ADVERTISEMENT

ಇಂದು ವಿಶ್ವ ಆಟಿಸಂ ಜಾಗೃತಿ ದಿನ: ಆಟಿಸಂ ವೈಕಲ್ಯವಲ್ಲ, ವಿಶೇಷ ಸಾಮರ್ಥ್ಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 11:58 IST
Last Updated 2 ಏಪ್ರಿಲ್ 2022, 11:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಏಪ್ರಿಲ್ 2ರಂದು ವಿಶ್ವ ಆಟಿಸಂ ಜಾಗೃತಿ ದಿನ ಆಚರಿಸಲಾಗುತ್ತದೆ. ಬಾಲ್ಯದಲ್ಲಿಯೇ ಮಕ್ಕಳಿಗೆಆಟಿಸಂ ಕಾಣಿಸಿಕೊಳ್ಳುತ್ತದೆ. ಈ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಗತಿಕವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಆಟಿಸಂ ಎಂದರೆ ಜೀವಿತಾವಧಿಯಲ್ಲಿ ಅನುಭವಿಸುವ ವಿಕಲತೆಯಾಗಿದೆ. ಆಟಿಸಂಗೆ ಒಳಗಾಗಿರುವ ಮಕ್ಕಳ ಪಾಲನೆ, ಅವರಿಗೆ ನೀಡಬೇಕಾದ ತರಬೇತಿಗಳು, ಥೆರಪಿ ಬಗ್ಗೆ ಈ ದಿನಸಾಮಾಜಿಕಸಂಸ್ಥೆಗಳು, ವೈದ್ಯಕೀಯ ಸಂಸ್ಥೆಗಳು ಜಾಗೃತಿ ಮೂಡಿಸುತ್ತವೆ.

ಆಟಿಸಂ ಕುರಿತು..

ನರಗಳ ಸಮಸ್ಯೆ ಹೊಂದಿರುವ ಮಕ್ಕಳು ಬಾಲ್ಯದಲ್ಲೇ ಆಟಿಸಂಗೆ (ಸ್ವಲೀನತೆ) ಒಳಗಾಗುತ್ತಾರೆ. ತನ್ನಲ್ಲಿ ತಾನು, ತನ್ನಷ್ಟಕ್ಕೆ ಮಗ್ನವಾಗುವುದು. ಯಾವುದರ ಪರಿವೆ ಇರದಿರುವುದು. ತುಂಟತನ, ಕೋಪ, ಮಾಡಿದ್ದನ್ನೇ ಮಾಡುವುದು ಇವು ಆಟಿಸಂನ ಲಕ್ಷಣಗಳು. ಸಂಶೋಧನೆಗಳ ಪ್ರಕಾರ, ಅನುವಂಶೀಯತೆ, ರಕ್ತ ಸಂಬಂಧದ ಮದುವೆ, ಹೆಣ್ಣುಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮದುವೆ, ಬೇಗ ಗರ್ಭ ಧರಿಸುವುದು, ಹೆರಿಗೆ ಸಮಯದಲ್ಲಿ ತೊಂದರೆ, ತೂಕ ಕಡಿಮೆ ಇರುವುದರಿಂದ, ಅವಳಿ, ತ್ರಿವಳಿಗಳ ಗರ್ಭವತಿಯಾಗುವುದರಿಂದ ಕೂಡ ಆಟಿಸಂ ತೊಂದರೆಗೆ ಕಾರಣವಾಗಬಹುದು. ಅಲ್ಪ ಪ್ರಮಾಣದ ಆಟಿಸಂನಲ್ಲಿ ಸ್ಪಷ್ಟ ಮಾತಿನ ಕೌಶಲದ ಕೊರತೆ ಇರುತ್ತದೆ. ಮಾತು ಮತ್ತು ವರ್ತನೆಗಳಲ್ಲಿ ಪರಸ್ಪರ ಪ್ರತಿಕ್ರಿಯೆಯ ತೊಂದರೆಗಳನ್ನು ಕಾಣಬಹುದು. ಕೇಳಿದ ಪ್ರಶ್ನೆಗಳಿಗೆ ತಕ್ಷಣ ಉತ್ತರ ಕೊಡುವುದಿಲ್ಲ. ಜೋರಾದ ಶಬ್ದ, ಅತಿ ಬೆಳಕಿನ ಕಿರಣಗಳಿಗೆ ಹೊಂದಿಕೊಳ್ಳಲು ತೊಂದರೆಯನ್ನು ಅನುಭವಿಸುತ್ತಾರೆ.

ತೀವ್ರತರನಾದ ಆಟಿಸಂ ಬಗ್ಗೆ ತಿಳಿಯುವುದಾದರೆ, ಇವರಲ್ಲಿ ಮಾತಿನ ತೊಂದರೆ, ಕನಿಷ್ಠ ಶಬ್ದಗಳ ಉಚ್ಛಾರವೂ ಇರುವುದಿಲ್ಲ. ಬೌದ್ಧಿಕ ಮಟ್ಟವೂ ಅಲ್ಪಪ್ರಮಾಣದ್ದಾಗಿರುತ್ತದೆ. ಮುಖಕೊಟ್ಟು ಮಾತನಾಡುವುದಿಲ್ಲ. ಕಾರಣವಿಲ್ಲದ ನಗು, ಅಳು, ನೋವು ನಲಿವು, ನಾಲಿಗೆಯ ಸ್ವಾದ ಇರುವುದಿಲ್ಲ. ಸಂಬಂಧಗಳಿಗೆ ಸ್ಪಂದಿಸುವುದಿಲ್ಲ. ವಸ್ತುಗಳಿಗೆ ಕಿತ್ತಾಡುವುದು ಕಂಡುಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.