ADVERTISEMENT

ಅಸಹಜ ಹೃದಯ ಬಡಿತವಿದೆಯೇ?

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 23:31 IST
Last Updated 27 ಸೆಪ್ಟೆಂಬರ್ 2024, 23:31 IST
<div class="paragraphs"><p>ಹೃದಯ ಬಡಿತ</p></div>

ಹೃದಯ ಬಡಿತ

   

– ಐಸ್ಟಾಕ್ ಚಿತ್ರ

ದೇಹವನ್ನು ಸದಾ ಚಾಲ್ತಿಯಲ್ಲಿಡುವ ಎಂಜಿನ್‌ ಈ ಹೃದಯ. ಸಾಂಕ್ರಾಮಿಕವಲ್ಲದೇ ಇದ್ದರೂ ಈಚೆಗೆ ವಯೋಬೇಧವಿಲ್ಲದೇ ಹೃದ್ರೋಗ‌ ಹೆಚ್ಚುತ್ತಿವೆ. ಹೃದಯದ ಬಡಿತಕ್ಕೊಂದು ಲಯವಿದೆ. ಅದರಲ್ಲಿ ವ್ಯತ್ಯಾಸ ಉಂಟಾದರೆ ಆಗುವ ಅನಾಹುತಗಳು ದೊಡ್ಡದು.

ADVERTISEMENT

ಅಸಹಜ ಹೃದಯಬಡಿತದ ಬಗ್ಗೆ ತಿಳಿದುಕೊಳ್ಳಬೇಕಾದದ್ದು:

ಅಸಹಜ ಹೃದಯ ಬಡಿತದಲ್ಲಿ ಎರಡು ವಿಧ. ಒಂದು ಅತಿ ವೇಗದ ಬಡಿತ (ಟಾಕಿಕಾರ್ಡಿಯಾ). ಮತ್ತೊಂದು ನಿಧಾನಗತಿಯ ಬಡಿತ ಅಥವಾ ಅನಿಯಮಿತ ಬಡಿತ (ಬ್ರಾಡಿಕಾರ್ಡಿಯಾ). ಪ್ರತಿ ನಿಮಿಷಕ್ಕೆ 100ಕ್ಕೂ ಹೆಚ್ಚು ಬಡಿತಗಳಿದ್ದರೆ ಅದನ್ನು ಟಾಕಿಕಾರ್ಡಿಯಾ ಎನ್ನಲಾಗುತ್ತದೆ. ಗಂಟೆಗೆ 60ಕ್ಕಿಂತ ಕಡಿಮೆ ಬಡಿತಗಳಿದ್ದರೆ ಬ್ರಾಡಿಕಾರ್ಡಿಯಾ ಎನ್ನಲಾಗುತ್ತದೆ. ಈ ಎರಡೂ ಪರಿಸ್ಥಿತಿಯಲ್ಲಿ ಹೃದಯವು ಸಾಕಷ್ಟು ರಕ್ತಕವನ್ನು ಪಂಪ್‌ ಮಾಡಲು ಕಷ್ಟಪಡುತ್ತದೆ. ಅಕಾಲಿಕ ಹೃದಯ ಬಡಿತಗಳು ಕೆಲವೊಮ್ಮೆ ಹಾನಿಕಾರಕ ಎನಿಸದೇ ಇದ್ದರೂ ಹೃದಯ ಸೇರಿದಂತೆ ಇತರೆ ಅಂಗಾಂಗಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವನ್ನು ಉಂಟು ಮಾಡುತ್ತದೆ.

ಆಂಜಿನಾ ಹೀಗಂದರೇನು?

ಹೃದಯಕ್ಕೆ ಸಾಕಷ್ಟು ಆಮ್ಲಜನಕಯುಕ್ತ ರಕ್ತ ಪೂರೈಕೆಯಾಗದ ಸ್ಥಿತಿಯನ್ನು ಆಂಜಿನಾ ಎಂದು ಕರೆಯಲಾಗುತ್ತದೆ. ಇದರಿಂದ ಎದೆನೋವು ಅಥವಾ ಅಸ್ವಸ್ಥತತೆ ಉಂಟಾಗುತ್ತದೆ. ಹೃದಯ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದು ರೋಗ ಅಲ್ಲದೇ ಇರಬಹುದು. ಆದರೆ,ಅಪಧಮನಿಯಲ್ಲಿ ಮುಂದೆ ಉಂಟಾಗುವ ತೊಂದರೆಗಳ ಸೂಚನೆಯೂ ಆಗಿರಬಹುದು. ನಿಯಮಿತವಾಗಿ ಇಂಥ ಸಮಸ್ಯೆ ಉಂಟಾಗುತ್ತಿದ್ದೆ ಹೃದಯದ ಸ್ನಾಯುಗಳಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆ ಹೆಚ್ಚು.

