ಹದಿಹರೆಯದವರಲ್ಲಿ ತಮ್ಮ ಸೌಂದರ್ಯದ ಬಗ್ಗೆ ಬಹಳಷ್ಟು ಆತಂಕ, ಕುತೂಹಲ ವಿರುತ್ತದೆ. ಅದರಲ್ಲೂ ಅವರನ್ನು ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ತಮ್ಮ ತೂಕದ ಕುರಿತಾದುದು. ಸ್ಥೂಲಕಾಯದವರಲ್ಲಿ ಬೇಗ ತೂಕ ಇಳಿಸಿಕೊಳ್ಳುವ ಆಸೆಯಿದ್ದರೆ, ತೆಳುವಾಗಿರುವವರಿಗೆ ತಾವು ಯಾವಾಗ ದಪ್ಪ ಆಗ್ತಿವೋ ಎಂಬ ಆತಂಕ.
ಸುತ್ತಲಿನವರೆಲ್ಲರ ಟೀಕೆ-ಟಿಪ್ಪಣಿಗಳಿಗೆ ಹೆದರಿ ಅವರ ಮನಸ್ಸು ಈ ರೀತಿ ದೇಹ ತೂಕದ ಬಗ್ಗೆ ಯೋಚಿಸುತ್ತದೆ. ಎಷ್ಟೋ ಬಾರಿ ಅವರು ವಯೋಸಹಜ ತೂಕ ಹೊಂದಿದ್ದರೂ ಸಹ ಮನಸ್ಸಿನಲ್ಲಿ ಮಾತ್ರ ಈ ಸಮಸ್ಯೆ ಕಾಡುತ್ತಿರುತ್ತದೆ. ತಾವು ದಪ್ಪಗಿದ್ದೇವೆಂಬ ಭಾವನೆ ಬಂದರಂತೂ ಅವರ ಮನಸ್ಸು ತೂಕ ಕಡಿಮೆಮಾಡಲು ಉಪವಾಸದಂತಹ ಕಾರ್ಯಕ್ಕೆ ಪ್ರೇರೇಪಿಸುತ್ತಿರುತ್ತದೆ. ಈ ತೊಂದರೆ ಬರುವಲ್ಲಿ ವಂಶವಾಹಿನಿಗಳ ಪಾತ್ರ ವಿದ್ದರೂ ಹೆಚ್ಚಾಗಿ ಸಾಮಾಜಿಕ ಅಥವಾ ಪರಿಸರದ ಪ್ರಭಾವವೇ ಜಾಸ್ತಿ. ಪಾಶ್ಚಿಮಾತ್ಯ ದೇಶಗಳಲ್ಲಂತೂ ಇದು ಸಾಮಾನ್ಯವಾಗಿದೆ.
ಆರೋಗ್ಯಕರ ತೂಕಕ್ಕಾಗಿ...
ಕೆಲವು ದಿನಗಳವರೆಗೆ ಅತಿಯಾಗಿ ತಿನ್ನುವುದನ್ನು ರೂಢಿಸಿಕೊಂಡು, ತಾವು ದಪ್ಪವಾಗುತ್ತಿದ್ದೇವೆಂಬ ಭಾವನೆ ಬಂದೊಡನೆ ಉಪವಾಸ ಮಾಡಲು ಪ್ರಾರಂಭಿಸಬಾರದು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುತ್ತಿರಿ. ರಾತ್ರಿ ವೇಳೆ ಮಿತಾಹಾರ ಸೇವಿಸಿ. ತರಕಾರಿಯುಕ್ತ ಆಹಾರ ಸೇವನೆ ಆರೋಗ್ಯಕರ, ಊಟದ ನಂತರ ಹಣ್ಣುಗಳ ಸೇವನೆ ಅತ್ಯವಶ್ಯಕ.
ನಿಮ್ಮ ಮನೆಯಲ್ಲಿಯೂ ಹರೆಯದ ಯುವ ಮನಸ್ಸುಗಳಿದ್ದರೆ, ಅವರೂ ಸಹ ಇಂತಹ ತೂಕಸಂಬಂಧಿ ಅನೂರೂಕ್ಸಿಯಾ, ಬುಲೀಮಿಯಾದಂತಹ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರಬಹುದು ಮತ್ತು ಅದನ್ನು ನಿಮ್ಮಲ್ಲಿ ಹೇಳಿಕೊಳ್ಳಲಾಗದೇ ಚಡಪಡಿಸುತ್ತಿರಬಹುದು. ಅವರೊಂದಿಗೆ ಇವೆಲ್ಲವುಗಳ ಕುರಿತು ಮುಕ್ತವಾಗಿ ಚರ್ಚಿಸಿ, ಆಪ್ತ ಸಮಾಲೋಚಕರನ್ನು ಭೇಟಿ ಮಾಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.