ADVERTISEMENT

ಜಗತ್ತಿನ 50 ಅತ್ಯುತ್ತಮ ಚಿಕನ್ ಖಾದ್ಯಗಳ ಪಟ್ಟಿ ಬಿಡುಗಡೆ: ಭಾರತದ 4ಕ್ಕೆ ಸ್ಥಾನ

ಸ್ಥಳೀಯ ಹಾಗೂ ಜಾಗತಿಕ ಮಟ್ಟದ ಆಹಾರ ಸಂಸ್ಕೃತಿಯ ಬಗ್ಗೆ ಮಾಹಿತಿ ಬಿತ್ತರಿಸುವ ಟೇಸ್ಟ್ ಅಟ್ಲಾಸ್ ವೆಬ್‌ಸೈಟ್ ಜಗತ್ತಿನ 50 ಅತ್ಯುತ್ತಮ ಚಿಕನ್ ಖಾದ್ಯಗಳ ಪಟ್ಟಿ ಬಿಡುಗಡೆ ಮಾಡಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2024, 12:58 IST
Last Updated 31 ಆಗಸ್ಟ್ 2024, 12:58 IST
<div class="paragraphs"><p>ಬಟರ್ ಚಿಕನ್</p></div>

ಬಟರ್ ಚಿಕನ್

   

ಬೆಂಗಳೂರು: ಸ್ಥಳೀಯ ಹಾಗೂ ಜಾಗತಿಕ ಮಟ್ಟದ ಆಹಾರ ಸಂಸ್ಕೃತಿಯ ಬಗ್ಗೆ ಮಾಹಿತಿ ಬಿತ್ತರಿಸುವ ಟೇಸ್ಟ್ ಅಟ್ಲಾಸ್ ವೆಬ್‌ಸೈಟ್ ಜಗತ್ತಿನ 50 ಅತ್ಯುತ್ತಮ ಚಿಕನ್ ಖಾದ್ಯಗಳ ಪಟ್ಟಿ ಬಿಡುಗಡೆ ಮಾಡಿದೆ.

ಆ ಪ್ರಕಾರ ಈ ಪಟ್ಟಿಯಲ್ಲಿ ಭಾರತದ ನಾಲ್ಕು ಚಿಕನ್ ಖಾದ್ಯಗಳೂ ಸ್ಥಾನ ಪಡೆದಿವೆ. ಭಾರತವು ಬಗೆ ಬಗೆಯ ಚಿಕನ್ ಖಾದ್ಯಗಳ ತವರೂರಾಗಿದೆ.

ADVERTISEMENT

ಭಾರತದ ಬಟರ್ ಚಿಕನ್ ನಾಲ್ಕನೇ ಸ್ಥಾನ, ಚಿಕನ್ ಟಿಕ್ಕಾ 6ನೇ ಸ್ಥಾನ, ಚಿಕನ್ 65 10 ನೇ ಸ್ಥಾನ ಮತ್ತು ತಂದೂರಿ ಚಿಕನ್ 18ನೇ ಸ್ಥಾನ ಪಡೆದಿವೆ.

ಪಟ್ಟಿಯಲ್ಲಿ ಕೋರಿಯನ್ ಫ್ರೈಡ್ ಚಿಕನ್ ಮೊದಲನೇ ಸ್ಥಾನ ಪ‍ಡೆದಿದ್ದು ಜಗತ್ತಿನ ಅತ್ಯುತ್ತಮ ಚಿಕನ್ ಖಾದ್ಯ ಎಂದು ಟೇಸ್ಟ್ ಅಟ್ಲಾಸ್ ಹೇಳಿದೆ.

ಈ ಎಲ್ಲ 50 ಚಿಕನ್ ಖಾದ್ಯಗಳು ಜಗತ್ತಿನ ಬೇರೆ ಬೇರೆ ದೇಶಕ್ಕೆ ಸಂಬಂಧಿಸಿವೆ. ಅತ್ಯುತ್ತಮ ರೇಟಿಂಗ್ ಹೊಂದಿರುವ ಖಾದ್ಯಗಳ ಪಟ್ಟಿಯನ್ನು ಟೇಸ್ಟ್ ಅಟ್ಲಾಸ್ ವೆಬ್‌ಸೈಟ್ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.