ಅಸಹಜ ಹೃದಯ ಬಡಿತದಿಂದಾಗುವತೊಂದರೆಗಳು

  • ರಕ್ತ ಪಂಪಿಂಗ್‌ ಸಮರ್ಪಕವಾಗಿ ಆಗದೇ ಇರುವುದರಿಂದ ಹೃದಯ ಕಾರ್ಯದಕ್ಷತೆ ಕಡಿಮೆಯಾಗುತ್ತದೆ

  • ಹೃದಯ ಆಮ್ಲಜನಕಯುಕ್ತ ರಕ್ತದ ಪೂರಕೈಯನ್ನು ಕಡಿಮೆ ಮಾಡುತ್ತದೆ.

  • ಅ‍ಪ‍ಧಮನಿ ಹಾಗೂ ಅಭಿದಮನಿ ಪ್ರಕ್ರಿಯೆಗೆ ತೊಡಕು ಉಂಟಾಗುತ್ತದೆ. ದೇಹದಲ್ಲಿ ಅಧಿಕ ರಕ್ತದೊತ್ತಡ ಉಂಟಾಗಿ ಹೃದಯ ಆಯಾಸಗೊಳ್ಳುತ್ತದೆ.

  • ಹೃದಯಕ್ಕೆ ಸಂಬಂಧಿಸಿದ ನಾಳಗಳಲ್ಲಿಯೂ ರಕ್ತದ ಹರಿವು ಸಮರ್ಪಕವಾಗಿ ಆಗುವುದಿಲ್ಲ.

ದೀರ್ಘಕಾಲದ ಒತ್ತಡ, ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದಯ ವೈಫಲ್ಯದ ವ್ಯಕ್ತಿಗಳಲ್ಲಿ ಅನಿಯಮಿತ ಹೃದಯ ಬಡಿತ ಇರುತ್ತದೆ. ಹೈಪರ್‌ಟ್ರೋಫಿಕ್‌ ಕಾರ್ಡಿಯೋಮಿಯೊ, ಊರಿಯೂತ, ಹೃದಯ ಕವಾಟದಲ್ಲಿನ ಸಮಸ್ಯೆಗಳು ಉಂಟಾಗಬಹುದು. ಅತಿಯಾದ ಧೂಮಪಾನಿಗಳಲ್ಲಿ, ವಯಸ್ಸಾದವರಲ್ಲಿ, ಸ್ಥೂಲಕಾಯ ಹೊಂದಿದವರಲ್ಲಿ ಹೃದಯ ಬಡಿತ ಸಮಸ್ಯೆ ಇರುತ್ತದೆ.

ಹೃದ್ರೋಗ ತಡೆಗಟ್ಟುವುದು ಹೇಗೆ?


ನಿಯಮಿತ ತಪಾಸಣೆ: ನಿಯಮಿತ ತಪಾಸಣೆಯಿಂದ ಹೃದ್ರೋಗಗಳನ್ನು ಮೊದಲೇ ಪತ್ತೆ ಹಚ್ಚಿ, ನಿಗದಿತ ಔಷಧ ಪಡೆಯಬಹುದು.
ಆರೋಗ್ಯಕರ ಜೀವನಶೈಲಿ: ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಸೇವನೆ ಜತೆಗೆ ನಿಯಮಿತ ವ್ಯಾಯಾಮವನ್ನು ಮಾಡಬೇಕು.
ಔಷಧಿಗಳಿಗೆ ಬದ್ಧರಾಗಿರಿ: ರೋಗಲಕ್ಷಣಗಳು ಸುಧಾರಿಸಿದಾಗ ಔಷಧಿಗಳನ್ನು ನಿಲ್ಲಿಸುವುದು ತಪ್ಪು. ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ವೈದ್ಯರು ನೀಡುವ ಔಷಧಿಗಳನ್ನು ಸೇವಿಸಿ.
ಒತ್ತಡ ನಿಯಂತ್ರಣದಲ್ಲಿರಲಿ: ಒತ್ತಡಮುಕ್ತವಾಗಿ ಬದಕಲು ಪ್ರಯತ್ನಿಸಿ. ಯೋಗ, ವ್ಯಾಯಾಮ ಅಥವಾ ನಡಿಗೆಯಂಥ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.


ಲೇಖಕರು: ಹೃದ್ರೋಗತಜ್ಞರು, ಸಾಕ್ರಾ ವರ್ಲ್ಡ್‌ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.