ಶೀಟಿಗೆ ಎಣ್ಣೆಹಚ್ಚಿಕೊಂಡು ತುಂಬಿದ ಉಂಡೆ ಇಟ್ಟು ಲಟ್ಟಿಸಿ ಕಾದತವಾದ ಮೇಲೆಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ ತೆಗೆಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.