ನವದೆಹಲಿ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕವಾಟವಿರುವ ರೆಸ್ಪಿರೇಟರ್ ಎನ್–95 ಮಾಸ್ಕ್‌ಗಳು ಅಸಮರ್ಥವಾಗಿದ್ದು, ಅವುಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು ಎಂದುಕೇಂದ್ರ ಸರ್ಕಾರ ಹೇಳಿದೆ.
ಮನೆಯಲ್ಲಿ ತಯಾರಿಸಿದ ಮಾಸ್ಕ್‌ಗಳೇ ವೈರಸ್ ಹರಡುವುದನ್ನು ತಡೆಗಟ್ಟಿವೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ರಾಜೀವ್ ಗಾರ್ಗ್ ರಾಜ್ಯ ಸರ್ಕಾರಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ವೈರಸ್‌ಗಳು ತಪ‍್ಪಿಸಿಕೊಳ್ಳದಂತೆ ಮಾಸ್ಕ್ ತಡೆಯಬೇಕಿತ್ತು. ಆದರೆ, ವೈರಾಣುಗಳು ತಪ್ಪಿಸಿಕೊಳ್ಳುತ್ತಿವೆ. ಎನ್–95 ಮಾಸ್ಕ್‌ಗಳ ಬದಲಾಗಿ ಮುಖವನ್ನು ಮುಚ್ಚಿಕೊಳ್ಳಲು ಮನೆಯಲ್ಲಿಯೇ ತಯಾರಿಸಿದ ಮುಖಗವಸು ಬಳಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ಎನ್–95 ಮಾಸ್ಕ್ ತಯಾರಿಕೆಯಲ್ಲಿ ಪಾಲಿಸಿಲ್ಲ. ನಾನು ಮೂರು ಪದರಗಳುಳ್ಳ ಹತ್ತಿಯಿಂದ ಮಾಡಿರುವ ಮಾಸ್ಕ್ ಅನ್ನು ಬಳಸುತ್ತಿದ್ದೇನೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.