ಮಂಗಳೂರು: ಅಡಿಕೆ ತೋಟದ ಉಪ ಬೆಳೆಯಾಗಿರುವ ಕೋಕೊದಿಂದ ಕೃಷಿಕರೊಬ್ಬರು ತಯಾರಿಸಿರುವ ಹೋಳಿಗೆಗೆ ಮಾರುಕಟ್ಟೆಯಲ್ಲಿ ಭರಪೂರ ಬೇಡಿಕೆ ಬರುತ್ತಿದೆ. ಹೊಸ ಪ್ರಯೋಗ ಆರಂಭಿಸಿ ಎರಡು ವಾರದಲ್ಲೇ 1,000ಕ್ಕೂ ಹೆಚ್ಚು ಹೋಳಿಗೆಗಳು ಖಾಲಿಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಗುರಿಮೂಲೆಯ ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಅವರು, ಕೋಕೊ ಬೀನ್ಸ್‌ನಿಂದ ಹೋಳಿಗೆ ತಯಾರಿಸಿ, ಸ್ಥಳೀಯ ಅಂಗಡಿಗಳಿಗೆ ನೀಡಿದ್ದರು. ಗ್ರಾಹಕರ ಪ್ರತಿಕ್ರಿಯೆಯಿಂದ ಪ್ರೇರಿತರಾಗಿ ಅಡಿಕೆ
ಯಿಂದಲೂ ಹೋಳಿಗೆ ಸಿದ್ಧಪಡಿಸುವ ಪ್ರಯೋಗ ನಡೆಸಿದ್ದಾರೆ.
ಕೋಕೊ ಹೋಳಿಗೆ ಸುಲಭವಾಗಿರುವ ಕಾರಣ ಸಿದ್ಧಪಡಿಸಿ ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ. ಚಾಕೋಲೆಟ್‌ಗೆ ಬಳಸುವ ಕೋಕೊಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಈಗ ಹೋಳಿಗೆ ತಯಾರಿಕೆಯ ಪ್ರಯೋಗವು ಭವಿಷ್ಯದಲ್ಲಿ ಬೆಳೆಗಾರರ ಪಾಲಿಗೆ ಹೊಸ ನಿರೀಕ್ಷೆ ಸೃಷ್ಟಿಸಿದೆ.
‘ನಾನು ಕೃಷಿಕನಾಗಿರುವುದ ರಿಂದ ಕೃಷಿ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಬೇಕೆನ್ನುವ ಉದ್ದೇಶದಿಂದ ಕೋಕೊ, ಅಡಿಕೆ ಹೋಳಿಗೆ ತಯಾರಿ
ಸಿದೆ. ನಿರೀಕ್ಷೆ ಮೀರಿ ಗ್ರಾಹಕರ ಸ್ಪಂದನ ದೊರೆತಿದೆ’ ಎನ್ನುತ್ತಾರೆ ಶ್ರೀಕೃಷ್ಣ ಶಾಸ್ತ್ರಿ.
‘ಹೊಸ ಅಡಿಕೆಯಲ್ಲಿ ಚೊಗರುಜಾಸ್ತಿ. ಎರಡು ವರ್ಷ ಹಳೆಯ ಅಡಿಕೆಯನ್ನು ಹೋಳಿಗೆಗೆ ಬಳಸಬಹುದು. ಇದನ್ನು ಮಿಕ್ಸರ್‌ನಲ್ಲಿ ಪುಡಿ ಮಾಡುವುದು ಕಷ್ಟ. ಯಂತ್ರ ದೊರೆತರೆ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಬಹುದು. 250 ಗ್ರಾಂ ಅಡಿಕೆಯಲ್ಲಿ 52 ಹೋಳಿಗೆ ತಯಾರಿಸಬಹುದು. 1 ಕೆ.ಜಿ ಕೋಕೊ ಬೀನ್ಸ್ ಅನ್ನು ಹುರಿದು ಹಿಟ್ಟು ಮಾಡಿ, ಅದಕ್ಕೆ ರವೆ, ಸಕ್ಕರೆ ಸೇರಿಸಿ ತಯಾರಿಸುವ ಕಣಕದಿಂದ 130 ಹೋಳಿಗೆ ಸಿದ್ಧಪಡಿಸಬಹುದು. ಕಳೆದ ವರ್ಷ ಮಾಡಿದ್ದ ಹಲಸಿನ ಹೋಳಿಗೆಯೂ ಗ್ರಾಹಕರ ಮನಗೆದ್ದಿತ್ತು’ ಎಂದರು.
***
ತೋಟದಲ್ಲಿ ಲಭ್ಯವಾಗುವ ಬೇರೆ ಬೇರೆ ಕೃಷಿ ಉತ್ಪನ್ನಗಳಿಂದ ಹೊಸ ತಿನಿಸು ತಯಾರಿಸಿ ಮಾರುಕಟ್ಟೆ ಮೌಲ್ಯ ಹೆಚ್ಚಿಸುವ ಯೋಚನೆ ಇದೆ.
- ಶ್ರೀಕೃಷ್ಣ ಶಾಸ್ತ್ರಿ, ಪಾಕತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.