ವೈರಸ್‌ಗಳಿಂದ ಜ್ವರ ಬರುವುದು ಹೊಸತೇನಲ್ಲ. ಡೆಂಗು, ಚಿಕನ್‌ಗುನ್ಯಾ ಮುಂತಾದ ಜ್ವರಗಳು ಹರಡಿ ಅನೇಕರನ್ನು ಬಲಿ ತೆಗೆದುಕೊಂಡಿವೆ. ಸಾಂಕ್ರಾಮಿಕವಾಗಿ ಇಂತಹ ಜ್ವರ ಬಂದು ಒಂದು ಪ್ರದೇಶದ ಜನರು ಸಾವನ್ನಪ್ಪುವಂತೆ ಮಾಡುವುದನ್ನು ‘ಜನಪದೋಧ್ವಂಸರೋಗ’ಗಳೆಂದು ಆಯುರ್ವೇದದಲ್ಲಿ ಹೆಸರಿಸಲಾಗಿದೆ. ನಿಫಾ ಸೋಂಕಿನ ಜ್ವರಕ್ಕೆ ಯಾವುದೇ ವೈಜ್ಞಾನಿಕವಾಗಿ ಸಿದ್ಧವಾದ ಔಷಧಗಳಾಗಲೀ ಅಥವಾ ಲಸಿಕೆಗಳಾಗಲೀ ಸದ್ಯಕ್ಕೆ ಲಭ್ಯವಿಲ್ಲ.
ಇಂತಹ ಆತಂಕದ ಪರಿಸ್ಥಿತಿಯಲ್ಲಿ ನಮ್ಮ ದೇಶದ ವೈದ್ಯ ಪದ್ಧತಿಯಾದ ಆಯುರ್ವೇದದ ಗ್ರಂಥಗಳಲ್ಲಿ ತಿಳಿಸಿರುವ ಪ್ರತಿಬಂಧಕ ಉಪಾಯಗಳನ್ನು ಬಳಸಬಹುದಾಗಿದೆ. ಎಳೆಯ ಮಕ್ಕಳಿಗೆ ನೆಗಡಿ, ನ್ಯುಮೋನಿಯ ಮುಂತಾದವು ಬರದಂತೆ ವಾಯುವಿಡಂಗ (ಕ್ರಿಮಿಘ್ನ), ಅರಿಸಿನ (ವೈಜ್ಞಾನಿಕವಾಗಿ ವೈರಸ್ ಕೊಲ್ಲುವ ಗುಣ ಡೃಡಪಟ್ಟಿದೆ), ಬೇವಿನ ಎಲೆ (ತುಳಸಿ, ಬೇವುಗಳಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಲೆ ತಲಾಂತರಗಳಿಂದ ಜನರು ಗುರುತಿಸಿದ್ದಾರೆ) ಧೂಪವನ್ನು ಹಾಕುತ್ತಿದ್ದರು.
ರೋಗಿಗಳು ಬಳಸುವ ಬಟ್ಟೆಗಳನ್ನು ಬೇವಿನ ಕಷಾಯದಲ್ಲಿ ಅದ್ದಿ ಒಣಗಿಸಬೇಕು.
ಜ್ವರ ಪೀಡಿತರು ತುಳಸಿ ನೀರನ್ನು ಕುಡಿಯಬೇಕು.
ಜ್ವರ ಹರಡಿರುವ ಪ್ರದೇಶದಲ್ಲಿರುವ ಆರೋಗ್ಯವಂತರು ನಿತ್ಯವೂ ನೆಲ್ಲಿಕಾಯಿಯನ್ನು ಬಳಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಜ್ವರ, ಉಸಿರಾಟದ ತೊಂದರೆಗಳು ಮುಂತಾದ ಲಕ್ಷಣಗಳು ಕಂಡು ಬಂದರೆ ಆಯುರ್ವೇದ ವೈದ್ಯರ ಸಲಹೆಯಂತೆ ಅಮೃತಾರಿಷ್ಟ, ಅಮೃತೋತ್ತರ ಕಷಾಯ, ಬಿಲ್ವಾದಿ ಗುಟಿಕಾ, ಸಂಜೀವಿನಿ ವಟಿಗಳನ್ನು ಬಳಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.